ಸಮಂತಾ ಎದುರು ಶೋಭಿತಾ ಜನಪ್ರಿಯತೆಯೇ ಹೆಚ್ಚು; ನಾಗ ಚೈತನ್ಯ ಪತ್ನಿಗೆ 5ನೇ ಸ್ಥಾನ

ಅನೇಕ ವರ್ಷಗಳಿಂದ ನಟಿ ಶೋಭಿತಾ ಅವರು ಚಿತ್ರರಂಗದಲ್ಲಿ ಇದ್ದಾರೆ. ಆದರೆ ಅವರು ಹೆಚ್ಚು ಸುದ್ದಿಯಾಗಲು ಆರಂಭಿಸಿದ್ದು ನಾಗ ಚೈತನ್ಯ ಜೊತೆಗಿನ ಡೇಟಿಂಗ್ ಕಾರಣದಿಂದ. ಈಗ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಶೋಭಿತಾ ಅವರ ಜನಪ್ರಿಯತೆ ಹೆಚ್ಚಾಗಿದ್ದು, ಸಮಂತಾರನ್ನೂ ಅವರು ಹಿಂದಿಕ್ಕಿದ್ದಾರೆ.

ಸಮಂತಾ ಎದುರು ಶೋಭಿತಾ ಜನಪ್ರಿಯತೆಯೇ ಹೆಚ್ಚು; ನಾಗ ಚೈತನ್ಯ ಪತ್ನಿಗೆ 5ನೇ ಸ್ಥಾನ
ಸಮಂತಾ, ನಾಗ ಚೈತನ್ಯ, ಶೋಭಿತಾ ದುಲಿಪಾಲ, ನಾಗಾರ್ಜುನ
Follow us
ಮದನ್​ ಕುಮಾರ್​
|

Updated on: Dec 05, 2024 | 7:43 PM

ಟಾಲಿವುಡ್​ ಹೀರೋ ನಾಗ ಚೈತನ್ಯ ಜೊತೆ ನಟಿ ಶೋಭಿತಾ ಧುಲಿಪಾಲ ಅವರು ಹಸೆಮಣೆ ಏರಿದ್ದಾರೆ. ಡಿಸೆಂಬರ್​ 4ರಂದು ಹೈದರಾಬಾದ್​ನಲ್ಲಿ ಅವರ ಮದುವೆ ನೆರವೇರಿದೆ. ನಾಗ ಚೈತನ್ಯ ಅವರು ಮಾಜಿ ಪತ್ನಿ ಸಮಂತಾಗೆ ವಿಚ್ಛೇದನ ನೀಡಿ 3 ವರ್ಷ ಕಳೆದ ಬಳಿಕ ಶೋಭಿತಾ ಜೊತೆ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಶೋಭಿತಾ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬ ಚರ್ಚೆ ಆಗಿದೆ. ಅಚ್ಚರಿ ಏನೆಂದರೆ, ಅತಿ ಜನಪ್ರಿಯತೆ ಹೊಂದಿದ ಸೆಲೆಬ್ರಿಟಿಗಳ ಟಾಪ್​ 10 ಪಟ್ಟಿಯಲ್ಲಿ ಶೋಭಿತಾ ಹೆಸರು ಸ್ಥಾನ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಈ ಪಟ್ಟಿಯಲ್ಲಿ ಸಮಂತಾ ರುತ್ ಪ್ರಭು ಕೂಡ ಇದ್ದಾರೆ!

