ಮಹೇಶ್ ಬಾಬು (Mahesh Babu) ಅವರು ಇಂದು (ಆಗಸ್ಟ್ 9) 47ನೇ ವರ್ಷದ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತಿದೆ. ಮಹೇಶ್ ಬಾಬು ಅವರು ಈ ವಯಸ್ಸಿನಲ್ಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ವರ್ಷ ಕಳೆದಂತೆ ಅವರು ಇನ್ನೂ ಯಂಗ್ ಆಗುತ್ತಿದ್ದಾರೆ. ಮಹೇಶ್ ಬಾಬು ಸ್ಟಾರ್ ಹೀರೋ ಆದರೂ ಅವರಿಗೆ ಕುಟುಂಬವೇ ಜಗತ್ತು. ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಬರ್ತ್ಡೇ ಅಂಗವಾಗಿ ಅವರ ಪತ್ನಿ ನಮ್ರತಾ ಅವರು ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ.
ನಮ್ರತಾ ಹಾಗೂ ಮಹೇಶ್ ಬಾಬು ಅವರದ್ದು ಪ್ರೇಮ ವಿವಾಹ. ಮಹೇಶ್ ಬಾಬು ಅವರಿಗೆ ನಮ್ರತಾ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಮಹೇಶ್ ಬಾಬು ಕೂಡ ನಮ್ರತಾ ಹಾಗೂ ಕುಟುಂಬ ಮೇಲೆ ಅಪಾರ ಪ್ರೀತಿ ತೋರುತ್ತಾರೆ. ಮಹೇಶ್ ಬಾಬು ವೃತ್ತಿಜೀವನಕ್ಕೆ ನಮ್ರತಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಪತಿಗೆ ಭವನಾತ್ಮಕ ಪತ್ರ ಬರೆದಿದ್ದು, ‘ನೀವು ನನ್ನ ಜಗತ್ತನ್ನು ಬೆಳಗಿದಿರಿ’ ಎಂದಿದ್ದಾರೆ.
‘ನೀವು ನನ್ನ ಜಗತ್ತನ್ನು ಬೆಳಗಿದಿರಿ. ಹ್ಯಾಪಿ ಬರ್ತ್ಡೇ ಎಂಬಿ (ಮಹೇಶ್ ಬಾಬು). ಒಟ್ಟಾಗಿ ಕಳೆಯಲು ಇನ್ನಷ್ಟು ವರ್ಷಗಳು ಇವೆ. ಲವ್ ಯೂ. ಈಗಲೂ, ಎಂದೆಂದಿಗೂ’ ಎಂದು ನಮ್ರತಾ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ಗೆ ನಾನಾ ಸೆಲೆಬ್ರಿಟಿಗಳು ಕಮೆಂಟ್ ಮಾಡಿ, ಮಹೇಶ್ ಬಾಬುಗೆ ಬರ್ತ್ಡೇ ವಿಶ್ ತಿಳಿಸಿದ್ದಾರೆ.
ಮಹೇಶ್ ಬಾಬು ಹಾಗೂ ನಮ್ರತಾ 2005, ಫೆಬ್ರವರಿ 10ರಂದು ಮದುವೆ ಆದರು. ಮದುವೆ ಬಳಿಕ ನಮ್ರತಾ ನಟನೆಯಿಂದ ಅಂತರ ಕಾಯ್ದುಕೊಂಡರು. ಈ ದಂಪತಿಗೆ ಸಿತಾರಾ ಹಾಗೂ ಗೌತಮ್ ಹೆಸರಿನ ಮಕ್ಕಳು ಇದ್ದಾರೆ.
ಇದನ್ನೂ ಓದಿ: ಅಪ್ಪನಿಗಾಗಿ ಪಾಪರಾಜಿ ಕೆಲಸ ಮಾಡಿದ ಮಹೇಶ್ ಬಾಬು ಮಗ ಗೌತಮ್
ಮಹೇಶ್ ಬಾಬು ಅವರು ಕುಟುಂಬದ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದ ಎಲ್ಲಾ ಸದಸ್ಯರು ಈ ವೇಳೆ ಹಾಜರಿ ಹಾಕಿದ್ದರು. ಮಹೇಶ್ ಬಾಬು ತಮ್ಮ 28ನೇ ಚಿತ್ರಕ್ಕಾಗಿ ರೆಡಿ ಆಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಅವರು ರಾಜಮೌಳಿ ಜತೆ ಕೈ ಜೋಡಿಸಲಿದ್ದಾರೆ.
Published On - 5:50 pm, Tue, 9 August 22