‘ನನ್ನ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಟ್ಯಾಗ್ ಬೇಡ’; ಕಾರಣ ಕೊಟ್ಟ ನಾನಿ

ನ್ಯಾಚುರಲ್ ಸ್ಟಾರ್ ನಾನಿ ತಮ್ಮ ಸಿನಿಮಾಗಳಿಗೆ 'ಪ್ಯಾನ್ ಇಂಡಿಯಾ' ಎಂಬ ಟ್ಯಾಗ್ ಬಳಸುವುದನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ. ಬಾಲಿವುಡ್ ಚಿತ್ರಗಳು ದೇಶಾದ್ಯಂತ ಬಿಡುಗಡೆಯಾದಾಗ ಹಿಂದಿ ಸಿನಿಮಾ ಎಂದಷ್ಟೇ ಕರೆಯಲಾಗುತ್ತದೆ. ಆದರೆ ದಕ್ಷಿಣ ಭಾರತದ ಚಿತ್ರಗಳಿಗೆ ಮಾತ್ರ ಪ್ರತ್ಯೇಕ ಲೇಬಲ್ ಏಕೆ ಎಂದು ಪ್ರಶ್ನಿಸಿ, ಪ್ರಾದೇಶಿಕ ಸಿನಿಮಾಗಳಿಗೆ ಸಮಾನ ಗೌರವ ಸಿಗಬೇಕೆಂದು ನಾನಿ ಪ್ರತಿಪಾದಿಸಿದ್ದಾರೆ.

‘ನನ್ನ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಟ್ಯಾಗ್ ಬೇಡ’; ಕಾರಣ ಕೊಟ್ಟ ನಾನಿ
ನಾನಿ
Image Credit source: Paradise Movie

Updated on: Sep 18, 2026 | 9:27 AM

ಮುಖ್ಯಾಂಶಗಳು

  • ‘ಪ್ಯಾನ್ ಇಂಡಿಯಾ’ ಲೇಬಲ್ ವಿರುದ್ಧ ನಾನಿ ಸಿಟ್ಟು
  • ಬಾಲಿವುಡ್‌ಗೆ ಇಲ್ಲದ ನಿಯಮ ನಮಗೇಕೆ?
  • ಪ್ರಾದೇಶಿಕ ಸಿನಿಮಾಗಳಿಗೆ ಬೇಕಿದೆ ಸಮಾನ ಗೌರವ

ನಾನಿ ನಟನೆಯ ‘ಪ್ಯಾರಡೈಸ್’ ಸಿನಿಮಾ ಸೆಪ್ಟೆಂಬರ್ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರ ತೆಲುಗು ಜೊತೆಗೆ ಇತರ ಭಾಷೆಗೂ ಡಬ್ ಆಗಿ ತೆರೆಬರುತ್ತಿದೆ. ಆದರೆ, ಈ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯಲು ನಾನಿ ಸಿದ್ಧರಿಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಪ್ಯಾರಡೈಸ್ ತೆಲುಗು ಸಿನಿಮಾ ಮಾತ್ರ’ ಎಂದಿದ್ದಾರೆ. ಇದಕ್ಕೆ ಕಾರಣ ವಿವರಿಸಿದ್ದಾರೆ.

‘ಬಾಲಿವುಡ್‌ನ ದೊಡ್ಡ ಸಿನಿಮಾಗಳು ದಕ್ಷಿಣ ಭಾರತ ಸೇರಿದಂತೆ ದೇಶಾದ್ಯಂತ ಹಲವು ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗುತ್ತವೆ. ಆದರೆ ಅವುಗಳನ್ನು ಎಲ್ಲರೂ ಗೌರವದಿಂದ ಹಿಂದಿ ಸಿನಿಮಾ ಎಂದೇ ಕರೆಯುತ್ತಾರೆ ಹೊರತು ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರತ್ಯೇಕ ಸಾಲಿನಲ್ಲಿ ನಿಲ್ಲಿಸುವುದಿಲ್ಲ. ಅದೇ ರೀತಿ ದಕ್ಷಿಣ ಭಾರತದ ಕನ್ನಡ, ತಮಿಳು, ಮಲಯಾಳಂ ಭಾಷೆಯಲ್ಲಿ ಬರುವ ಸಿನಿಮಾಗಳು ದೇಶಾದ್ಯಂತ ಯಶಸ್ವಿಯಾದಾಗ ಮಾತ್ರ ಪ್ಯಾನ್ ಇಂಡಿಯಾ ಎಂಬ ವಿಶೇಷ ಲೇಬಲ್ ಹಚ್ಚುತ್ತಾರೆ. ಇದು ಏಕೆ’ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

YouTube video player

‘ಪ್ಯಾನ್ ಇಂಡಿಯಾ’ ಟ್ಯಾಗ್ ಹಿಂದಿರುವ ಮಾರ್ಕೆಟಿಂಗ್ ತಂತ್ರ

‘ಈ ಲೇಬಲ್ ಸಿನಿಮಾ ಪ್ರಚಾರಕ್ಕೆ ಬೇಕಿದ್ದರೆ ಸಹಾಯ ಮಾಡಬಹುದು, ಆದರೆ ಚಿತ್ರದ ಕಥೆ ಮತ್ತು ಗುಣಮಟ್ಟಕ್ಕೆ ಇದರಿಂದ ಯಾವುದೇ ಮೌಲ್ಯವರ್ಧನೆ ಆಗುವುದಿಲ್ಲ. ಸಿನಿಮಾ ಎನ್ನುವುದು ಕೇವಲ ಸಿನಿಮಾ ಅಷ್ಟೇ. ಅದನ್ನು ಭಾಷೆ ಅಥವಾ ಪ್ರದೇಶದ ಚೌಕಟ್ಟಿನಲ್ಲಿ ಬಂಧಿಸಿ ಹೊಸ ಪದಗಳನ್ನು ಹುಟ್ಟುಹಾಕುವ ಅಗತ್ಯವಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಟ್ರೈಲರ್ ಇಲ್ಲದೇ ರಿಲೀಸ್ ಆಗಲಿದೆ ನಾನಿಯ ‘ದಿ ಪ್ಯಾರಡೈಸ್’ ಏಕೆ?

ಪ್ರೇಕ್ಷಕರಿಗೆ ಮನವಿ

‘ನಾನು ಪ್ರತಿಯೊಬ್ಬರಿಗೂ ಈ ಪದವನ್ನು ಬಳಸಬೇಡಿ ಎಂದು ತಾಕೀತು ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಸಿನಿಮಾಗಳಿಗೆ ಈ ಟ್ಯಾಗ್ ನೀಡುವುದನ್ನು ನಾನು ವೈಯಕ್ತಿಕವಾಗಿ ಇಷ್ಟಪಡುವುದಿಲ್ಲ. ಸಿನಿಮಾವನ್ನು ಭಾರತೀಯ ಸಿನಿಮಾ ಅಥವಾ ಆಯಾ ಮೂಲ ಭಾಷೆಯ ಸಿನಿಮಾ ಎಂದಷ್ಟೇ ಗುರುತಿಸುವುದು ಗೌರವಯುತವಾದದ್ದು’ ಎಂಬುದು ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us