AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಬಗ್ಗೆ ಸುನಿಲ್ ಗ್ರೋವರ್ ಮಿಮಿಕ್ರಿ; ಸಿಟ್ಟಾದ್ರಾ ಸಲ್ಲು?

ಸಲ್ಮಾನ್ ಖಾನ್ ಅವರು ಸುನಿಲ್ ಗ್ರೋವರ್ ರೀತಿ ಕಾಣಿಸಿಕೊಳ್ಳುತ್ತಾರೆ. ಅವರ ರೀತಿಯೇ ಮಿಮಿಕ್ರಿ ಮಾಡಿದ್ದು ಇದೆ. ವಿಶೇಷ ಎಂದರೆ ಸಲ್ಮಾನ್ ಖಾನ್ ಎದುರೇ ಅವರು ಈ ರೀತಿಯ ಮಿಮಿಕ್ರಿ ಮಾಡಿ ತೋರಿಸಿದ್ದೂ ಇದೆ. ಈ ವಿಚಾರವಾಗಿ ಸಲ್ಮಾನ್ ಖಾನ್​ಗೆ ಖುಷಿ ಇದೆ. ಈ ವಿಚಾರವನ್ನು ಸುನಿಲ್ ಗ್ರೋವರ್ ಅವರು ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಬಗ್ಗೆ ಸುನಿಲ್ ಗ್ರೋವರ್ ಮಿಮಿಕ್ರಿ; ಸಿಟ್ಟಾದ್ರಾ ಸಲ್ಲು?
ಸಲ್ಮಾನ್ ಖಾನ್ ಬಗ್ಗೆ ಸುನಿಲ್ ಗ್ರೋವರ್ ಮಿಮಿಕ್ರಿ; ಸಿಟ್ಟಾದ್ರಾ ಸಲ್ಲು?
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 27, 2024 | 7:54 AM

Share

ಸಲ್ಮಾನ್ ಖಾನ್ ಅವರು ಹಲವು ವಿಚಾರಗಳಲ್ಲಿ ಸಿಟ್ಟಾಗುತ್ತಾರೆ. ಅವರು ಯಾವುದೇ ವಿಚಾರವನ್ನಾದರೂ ಗಂಭೀರವಾಗಿ ಸ್ವೀಕರಿಸುತ್ತಾರೆ. ಎದುರಿದ್ದವರು ಧಿಮಾಕಿನಿಂದ ಮಾತನಾಡಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಹೀಗಿರುವಾಗ ಸಲ್ಮಾನ್ ಖಾನ್ ಅವರ ಮಿಮಿಕ್ರಿ ಮಾಡಿದರೆ ಅವರು ಎಲ್ಲಾದರೂ ಸಹಿಸಿಕೊಳ್ಳಲು ಸಾಧ್ಯವೇ? ಖಂಡಿತವಾಗಿಯೂ ಇಲ್ಲ. ಆದರೆ, ಸುನಿಲ್ ಗ್ರೋವರ್ ವಿಚಾರದಲ್ಲಿ ಸಲ್ಮಾನ್ ಖಾನ್ ಬೇರೆಯದೇ ನಿಲುವ ಹೊಂದಿದ್ದಾರೆ. ಈ ವಿಚಾರವನ್ನು ಸುನೀಲ್ ಗ್ರೋವರ್ ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರು ಸುನಿಲ್ ಗ್ರೋವರ್ ರೀತಿ ಕಾಣಿಸಿಕೊಳ್ಳುತ್ತಾರೆ. ಅವರ ರೀತಿಯೇ ಮಿಮಿಕ್ರಿ ಮಾಡಿದ್ದು ಇದೆ. ವಿಶೇಷ ಎಂದರೆ ಸಲ್ಮಾನ್ ಖಾನ್ ಎದುರೇ ಅವರು ಈ ರೀತಿಯ ಮಿಮಿಕ್ರಿ ಮಾಡಿ ತೋರಿಸಿದ್ದೂ ಇದೆ. ಈ ವಿಚಾರವಾಗಿ ಸಲ್ಮಾನ್ ಖಾನ್​ಗೆ ಖುಷಿ ಇದೆ. ಈ ವಿಚಾರವನ್ನು ಸುನಿಲ್ ಗ್ರೋವರ್ ಅವರು ರಿವೀಲ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಪಾತ್ರದಲ್ಲಿ ಸುನಿಲ್ ಕಾಣಿಸಿಕೊಂಡಿದ್ದನ್ನು ಕೆಲವರು ‘ಎಐ ಸಲ್ಮಾನ್ ಖಾನ್’ ಎಂದು ಹೇಳಿದ್ದರು. ಈ ವಿಚಾರವಾಗಿ ಸುನೀಲ್ ಗ್ರೋವರ್ ಮಾತನಾಡಿದ್ದಾರೆ. ‘ನಾನು ಆ ರೀತಿಯ ಮೀಮ್​ಗಳನ್ನು ನೋಡುತ್ತಿದ್ದೇನೆ. ನನಗೆ ಖುಷಿ ಆಗುತ್ತದೆ. ನೀವು ಏನಾದರೂ ಕೆಲಸ ಮಾಡಿದಾಗ ಜನರು ಅದಕ್ಕೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಾರೆ ಎಂದಾಗ ಖುಷಿ ಆಗುತ್ತದೆ. ಸಲ್ಮಾನ್ ಈ ಬಗ್ಗೆ ತಪ್ಪಾಗಿ ಏನೂ ಅಂದುಕೊಂಡಿಲ್ಲ. ಅವರಿಗೂ ಅದು ಇಷ್ಟ ಆಗಿದೆ’ ಎಂದಿದ್ದಾರೆ ಸುನೀಲ್ ಗ್ರೋವರ್.

