ಕೆಲ ಸೆಲೆಬ್ರಿಟಿಗಳು ಏನೇ ಮಾಡಿದರೂ ಲಾಭದ ಉದ್ದೇಶದಿಂದಲೇ ಮಾಡುತ್ತಾರೆ. ಏನು ಮಾಡಿದರೆ ಲಾಭ ಮಾಡಬಹುದು ಎಂದು ಲೆಕ್ಕ ಹಾಕುತ್ತಾರೆ. ಈಗ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಜೋಡಿ ಕೂಡ ಇದನ್ನೇ ಮಾಡಿದೆ. ತಮ್ಮ ಮದುವೆ ಪ್ರಸಾರ ಹಕ್ಕನ್ನು ನೆಟ್ಫ್ಲಿಕ್ಸ್ಗೆ 50 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಟೀಕಿಸಿದ್ದಾರೆ.
ಅಕ್ಕಿನೇನಿ ಕುಟುಂಬದ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ನೆರವೇರಲಿದೆ. ಡಿಸೆಂಬರ್ 4ರಂದು ಈ ವಿವಾಹ ಏರ್ಪಡಲಿದೆ. ಈಗಾಗಲೇ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭ ಆಗಿವೆ. ಆಪ್ತರು ಹಾಗೂ ಕುಟುಂಬದವರು ಮಾತ್ರ ಮದುವೆಗೆ ಹಾಜರಿ ಹಾಕಲಿದ್ದಾರೆ. ಈ ವಿವಾಹದ ಪ್ರಸಾರದ ಹಕ್ಕನ್ನು ನೆಟ್ಫ್ಲಿಕ್ಸ್ಗೆ ಈ ಜೋಡಿ ಮಾರಾಟ ಮಾಡಿದೆ ಎನ್ನಲಾಗಿದೆ.
ಸದ್ಯ ನಾಗ ಚೈತನ್ಯ ಹಾಗೂ ಶೋಭಿತಾ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಒಂದೊಮ್ಮೆ ಇದು ನಿಜವೇ ಆದಲ್ಲಿ ನೆಟ್ಫ್ಲಿಕ್ಸ್ ಕಡೆಯಿಂದಲೇ ಈ ವಿವಾಹದ ವಿಡಿಯೋಗಳು ಹೊರ ಬರಲಿವೆ. ಅದನ್ನು ಹಣ ಕೊಟ್ಟು ವೀಕ್ಷಣೆ ಮಾಡಬೇಕು. ಅಲ್ಲಿಯವರೆಗೆ ಫ್ಯಾನ್ಸ್ಗೆ ವಿವಾಹದ ವಿಡಿಯೋ ನೋಡೋಕೆ ಸಾಧ್ಯವಿಲ್ಲ. ಕಾಲಿವುಡ್ ಸಿನಿಮಾಗಳ ಬಗ್ಗೆ ಅಪ್ಡೇಟ್ ನೀಡುವ ಮನೋಬಲ ವಿಜಯಬಾಲನ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ‘ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಯನ್ನೇ ಮಾರಾಟ ಮಾಡಿದ್ದಾರೆ’ ಎಂದು ಕೆಲವರು ಹೇಳುದ್ದಾರೆ. ‘ಎರಡನೇ ಮದುವೆ ಆಗುವಾಗ ಕೆಲವರಿಗೆ ನಾಚಿಕೆ ಆಗುತ್ತದೆ. ಆದರೆ, ನಾಗ ಚೈತನ್ಯ ಇದನ್ನು ಸಂಭ್ರಮಿಸುತ್ತಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ಇದನ್ನೂ ಓದಿ: ನಾಗ ಚೈತನ್ಯ ಜೊತೆ ಮದುವೆಗೆ ಮುಂಚೆಯೇ ತ್ಯಾಗಕ್ಕೆ ಸಿದ್ಧವಾದ ನಟಿ ಶೋಭಿತಾ ಧುಲಿಪಾಲ
ಈ ಮೊದಲು ಕಾಲಿವುಡ್ ನಟಿ ನಯನಾತಾರಾ ಹಾಗೂ ವಿಘ್ನೇಶ್ ಶಿವನ್ ಕೂಡ ವಿವಾಹದ ವಿಡಿಯೋ ಪ್ರಸಾರದ ಹಕ್ಕನ್ನು ನೆಟ್ಫ್ಲಿಕ್ಸ್ಗೆ ನೀಡಿದ್ದರು. ಎರಡು ವರ್ಷಗಳ ಬಳಿಕ ವಿಡಿಯೋ ಪ್ರಸಾರ ಕಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.