
ನಿರ್ದೇಶಕ ರಾಜಮೌಳಿ (SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಇದೆ. ‘ಬಾಹುಬಲಿ’, ‘ಆರ್ಆರ್ಆರ್’ ಮುಂತಾದ ಸಿನಿಮಾಗಳ ಮೂಲಕ ಅವರು ವಿದೇಶದಲ್ಲಿ ಕೂಡ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ರಾಜಮೌಳಿ ನಿರ್ದೇಶಿಸುವ ಸಿನಿಮಾಗಳಲ್ಲಿ ಪ್ರತಿ ಪಾತ್ರ ಕೂಡ ಹೈಲೈಟ್ ಆಗುತ್ತದೆ. ಹಾಗಾಗಿ ಅವರ ಸಿನಿಮಾದಲ್ಲಿ ನಟಿಸಲು ಕಲಾವಿದರು ಹಾತೊರೆಯುತ್ತಾರೆ. ಆದರೆ ಬಾಲಿವುಡ್ನ ಹಿರಿಯ ನಟ ನಾನಾ ಪಾಟೇಕರ್ (Nana Patekar) ಅವರು ರಾಜಮೌಳಿ ನೀಡಿದ ಅವಕಾಶವನ್ನು ತಿರಸ್ಕರಿಸಿದ್ದಾರೆ! ‘ಎಸ್ಎಸ್ಎಂಬಿ 29’ (SSMB 29) ಸಿನಿಮಾದಲ್ಲಿ ನಟಿಸಲು ನಾನಾ ಪಾಟೇಕರ್ ಅವರು ನೋ ಎಂದಿದ್ದಾರೆ.
‘ಎಸ್ಎಸ್ಎಂಬಿ 29’ ಚಿತ್ರದಲ್ಲಿ ಮಹೇಶ್ ಬಾಬು ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ರಾಜಮೌಳಿ ಕಾಂಬಿನೇಷನ್ ಎಂಬ ಕಾರಣಕ್ಕೆ ಹೈಪ್ ಹೆಚ್ಚಾಗಿದೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡದವರು ಇನ್ನೂ ಅಧಿಕೃತವಾಗಿ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಹಲವು ಬಗೆಯ ಗಾಸಿಪ್ ಕೇಳಿಬರುತ್ತಿವೆ.
ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ತಂದೆಯ ಪಾತ್ರದಲ್ಲಿ ನಟಿಸಲು ನಾನಾ ಪಾಟೇಕರ್ ಅವರಿಗೆ ಆಫರ್ ನೀಡಲಾಯಿತು. ಕಥೆ ಹೇಳಲು ರಾಜಮೌಳಿ ಅವರು ಪುಣೆಗೆ ತೆರಳಿದರು. ನಾನಾ ಪಾಟೇಕರ್ ಅವರ ಫಾರ್ಮ್ಹೌಸ್ನಲ್ಲಿ ಒಂದು ಸುತ್ತಿನ ಮಾತುಕಥೆ ಕೂಡ ನಡೆಯಿತು. ಆದರೆ ನಾನಾ ಪಾಟೇಕರ್ ಅವರಿಗೆ ಆ ಪಾತ್ರ ಇಷ್ಟ ಆಗಲಿಲ್ಲವಂತೆ. ಹಾಗಾಗಿ ಅವರು ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳಲಿಲ್ಲ.
ಅಚ್ಚರಿ ಏನೆಂದರೆ, ‘ಎಸ್ಎಸ್ಎಂಬಿ 29’ ಸಿನಿಮಾದಲ್ಲಿ ನಟಿಸಲು ನಾನಾ ಪಾಟೇಕರ್ ಅವರಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಕೊಡಲು ಕೂಡ ನಿರ್ಮಾಪಕರು ಸಿದ್ಧರಿದ್ದರು. ಆದರೂ ಕೂಡ ನಾನಾ ಪಾಟೇಕರ್ ಅವರು ಈ ಆಫರ್ ತಿರಸ್ಕರಿಸಿದರು ಎನ್ನಲಾಗಿದೆ. ಹಾಗಾದರೆ ನಾನಾ ಪಾಟೇಕರ್ ತಿರಸ್ಕರಿಸಿದ ಆ ಪಾತ್ರವನ್ನು ಬೇರೆ ಯಾವ ಕಲಾವಿದರು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ರಾಜಮೌಳಿ ಜೊತೆ ಸಿನಿಮಾ ಮಾಡುವಾಗಲೇ ಮತ್ತೊಂದು ಚಿತ್ರದ ಬಗ್ಗೆ ಆಲೋಚಿಸಿದ ಮಹೇಶ್ ಬಾಬು
ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ಎಸ್ಎಸ್ಎಂಬಿ 29’ ಎಂದು ಕರೆಯಲಾಗುತ್ತಿದೆ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಕ್ತಾಯ ಆಗಿದೆ. ಎರಡನೇ ಹಂತದ ಶೂಟಿಂಗ್ ಜೂನ್ 9ರಿಂದ ಹೈದರಾಬಾದ್ನಲ್ಲಿ ಶುರು ಆಗಲಿದೆ. ಪ್ರಿಯಾಂಕಾ ಚೋಪ್ರಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.