2024ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಭಾರತದ ಸೆಲೆಬ್ರಿಟಿಗಳ ಟಾಪ್​ 10 ಪಟ್ಟಿಯನ್ನು ‘ಐಎಂಡಿಬಿ’ ವೆಬ್​ಸೈಟ್​ ಬಿಡುಗಡೆ ಮಾಡಿದೆ. ಇದರಲ್ಲಿ ಸಮಂತಾ ರುತ್​ ಪ್ರಭು, ಶೋಭಿತಾ, ಪ್ರಭಾಸ್, ಆಲಿಯಾ ಭಟ್​ ಮುಂತಾದವರು ಸ್ಥಾನ ಪಡೆದುಕೊಂಡಿದ್ದಾರೆ. ಶೋಭಿತಾ ಅವರಿಗೆ ಈ ಪಟ್ಟಿಯಲ್ಲಿ 5ನೇ ಸ್ಥಾನ ಸಿಕ್ಕಿದೆ. ಸಮಂತಾ ರುತ್ ಪ್ರಭು ಅವರು 8ನೇ ಸ್ಥಾನದಲ್ಲಿ ಇದ್ದಾರೆ. ಆ ಮೂಲಕ ಜನಪ್ರಿಯತೆಯಲ್ಲಿ ಸಮಂತಾ ಅವರನ್ನು ಶೋಭಿತಾ ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: ನೆರವೇರಿತು ನಾಗ ಚೈತನ್ಯ-ಶೋಭಿತಾ ಮದುವೆ; ಶುಭಕೋರಿದ ಸೆಲೆಬ್ರಿಟಿಗಳು

‘ಐಎಂಡಿಬಿ’ ವೆಬ್​ಸೈಟ್​ನಲ್ಲಿ ಸೆಲೆಬ್ರಿಟಿಗಳ ಪ್ರೊಫೈಲ್​ ಪುಟಕ್ಕೆ ಭೇಟಿ ನೀಡಿದ ಓದುಗರ ಸಂಖ್ಯೆಯ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಟಿ ತೃಪ್ತಿ ದಿಮ್ರಿ ಅವರಿಗೆ ನಂಬರ್​ ಒನ್ ಸ್ಥಾನ ಸಿಕ್ಕಿದೆ. ಕನ್ನಡದ ಯಾವ ಸೆಲೆಬ್ರಿಟಿಗಳು ಕೂಡ ಈ ಪಟ್ಟಿಯಲ್ಲಿ ಇಲ್ಲ. ಶೋಭಿತಾ ಅವರು ಹಲವಾರು ಸಿನಿಮಾಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ನಾಗ ಚೈತನ್ಯ ಜೊತೆ ಡೇಟಿಂಗ್ ಮಾಡಲು ಶುರು ಮಾಡಿದ ದಿನದಿಂದ ಅವರ ಹೆಸರು ಹೆಚ್ಚು ಸುದ್ದಿಯಾಗಲು ಆರಂಭವಾಯಿತು. ಮದುವೆಯ ಸುದ್ದಿ ಕೇಳಿಬಂದ ಬಳಿಕ ಶೋಭಿತಾ ಬಗ್ಗೆ ತಿಳಿದುಕೊಳ್ಳಲು ಜನರು ಹೆಚ್ಚು ಆಸಕ್ತಿ ತೋರಿಸಿದರು.

ಐಎಂಡಿಬಿ ಪ್ರಕಟಿಸಿದ 2024ರ ಮೋಸ್ಟ್​ ಪಾಪ್ಯುಲರ್​ ಸೆಲೆಬ್ರಿಟಿಗಳ ಟಾಪ್​ 10 ಪಟ್ಟಿ ಈ ರೀತಿ ಇದೆ: 1. ತೃಪ್ತಿ ದಿಮ್ರಿ 2. ದೀಪಿಕಾ ಪಡುಕೋಣೆ. 3. ಇಶಾನ್ ಕಟ್ಟರ್​. 4. ಶಾರುಖ್ ಖಾನ್​. 5. ಶೋಭಿತಾ ದುಲಿಪಾಲ. 6. ಶಾರ್ವರಿ ವಾಘ್. 7. ಐಶ್ವರ್ಯಾ ರೈ ಬಚ್ಚನ್. 8. ಸಮಂತಾ ರುತ್ ಪ್ರಭು. 9. ಆಲಿಯಾ ಭಟ್. 10. ಪ್ರಭಾಸ್​

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!