ಅಪರೂಪದ ದಾಖಲೆ ಬರೆದ ಬಾಲಯ್ಯ, ಯಂಗ್ ಸ್ಟಾರ್ಗಳಿಗೂ ಸಾಧ್ಯವಿಲ್ಲ
Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ ಸಿನಿಮಾಗಳು ಒಂದರ ಮೇಲೊಂದು ಬ್ಲಾಕ್ ಬಸ್ಟರ್ ಆಗುತ್ತಿವೆ. ಸ್ಟಾರ್ ನಟರ ಸಿನಿಮಾಗಳೇ ಚಿತ್ರಮಂದಿರದಲ್ಲಿ ತಿಂಗಳ ಮೇಲೆ ನಿಲ್ಲಲು ಒದ್ದಾಡುತ್ತಿರುವ ಸಂದರ್ಭದಲ್ಲಿ ಬಾಲಕೃಷ್ಣ ಅವರ ಸತತ ನಾಲ್ಕು ಸಿನಿಮಾಗಳು ಭಾರಿ ಪ್ರದರ್ಶನ ಕಂಡು ಅಪರೂಪದ ದಾಖಲೆ ಬರೆದಿವೆ.

ತೆಲುಗು ಚಿತ್ರರಂಗ ಎಂದರೆ ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್ಟಿಆರ್ ಎನ್ನುವ ಸ್ಥಿತಿ ಇದೆ. ಪ್ಯಾನ್ ಇಂಡಿಯಾ ಜಮಾನಾನಲ್ಲಿ ಬಾಲಕೃಷ್ಣ, ಚಿರಂಜೀವಿ, ಪವನ್ ಕಲ್ಯಾಣ್ ಅವರನ್ನು ಪರಿಗಣಿಸುವುದನ್ನೇ ಕಡಿಮೆ ಮಾಡಿವೆ ಮಾಧ್ಯಮಗಳು, ಆದರೆ ಸತ್ಯಾಂಶ ಬೇರೆಯೇ ಇದೆ. ಎರಡು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡುವ ಪ್ಯಾನ್ ಇಂಡಿಯಾ ಸ್ಟಾರ್ಗಳ ನಡುವೆ ನಂದಮೂರಿ ಬಾಲಕೃಷ್ಣ ಅಪರೂಪದ ದಾಖಲೆ ಬರೆದಿದ್ದಾರೆ. ಬಾಲಕೃಷ್ಣ ನಟನೆಯ ಸತತ ನಾಲ್ಕು ಸಿನಿಮಾಗಳು 175 ದಿನ ಓಡಿ ದಾಖಲೆ ಬರೆದಿವೆ.
ಈಗಿನ ಪ್ಯಾನ್ ಇಂಡಿಯಾ ಕಾಲದಲ್ಲಿ ಸಿನಿಮಾ ಒಂದು ತಿಂಗಳು ಓಡುವುದೇ ಕಷ್ಟ ಅಂಥಹದರಲ್ಲಿ ಬಾಲಕೃಷ್ಣ ನಟನೆಯ ಸತತ ನಾಲ್ಕು ಸಿನಿಮಾಗಳು ಚಿತ್ರಮಂದಿರದಲ್ಲಿ 175 ದಿನಗಳನ್ನು ಪೂರೈಸಿ ದಾಖಲೆ ಬರೆದಿದೆ. ಅಸಲಿಗೆ ಬಾಲಕೃಷ್ಣಗೆ ತಮ್ಮ ಸಿನಿಮಾ 175 ದಿನ ಓಡುವುದು ತೀರಾ ಸಾಮಾನ್ಯ. ಮೊದಲೆಲ್ಲ ಅವರ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಒಟ್ಟಿಗೆ ನೂರು ದಿನ ಪೂರೈಸುತ್ತಿದ್ದವು. ಇತ್ತೀಚೆಗೆ ಚಿತ್ರಮಂದಿರಗಳ ಸಂಖ್ಯೆ ಕಡಿಮೆ ಆಗಿದೆ ಆದರೆ ಈಗಲೂ ಸಹ ಅವರ ಈ ಹಿಂದಿನ ನಾಲ್ಕು ಸಿನಿಮಾಗಳು 175 ದಿನದ ಪೋಸ್ಟರ್ಗಳನ್ನು ಕಂಡಿದೆ. ಇದು ಅಪರೂಪದ ದಾಖಲೆ ಎನಿಸಿಕೊಂಡಿದೆ.
