ಮಗನಿಗೆ ವಿಚ್ಛೇದನ ಕೊಟ್ಟರೂ ಮಾಜಿ ಸೊಸೆ ಮೇಲೆ ಪ್ರೀತಿ ತೋರಿದ ಅಕ್ಕಿನೇನಿ ನಾಗಾರ್ಜುನ

ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಟ್ವೀಟ್​ ಒಂದನ್ನು ಮಾಡಿದ್ದಾರೆ. ವಿಚ್ಛೇದನದ ನಂತರವೂ ಮಾಜಿ ಸೊಸೆ ಸಮಂತಾ ಬಗ್ಗೆ ನಾಗಾರ್ಜುನ ಪ್ರೀತಿ ತೋರಿದ್ದಾರೆ.

ಮಗನಿಗೆ ವಿಚ್ಛೇದನ ಕೊಟ್ಟರೂ ಮಾಜಿ ಸೊಸೆ ಮೇಲೆ ಪ್ರೀತಿ ತೋರಿದ ಅಕ್ಕಿನೇನಿ ನಾಗಾರ್ಜುನ
ಸಮಂತಾ-ನಾಗಾರ್ಜುನ-ನಾಗ ಚೈತನ್ಯ

ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇವರ ಸಂಬಂಧ ಹಳಸಿದ್ದೇಕೆ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗಲೇ ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಅವರು ಟ್ವೀಟ್​ ಒಂದನ್ನು ಮಾಡಿದ್ದಾರೆ. ವಿಚ್ಛೇದನದ ನಂತರವೂ ಮಾಜಿ ಸೊಸೆ ಸಮಂತಾ ಬಗ್ಗೆ ನಾಗಾರ್ಜುನ ಪ್ರೀತಿ ತೋರಿದ್ದಾರೆ.

‘ಬಹಳ ಬೇಸರದಿಂದ ಇದನ್ನು ಹೇಳುತ್ತಿದ್ದೇನೆ. ಸಮಂತಾ ಮತ್ತು ನಾಗ ಚೈತನ್ಯ ನಡುವೆ ನಡೆದಿರುವುದು ನಿಜಕ್ಕೂ ಬೇಸರದ ವಿಚಾರ. ಪತಿ ಮತ್ತು ಪತ್ನಿ ನಡುವೆ ಏನು ನಡೆದಿದೆ ಅನ್ನೋದು ತುಂಬಾನೇ ಖಾಸಗಿಯಾದುದ್ದು. ಸ್ಯಾಮ್​ ಮತ್ತು ಚಾಯ್​ ನನಗೆ ತುಂಬಾನೇ ಹತ್ತಿರವಾಗಿದ್ದಾರೆ. ಸಮಂತಾ ಜತೆ ಕಳೆದ ಕ್ಷಣಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಸಮಂತಾ ಯವಾಗಲೂ ನನಗೆ ಪ್ರೀತಿಪಾತ್ರಳು. ಇಬ್ಬರಿಗೂ ದೇವರು ಆಶೀರ್ವಾದ ಮಾಡಲಿ’ ಎಂದಿದ್ದಾರೆ ನಾಗಾರ್ಜುನ.

ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು. ಇದರ ಜತೆಗೆ ಸಮಂತಾ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇವೆಲ್ಲದರ ಜತೆಗೆ ಸಮಂತಾ ಅವರ ಬೋಲ್ಡ್​ ದೃಶ್ಯಗಳು ಎಲ್ಲರ ಕಣ್ಣು ಕುಕ್ಕಿದ್ದವು. ಸಮಂತಾ ಈ ವೆಬ್​ ಸೀರಿಸ್​ನಲ್ಲಿ ಅನೇಕ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಕೆಲವು ದೃಶ್ಯಗಳು ಎಷ್ಟು ಮಾದಕವಾಗಿದ್ದವೆಂದರೆ ಸ್ವತಃ ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಮದುವೆ ಆದ ನಂತರದಲ್ಲಿ ಹೀರೋಯಿನ್​ಗಳು ಬೋಲ್ಡ್​ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ, ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ  ‘ದಿ ಫ್ಯಾಮಿಲಿ ಮ್ಯಾನ್​ 2’ ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್​ ಸೀರಿಸ್​ ಒಪ್ಪಿಕೊಂಡಿದ್ದರು. ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್​ವರೆಗೆ ತಂದು ನಿಲ್ಲಿಸಿತು ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ಗೆ ಇದುವೇ ಕಾರಣ? ಅಕ್ಕಿನೇನಿ ಕುಟುಂಬದಲ್ಲಿ ಅಸಲಿಗೆ ಆಗಿದ್ದೇನು?

ಡಿವೋರ್ಸ್ ಬಗ್ಗೆ ಸ್ಯಾಮ್ ಫ್ಯಾನ್ಸ್ ಮಾತನಾಡುವಂತಿಲ್ಲ; ಇದು ಸಮಂತಾ ಸೂಚನೆ

Read Full Article

Click on your DTH Provider to Add TV9 Kannada