Atharva MS Dhoni: ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಏನಿದು? ಇಲ್ಲಿದೆ ಹೊಸ ಸಮಾಚಾರ

| Updated By: Digi Tech Desk

Updated on: Feb 03, 2022 | 12:51 PM

Atharva The Origin | Graphics Novel: ಖ್ಯಾತ ಕ್ರಿಕೆಟ್ ತಾರೆ ಮಹೇಂದ್ರ ಸಿಂಗ್ ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಏನಿದರ ವಿಶೇಷ? ಇಲ್ಲಿದೆ ಪೂರ್ಣ ಮಾಹಿತಿ.

Atharva MS Dhoni: ಮಾಸ್ ಅವತಾರದಲ್ಲಿ ಕಾಣಿಸಿಕೊಂಡ ಧೋನಿ; ಏನಿದು? ಇಲ್ಲಿದೆ ಹೊಸ ಸಮಾಚಾರ
‘ಅಥರ್ವ’ದಲ್ಲಿ ಎಂಎಸ್ ಧೋನಿ ಮಾಸ್ ಗೆಟಪ್
Follow us on

ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಹೊಸ ಗೆಟಪ್ ತೊಟ್ಟಿದ್ದಾರೆ. ಹೌದು. ಇದನ್ನು ನೋಡಿದ ಫ್ಯಾನ್ಸ್​ಗೆ ಅಚ್ಚರಿಯಾಗಿದ್ದು, ಯಾವ ಹೀರೋಗೂ ಕಮ್ಮಿ ಇಲ್ಲದಂತೆ ಧೋನಿ ಕಾಣಿಸಿಕೊಂಡಿದ್ದಾರೆ. ಈ ಕುರಿತು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಧೋನಿ, ಟೀಸರ್ ಒಂದನ್ನು ಹಂಚಿಕೊಂಡಿದ್ದಾರೆ. ಏನಿದು ಟೀಸರ್? ಧೋನಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಏಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಧೋನಿ ಕಾದಂಬರಿಯ ಪಾತ್ರವಾಗಿದ್ದಾರೆ. ಇದು ನೀವಂದುಕೊಂಡಂತಹ ಮಾಮೂಲಿ ಕಾದಂಬರಿಯಲ್ಲ. ಹೊಸ ತಲೆಮಾರಿನ ಗ್ರಾಫಿಕ್ಸ್ ಕಾದಂಬರಿ (Graphics Novel). ಒಂದು ರೀತಿಯಲ್ಲಿ ಆನಿಮೇಟಡ್ ಚಿತ್ರಕ್ಕೆ ಸಮೀಪ ಎನ್ನಬಹುದು. ಆದರೆ ಇಲ್ಲಿ ಪಾತ್ರಗಳು ಕಾದಂಬರಿಯ ರೂಪದಲ್ಲಿರುತ್ತವೆ. ಇದೀಗ ‘ಅಥರ್ವ ದಿ ಒರಿಜಿನ್’ (Atharva: The Origin) ಎಂಬ ಗ್ರಾಫಿಕ್ಸ್ ಕಾದಂಬರಿಯಲ್ಲಿ ಎಂಎಸ್ ಧೋನಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಥಾತ್ ‘ಅಥರ್ವ’ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಟೀಸರ್ ಬಿಡುಗಡೆ ಮಾಡಲಾಗಿದೆ.

ಎಂಎಸ್ ಧೋನಿ ‘ಅಥರ್ವ’ದಲ್ಲಿ ಕಾಣಿಸಿಕೊಂಡಿದ್ದು ಹೀಗೆ:

ಪ್ರಾಜೆಕ್ಟ್ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಧೋನಿ, ‘‘ಈ ಯೋಜನೆಯ ಭಾಗವಾಗಲು ಬಹಳ ಉತ್ಸುಕನಾಗಿದ್ದೇನೆ’’ ಎಂದು ಹೇಳಿದ್ದಾರೆ. ಅಥರ್ವ – ದಿ ಒರಿಜಿನ್ ಆಕರ್ಷಕವಾದ ಕಥೆ ಮತ್ತು ತಲ್ಲೀನಗೊಳಿಸುವ ಚಿತ್ರಗಳೊಂದಿಗೆ ಆಕರ್ಷಕ ಗ್ರಾಫಿಕ್ ಕಾದಂಬರಿಯಾಗಿದೆ. ಪ್ರಸ್ತುತಕ್ಕೆ ಹೊಂದಿಕೆಯಾಗುವಂತೆ ಪೌರಾಣಿಕ ಸೂಪರ್ ಹೀರೋವನ್ನು ಲೇಖಕ ರಮೇಶ್ ತಮಿಳ್​ಮಣಿ ಸೃಷ್ಟಿಸಿದ್ದಾರೆ.

ಓದುಗರ ಮನಸೆಳೆಯುವಂತೆ ಮಾಡಲು ಸಂಪೂರ್ಣ ಫ್ಯಾಂಟಸಿ ಲೋಕವನ್ನು ಸೃಷ್ಟಿಸಿದೆ ‘ಅಥರ್ವ’ ತಂಡ. ಇದರಲ್ಲಿ 150ಕ್ಕೂ ಅಧಿಕ ಪಾತ್ರಗಳಿದ್ದು, ವ್ಯಕ್ತಿಗಳನ್ನು ಆಧರಿಸಿ ರಚಿಸಲಾಗಿದೆ. ಇದರಿಂದ ಓದುಗರಿಗೆ ಮತ್ತಷ್ಟು ಕುತೂಹಲ ಹಾಗೂ ರೋಚಕತೆಯನ್ನು ‘ಅಥರ್ವ’ ನೀಡಲಿದೆ. ‘ಅಥರ್ವ: ದಿ ಒರಿಜಿನ್’ನ ಲೇಖಕ ರಮೇಶ್ ತಮಿಳ್​ಮಣಿ. ಎಂವಿಎಮ್ ವೇಲ್ ಮೋಹನ್ ಈ ಪ್ರಾಜೆಕ್ಟ್​​ನ ಉಸ್ತುವಾರಿಯನ್ನು ಹೊತ್ತಿದ್ದಾರೆ. ವಿರ್ಜು ಸ್ಟುಡಿಯೋಸ್ ಈ ಪ್ರಾಜೆಕ್ಟ್​ನ ವಿನ್ಯಾಸದ ಜವಾಬ್ದಾರಿ ಹೊತ್ತಿದೆ. ಇದಕ್ಕೆ ಮಿದಾಸ್ ಪ್ರೈವೇಟ್ ಲಿಮಿಟೆಡ್ ಸಹಕಾರ ನೀಡಿದೆ. ಸದ್ಯ ಈ ಟೀಸರ್ ಕಾದಂಬರಿ ಹೇಗಿರಬಹುದು ಎಂಬುದರ ಕುರಿತು ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:

ಎಂ.ಎಸ್ ​ಧೋನಿಯನ್ನು ಭೇಟಿಯಾದ ನಟ ಚಿಯಾನ್​ ವಿಕ್ರಮ್​; ಫೋಟೋ ನೋಡಿ ಸಂತಸಗೊಂಡ ಅಭಿಮಾನಿಗಳು

‘ತೈಮೂರ್​ ಜತೆಗೂ ಅಕ್ಷಯ್​ ಸಿನಿಮಾ ಮಾಡ್ತಾರೆ’; ಕರೀನಾ​ ಹೇಳಿದ ಈ ಮಾತು ನಿಜವೋ? ತಮಾಷೆಯೋ?

Published On - 6:19 pm, Wed, 2 February 22