2021 ರಲ್ಲಿ ಬಿಡುಗಡೆ ಆದ ‘ಅಖಂಡ’ ಸಿನಿಮಾ ಸೂಪರ್ ಹಿಟ್ ಆಗಿ ಕೆಲ ಚಿತ್ರಮಂದಿರಗಳಲ್ಲಿ 175 ದಿನಗಳ ಪ್ರದರ್ಶನ ಕಂಡಿತು. ಅದಾದ ಬಳಿಕ ಕೋವಿಡ್ ಇನ್ನಿತರೆ ಕಾರಣಗಳಿಗೆ ಎರಡು ವರ್ಷ ಗ್ಯಾಪ್ ತೆಗೆದುಕೊಂಡ ಬಾಲಕೃಷ್ಣ 2023 ರಲ್ಲಿ ‘ವೀರ ನರಸಿಂಹ ರೆಡ್ಡಿ’ ಸಿನಿಮಾ ಮಾಡಿದರು. ಈ ಸಿನಿಮಾನಲ್ಲಿ ಕನ್ನಡದ ದುನಿಯಾ ವಿಜಯ್ ವಿಲನ್. ಈ ಸಿನಿಮಾ ಸಾಧಾರಣ ಹಿಟ್ ಆದರೂ ಸಹ ರಾಯಲಸೀಮ ಕತೆಯಾದ್ದರಿಂದ ಕೆಲ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು 175 ಡೇಸ್ ಪೂರೈಸಿತು.
ಇದನ್ನೂ ಓದಿ:ಸಿನಿಮಾ ಸೋಲುತ್ತದೆ ಎಂಬುದು ಗೊತ್ತಿದ್ದೂ ನಟಿಸಿದ್ದ ಬಾಲಕೃಷ್ಣ; ಚಿತ್ರ ದುರಂತವಾಯ್ತು
ಅದೇ ವರ್ಷ ಬಂದ ‘ಭಗವಂತ ಕೇಸರಿ’ ಸಿನಿಮಾ ಸೆಂಟಿಮೆಂಟ್ ಮತ್ತು ಆಕ್ಷನ್ ಅನ್ನು ಒಳಗೊಂಡಿತ್ತು. ಸಿನಿಮಾನಲ್ಲಿ ಅಪ್ಪ ಮತ್ತು ಮಗಳ ನಡುವಿನ ಬಾಂಧವ್ಯದ ಕತೆಯನ್ನು ಒಳಗೊಂಡಿತ್ತು. ಸಿನಿಮಾನಲ್ಲಿ ಬಾಲಕೃಷ್ಣ ಸಾಕು ಪುತ್ರಿಯ ಪಾತ್ರದಲ್ಲಿ ಕನ್ನಡತಿ ಶ್ರೀಲೀಲಾ ನಟಿಸಿದ್ದರು. ಆ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಹಿಟ್ ಆಯ್ತು. ಬಳಿಕ ಇದೇ ವರ್ಷ ಸಂಕ್ರಾಂತಿಗೆ ಬಿಡುಗಡೆ ಆದ ‘ಡಾಕೂ ಮಹಾರಾಜ್’ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಈ ಸಿನಿಮಾ ಸಹ ಇತ್ತೀಚೆಗಷ್ಟೆ 175 ದಿನಗಳನ್ನು ಪೂರೈಸಿದೆ. ಅಲ್ಲಿಗೆ ಬಾಲಕೃಷ್ಣ ನಟಿಸಿರುವ ಸತತ ನಾಲ್ಕು ಸಿನಿಮಾಗಳು 175 ದಿನಗಳನ್ನು ಚಿತ್ರಮಂದಿರದಲ್ಲಿ ಪೂರೈಸಿದೆ.
ಇದೀಗ ಬಾಲಯ್ಯ ‘ಅಖಂಡ 2’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಸೀನು ಅವರೇ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಸಣ್ಣ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಇದರ ಹೊರತಾಗಿ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರದಲ್ಲಿ ಬಾಲಯ್ಯ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