ಯಶ್ ಸಖತ್ ಐಡಿಯಾ, ಬಿಜಿಎಂಐ ಗೇಮಿನಲ್ಲಿ ‘ಟಾಕ್ಸಿಕ್’ ರಾಯ
Yash-Toxic: ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ಜೂನ್ 04 ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾವನ್ನು ಪ್ರಚಾರದ ಕಾರಣಕ್ಕೆಂದೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಯಶ್ ಅವರು ಹೊಸ ರೀತಿಯ ಆಡಿಯೆನ್ಸ್ ಅನ್ನು ತಲುಪಲು ಗೇಮ್ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಂತಿದ್ದಾರೆ. ಯಶ್ ಅವರು ಇದೀಗ ಭಾರತದ ಜನಪ್ರಿಯ ಗೇಮ್ ಆಗಿರುವ ಬಿಜಿಎಂಐನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್ (Yash) ಸಿನಿಮಾಗಳನ್ನು ಅಂತರಾಷ್ಟ್ರೀಯ ಗುಣಮಟ್ಟದಲ್ಲಿ ಮಾಡುವ ಜೊತೆಗೆ ಅದರ ಪ್ರಚಾರವನ್ನೂ ಸಹ ಭಿನ್ನವಾಗಿ ಮಾಡುತ್ತಾ ಬಂದಿದ್ದಾರೆ. ಪ್ರತಿ ಬಾರಿ ಹೊಸ ಹೊಸ ಆಡಿಯೆನ್ಸ್ ಅನ್ನು ತಲುಪುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಕೆಲವೇ ವಾರಗಳಲ್ಲಿ ಬಿಡುಗಡೆ ಆಗಲಿದೆ. ಜೂನ್ 04 ರಂದು ಬಿಡುಗಡೆ ಆಗಬೇಕಿದ್ದ ಈ ಸಿನಿಮಾವನ್ನು ಪ್ರಚಾರದ ಕಾರಣಕ್ಕೆಂದೇ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಇದೀಗ ಯಶ್ ಅವರು ಹೊಸ ರೀತಿಯ ಆಡಿಯೆನ್ಸ್ ಅನ್ನು ತಲುಪಲು ಗೇಮ್ ಒಂದರ ಜೊತೆಗೆ ಒಪ್ಪಂದ ಮಾಡಿಕೊಂಡಂತಿದ್ದಾರೆ. ಯಶ್ ಅವರು ಇದೀಗ ಭಾರತದ ಜನಪ್ರಿಯ ಗೇಮ್ ಆಗಿರುವ ಬಿಜಿಎಂಐನಲ್ಲಿ (BGMI) ಕಾಣಿಸಿಕೊಳ್ಳಲಿದ್ದಾರೆ.
‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ ಗೇಮ್ ಭಾರತದಲ್ಲಿ 25 ಕೋಟಿಗೂ ಹೆಚ್ಚು ಡೌನ್ಲೋಡ್ ಕಂಡಿರುವ ಗೇಮಾಗಿದೆ. ಬಿಜಿಎಂಐ ತನ್ನ ಮುಂದಿನ 4.4 ಅಪ್‌ಡೇಟ್ ಅನ್ನು ಶೀಘ್ರವೇ ಹೊರತರಲಿದೆ. ಈ ಅಪ್‌ಡೇಟ್‌ನಲ್ಲಿ ಅಡಕವಾಗಿರುವ ಹೊಸ ಫೀಚರ್ ಕುರಿತಾಗಿ ಸುದ್ದಿ ಈಗಾಗಲೇ ಲೀಕ್ ಆಗಿದ್ದು, ಹೊಸ ಆವೃತ್ತಿಯಲ್ಲಿ ಯಶ್ ಅವರು ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ‘ಟಾಕ್ಸಿಕ್’ ಸಿನಿಮಾಕ್ಕೆ ಸಂಬಂಧಿಸಿದ ಕೆಲವು ವಿಷಯಗಳು ಸಹ ಗೇಮಿನಲ್ಲಿ ಇರಲಿವೆ. ಪ್ರಸ್ತುತ ಹರಿದಾಡುತ್ತಿರುವ ಮಾಹಿತಿಯಂತೆ, BGMI ನ 4.4 ಅಪ್‌ಡೇಟ್‌ನಲ್ಲಿ ಯಶ್ ಅವರ ‘ಟಾಕ್ಸಿಕ್’ ಚಲನಚಿತ್ರದ ಥೀಮ್ ಆಧಾರಿತ ವಿಶೇಷ ಸ್ಕಿನ್‌ಗಳು ಮತ್ತು ಔಟ್‌ಫಿಟ್‌ಗಳು ಲಭ್ಯವಿರಲಿವೆ. ಯಶ್ ಅವರ ವಿಶಿಷ್ಟ ಶೈಲಿಯ ಹೇರ್‌ಸ್ಟೈಲ್, ಉಡುಪು ಮತ್ತು ಆಕ್ಷನ್ ಮ್ಯಾನರಿಸಂಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆಯಂತೆ.
ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್ನಲ್ಲಿ ಅಂಥ ದೃಶ್ಯ ಇದೆ ಎಂದು ಟೀಕಿಸಿದವರಿಗೆ ಉತ್ತರ ನೀಡಿದ ಯಶ್
ಈ ಹಿಂದಿನ ಅಪ್‌ಡೇಟ್‌ಗಳಲ್ಲಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ, ಶಾರುಖ್ ಖಾನ್ ಅವರ ಧ್ವನಿ ಕೇಳುತ್ತಿತ್ತು. ಹೊಸ ಆವೃತ್ತಿಯಲ್ಲಿ ಯಶ್ ಅವರ ಖಡಕ್ ಧ್ವನಿ ಸಹ ಇರಲಿದೆ. ‘ಎನಿಮೀಸ್ ಅಹೆಡ್’, ‘ಫಾಲೋ ಮಿ’ ಇನ್ನಿತರೆ ಗೇಮ್ ಕಮಾಂಡ್ಗಳು ಯಶ್ ಅವರ ಖಡಕ್ ಧ್ವನಿಯಲ್ಲಿ ಕೇಳಬಹುದಾಗಿದೆ. ಯಶ್ ಅಭಿಮಾನಿಗಳಿಗಂತೂ ಇದು ಹಬ್ಬವೇ ಸರಿ. ಬಿಜಿಎಂಐ ಹೊಸ ಅಪ್ಡೇಟ್ನ ಗೇಮ್ ಆಡುವವರು ವಿಶೇಷ ‘ಟಾಕ್ಸಿಕ್’ ಕ್ರೇಟ್‌ಗಳನ್ನು ಅನ್‌ಲಾಕ್ ಮಾಡಬಹುದು. ಇದರಲ್ಲಿ ಚಿತ್ರದ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡಿರುವ ರೀತಿಯ ಗನ್ ಸ್ಕಿನ್‌ಗಳು ಮತ್ತು ಡ್ರೆಸ್‌ಗಳು ಇರಲಿವೆ. ಗೇಮ್ ಜೊತೆಗೆ ಯಶ್ ಅವರ ಸಹಯೋಗವನ್ನು ಸೆಲೆಬ್ರೇಟ್ ಮಾಡಲು ಗೇಮ್‌ನಲ್ಲಿ ಸಣ್ಣ ಪುಟ್ಟ ಮಿಷನ್‌ಗಳನ್ನು ನೀಡಲಾಗುತ್ತದೆ. ಈ ಮಿಷನ್‌ಗಳನ್ನು ಪೂರ್ಣಗೊಳಿಸಿದರೆ ಉಚಿತವಾಗಿ ಯಶ್ ಸಂಬಂಧಿತ ರಿವಾರ್ಡ್‌ಗಳನ್ನು ಪಡೆಯಬಹುದಾಗಿರುತ್ತದೆ.
ಸಾಮಾನ್ಯವಾಗಿ BGMI ದೊಡ್ಡ ಬಾಲಿವುಡ್ ನಟರು ಅಥವಾ ಕ್ರೀಡಾಪಟುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ. ಆದರೆ ಈಗ ದಕ್ಷಿಣ ಭಾರತದ, ವಿಶೇಷವಾಗಿ ಕನ್ನಡದ ನಟನೊಬ್ಬನ ಚಿತ್ರದೊಂದಿಗೆ ಜಾಗತಿಕ ಮಟ್ಟದ ಗೇಮ್ ಕೈಜೋಡಿಸುತ್ತಿರುವುದು ಯಶ್ ಅವರ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ. ಇದು ‘ಟಾಕ್ಸಿಕ್’ ಚಿತ್ರದ ಪ್ರಚಾರಕ್ಕೆ ಭರ್ಜರಿ ವೇದಿಕೆ ಒದಗಿಸಲಿದೆ. ವರದಿಯ ಪ್ರಕಾರ, BGMI 4.4 ಅಪ್‌ಡೇಟ್ ಮುಂದಿನ ಕೆಲವು ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಗೇಮರ್‌ಗಳು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಈ ಅಪ್‌ಡೇಟ್ ಪಡೆದ ನಂತರ ‘ಟಾಕ್ಸಿಕ್’ ಥೀಮ್ ಅನ್ನು ಆನಂದಿಸಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




