AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ ವಿವೇಕ್ ಒಬೆರಾಯ್, ಬೆಲೆ ಎಷ್ಟು ಕೊಟಿ?

Vivek Oberoi: ಬಾಲಿವುಡ್ ನಟ ವಿವೇಕ್ ಒಬೆರಾಯ್ ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ವಿಶೇಷತೆ ಏನು? ಬೆಲೆ ಎಷ್ಟು ಕೋಟಿ? ವಿವೇಕ್ ಬಳಿ ಇರುವ ಇನ್ನಿತರೆ ಕಾರುಗಳ ಬೆಲೆ ಎಷ್ಟು? ಮಾಹಿತಿ ಇಲ್ಲಿದೆ.

ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿ ಮಾಡಿದ ವಿವೇಕ್ ಒಬೆರಾಯ್, ಬೆಲೆ ಎಷ್ಟು ಕೊಟಿ?
ಮಂಜುನಾಥ ಸಿ.
|

Updated on: Nov 26, 2024 | 2:50 PM

Share

ಬಾಲಿವುಡ್ ನಟ ವಿವೇಕ್ ಒಬೆರಾಯ್ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರು ಪೇರು ಕಂಡಿರುವ ನಟ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗ ಶಾರುಖ್ ಖಾನ್ ಅನ್ನು ಮೀರಿಸುವ ನಟ ಎಂದು ಕರೆಸಿಕೊಂಡಿದ್ದ ವಿವೇಕ್ ಒಬೆರಾಯ್ ಆ ನಂತರ ಪಾತಾಳಕ್ಕೆ ಬಿದ್ದರು. ಅದಾದ ಬಳಿಕ ರಾಮ್ ಗೋಪಾಲ್ ವರ್ಮಾ ಇನ್ನಿತರೆ ನಿರ್ದೇಶಕರುಗಳ ಸಹಾಯದಿಂದ ಮತ್ತೆ ಪುಟಿದೆದ್ದು ಬಂದ ವಿವೇಕ್ ಒಬೆರಾಯ್ ಈಗ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆರಕ್ಕೇರದ ಆದರೆ ಮೂರಕ್ಕೆ ಇಳಿಯದ ವಿವೇಕ್ ಒಬೆರಾಯ್, ಇದೀಗ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ.

ವಿವೇಕ್ ಒಬೆರಾಯ್, ರೋಲ್ಸ್ ರಾಯ್ಸ್ ಕುಲಿನನ್ ಬ್ಲಾಕ್ ಬ್ಯಾಡ್ಜ್ ಕಾರನ್ನು ಖರೀದಿ ಮಾಡಿದ್ದಾರೆ. ಭಾರಿ ದುಬಾರಿ ಕಾರಿದು. ಕಾರಿನ ಡೆಲಿವರಿ ತೆಗೆದುಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿವೇಕ್ ಒಬೆರಾಯ್, ‘ಯಶಸ್ಸು ವಿಭಿನ್ನ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತದೆ, ಇಂದು ಈ ರೀತಿಯಲ್ಲಿ ಯಶಸ್ಸು ಬಂದದೆ. ಜೀವನದ ವಿಶೇಷ ಕ್ಷಣಗಳನ್ನು ಕುಟುಂಬದೊಟ್ಟಿಗೆ ಕಳೆಯುತ್ತಿರುವುದು ನನಗೆ ಖುಷಿ ತಂದಿದೆ’ ಎಂದು ವಿವೇಕ್ ಒಬೆರಾಯ್ ಹೇಳಿಕೊಂಡಿದ್ದಾರೆ.

ವಿವೇಕ್ ಒಬೆರಾಯ್ ಖರೀದಿ ಮಾಡಿರುವ ರೋಲ್ಸ್ ರಾಯ್ಸ್ ಕುಲಿನನ್ ಬ್ಲಾಕ್ ಬ್ಯಾಡ್ಜ್ ಕಾರು ಭಾರಿ ದುಬಾರಿಯದ್ದಾಗಿದೆ. ಈ ಕಾರಿನ ಬೆಲೆ ಸುಮಾರು 12.25 ಕೋಟಿ ರೂಪಾಯಿಗಳು. ಕಾರು ಡೆಲಿವರಿ ಪಡೆದ ಕೂಡಲೇ ತಂದೆಯ ಕೈಗೆ ಕೀಲಿ ಕೈ ನೀಡಿ ಅವರೇ ಕಾರಿನಲ್ಲಿ ಮೊದಲು ಕೂರವಂತೆ ಮಾಡಿದ್ದಾರೆ. ಕಾರಿನಲ್ಲಿ ತಂದೆ, ತಾಯಿ ಹಾಗೂ ಪತ್ನಿಯನ್ನು ಕೂರಿಸಿಕೊಂಡು ರೌಂಡ್ ಹೊಡೆದಿದ್ದಾರೆ ವಿವೇಕ್ ಒಬೆರಾಯ್.

ಇದನ್ನೂ ಓದಿ:ಬರ್ತ್​ಡೇ ಸಂಭ್ರಮಕ್ಕಾಗಿ ಬಹುಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟ ಸಂಜಯ್ ದತ್

ವಿವೇಕ್ ಒಬೆರಾಯ್​ಗೆ ಕಾರುಗಳ ಬಗ್ಗೆ ಅತೀವ ಆಸಕ್ತಿ ಇದೆ. ಹಲವು ಐಶಾರಾಮಿ, ದುಬಾರಿ ಸ್ಪೋರ್ಟ್​ ಕಾರುಗಳು ವಿವೇಕ್ ಒಬೆರಾಯ್ ಬಳಿ ಇವೆ. ಅವರ ಬಳಿ ಲ್ಯಾಂಬೊರ್ಗಿ ಅವೆಂಟಡರ್ ಕಾರು ಇದೆ. ಇದರ ಬೆಲೆ ಸುಮಾರು 5.50 ಕೋಟಿ ರೂಪಾಯಿ ಇದೆ. ಸುಮಾರು ಒಂದು ಕೋಟಿ ರೂಪಾಯಿ ಫಿಸ್ಕರ್ ಕಾರು, ಒಂದು, ಬೆಂಜ್ ಮತ್ತು ಒಂದು ಬಿಎಂಡಬ್ಲು ಕಾರುಗಳು ಸಹ ಇದೆ.

View this post on Instagram

A post shared by Vivek Oberoi (@vivekoberoi)

ವಿವೇಕ್ ಒಬೆರಾಯ್ ಕಳೆದ ಕೆಲ ವರ್ಷಗಳಿಂದ ವಿಲನ್ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದ್ದಾರೆ. ಕನ್ನಡದ ‘ರುಸ್ತುಂ’ ಸಿನಿಮಾದಲ್ಲಿ ನಟಿಸಿದ್ದರು. ತೆಲುಗು ಹಾಗೂ ತಮಿಳಿನ ಕೆಲ ಸಿನಿಮಾಗಳಲ್ಲಿಯೂ ಇತ್ತೀಚೆಗೆ ನಟಿಸಿದ್ದಾರೆ. ಹಿಂದಿಯ ಕೆಲ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