ಸಲ್ಮಾನ್ ಖಾನ್ ಅವರು ಈ ರೀತಿಯ ವಿಚಾರಗಳನ್ನು ಹೆಚ್ಚು ಇಷ್ಟಪಡುವುದಿಲ್ಲ. ಅವರು ಈ ರೀತಿಯ ವಿಚಾರಗಳು ಎದುರಾದಾಗ ಸಖತ್ ಸಿಟ್ಟಾಗುತ್ತಾರೆ. ಯಾರಾದರೂ ಅವರ ಮಿಮಿಕ್ರಿ ಮಾಡಿದರೆ ಸಹಿಸಿಕೊಳ್ಳುವುದೇ ಇಲ್ಲ. ಅದರಲ್ಲೂ ಬಿಗ್ ಬಾಸ್ ವೇದಿಕೆ ಮೇಲೆ ಈ ರೀತಿಯ ವಿಚಾರ ಬಂದರೆ ಅವರು ಸಖತ್ ಸಿಟ್ಟಾಗುತ್ತಾರೆ. ಆದರೆ, ಸುನಿಲ್ ಗ್ರೋವರ್ ವಿಚಾರದಲ್ಲಿ ಅವರು ಆ ರೀತಿ ಅಲ್ಲ.

ಇದನ್ನೂ ಓದಿ: ಬಿಗ್ ಬಾಸ್ ವೇದಿಕೆ ಮೇಲೆ ಮಹೇಶ್ ಬಾಬು ಸರಳತೆಯನ್ನು ಕೊಂಡಾಡಿದ ಸಲ್ಮಾನ್ ಖಾನ್

ಈ ಮೊದಲು ಸಲ್ಮಾನ್ ಖಾನ್ ಹಾಗೂ ಸುನೀಲ್ ಗ್ರೋವರ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಸುನೀಲ್ ಅಮಿತಾಭ್ ಬಚ್ಚನ್ ವೇಷದಲ್ಲಿ ಕಾಣಿಸಿಕೊಂಡಾಗ ಸಲ್ಮಾನ್ ಖಾನ್ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