‘ಧುರಂಧರ್ 2’ ಒಟಿಟಿ ಬಿಡುಗಡೆ ದಿನಾಂಕ ನಿಗದಿ, ಇರಲಿದೆ ಟ್ವಿಸ್ಟ್
Dhurandhar 2 movie: ರಣವೀರ್ ಸಿಂಗ್ ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಸಿನಿಮಾ 1700 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ಬಗ್ಗೆ ಸ್ವತಃ ನರೇಂದ್ರ ಮೋದಿ ಮೆಚ್ಚಿ ಮಾತನಾಡಿದ್ದಾರೆ. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದ್ದು, ಒಟಿಟಿ ಸ್ಟ್ರೀಮಿಂಗ್ನ ದಿನಾಂಕ ನಿಗದಿ ಆಗಿದೆ. ‘ಧುರಂದರ್ 2’ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸುವವರಿಗೆ ಸಣ್ಣ ಸರ್ಪ್ರೈಸ್ ಸಹ ಕಾದಿದೆ.

ರಣವೀರ್ ಸಿಂಗ್ (Ranveer Singh) ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದಿದೆ. ಸಿನಿಮಾ 1700 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಸಿನಿಮಾದ ಬಗ್ಗೆ ಸ್ವತಃ ನರೇಂದ್ರ ಮೋದಿ ಮೆಚ್ಚಿ ಮಾತನಾಡಿದ್ದಾರೆ. ಇದೀಗ ಸಿನಿಮಾ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದ್ದು, ಒಟಿಟಿ ಸ್ಟ್ರೀಮಿಂಗ್ನ ದಿನಾಂಕ ನಿಗದಿ ಆಗಿದೆ. ‘ಧುರಂದರ್ 2’ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸುವವರಿಗೆ ಸಣ್ಣ ಸರ್ಪ್ರೈಸ್ ಸಹ ಕಾದಿದೆ.
ಈ ಹಿಂದೆ ವರದಿ ಮಾಡಿದಂತೆ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾ ಎರಡು ಒಟಿಟಿಗಳಲ್ಲಿ ಬಿಡುಗಡೆ ಆಗಲಿದೆ. ಮೇ 15 ರಂದು ‘ಧುರಂಧರ್ 2’ ಸಿನಿಮಾವು ಜಿಯೋ ಹಾಟ್ಸ್ಟಾರ್ ಮತ್ತು ನೆಟ್ಫ್ಲಿಕ್ಸ್ಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಒಟಿಟಿಯಲ್ಲಿ ‘ಧುರಂಧರ್: ದಿ ರಿವೇಂಜ್’ ಸಿನಿಮಾಕ್ಕೆ ‘ರಾ ಆಂಡ್ ಅನ್ದೇಕಾ’ (ಹಸಿ-ಬಿಸಿ ಮತ್ತು ಹಿಂದೆ ನೋಡದ್ದು) ಎಂಬ ಅಡಿಬರಹ ಸಹ ನೀಡಲಾಗಿದೆ.
‘ಧುರಂಧರ್ 2’ ಸಿನಿಮಾವನ್ನು ಭಾರತದಲ್ಲಿ ಜಿಯೋ ಹಾಟ್ಸ್ಟಾರ್ನಲ್ಲಿ ಹಿಂದಿ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಭಾರತದ ಹೊರತಾಗಿ ಬೇರೆ ದೇಶದವರು ‘ನೆಟ್ಫ್ಲಿಕ್ಸ್’ನಲ್ಲಿ ವೀಕ್ಷಿಸಬಹುದಾಗಿದೆ. ಎರಡೂ ಒಟಿಟಿಗಳಲ್ಲಿ ಒಂದೇ ಕಾಪಿಯನ್ನು ಬಿಡುಗಡೆ ಮಾಡಲಾಗುತ್ತಿದೆ. ಚಿತ್ರಮಂದಿರದಲ್ಲಿ ಇಲ್ಲದ ಕೆಲವು ಹೆಚ್ಚುವರಿ ದೃಶ್ಯಗಳನ್ನು ಒಟಿಟಿಯಲ್ಲಿ ಸೇರಿಸಲಾಗಿದೆ. ಚಿತ್ರಮಂದಿರಕ್ಕಿಂತಲೂ ಮೂರು ನಿಮಿಷ ಹೆಚ್ಚಿನ ಸಮಯದ ದೃಶ್ಯಗಳು ಒಟಿಟಿಯಲ್ಲಿ ಇರಲಿವೆ.
ಇದನ್ನೂ ಓದಿ:ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
‘ಆರ್ಆರ್ಆರ್’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳು ಒಂದಕ್ಕಿಂತಲೂ ಹೆಚ್ಚು ಒಟಿಟಿಗಳಲ್ಲಿ ಬಿಡುಗಡೆ ಆಗಿದ್ದವು. ಇದೀಗ ‘ಧುರಂಧರ್ 2’ ಸಿನಿಮಾ ಸಹ ಅದೇ ಹಾದಿ ಹಿಡಿದಿದೆ. ಆದರೆ ಇದೇ ಸಿನಿಮಾದ ಮೊದಲ ಭಾಗ ಕೇವಲ ನೆಟ್ಫ್ಲಿಕ್ಸ್ನಲ್ಲಿ ಮಾತ್ರವೇ ತೆರೆ ಕಂಡಿತ್ತು. ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾವು ಭಾರತೀಯ ಸೈನಿಕನೊಬ್ಬ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶಿಸಿದ್ದು, ಸಿನಿಮಾನಲ್ಲಿ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಮ್ಪಾಲ್, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Fri, 8 May 26




