Naatu Naatu Song: ‘ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂಥದ್ದು ನಾಟು ನಾಟು ಹಾಡು’: ಆಸ್ಕರ್​ ಗೆದ್ದಿದ್ದಕ್ಕೆ ಮೋದಿ ಪ್ರಶಂಸೆ

|

Updated on: Mar 13, 2023 | 11:04 AM

PM Narendra Modi | The Elephant Whisperers: ‘ನಾಟು ನಾಟು..’ ಹಾಡು ಮತ್ತು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಒಲಿದಿದೆ. ಈ ತಂಡಗಳಿಗೆ ನರೇಂದ್ರ ಮೋದಿ ಅವರು ಅಭಿನಂದನೆ ತಿಳಿಸಿದ್ದಾರೆ.

Naatu Naatu Song: ‘ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂಥದ್ದು ನಾಟು ನಾಟು ಹಾಡು’: ಆಸ್ಕರ್​ ಗೆದ್ದಿದ್ದಕ್ಕೆ ಮೋದಿ ಪ್ರಶಂಸೆ
ದಿ ಎಲಿಫೆಂಟ್ ವಿಸ್ಪರರ್ಸ್, ನರೇಂದ್ರ ಮೋದಿ, ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​
Follow us on

ಭಾರತೀಯ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಿದೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್​ ಪ್ರಶಸ್ತಿ ಗೆದ್ದು ಬೀಗುತ್ತಿದೆ. ‘ಅತ್ಯುತ್ತಮ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಈ ಗೀತೆಗೆ ಪ್ರಶಸ್ತಿ ಒಲಿದಿದೆ.​ ಇದನ್ನು ಭಾರತದ ಸಿನಿಪ್ರಿಯರು ಸಂಭ್ರಮಿಸುತ್ತಿದ್ದಾರೆ. 95ನೇ ಅಕಾಡೆಮಿ ಅವಾರ್ಡ್ಸ್​ (Academy Awards) ಕಾರ್ಯಕ್ರಮದಲ್ಲಿ ಎಂಎಂ ಕೀರವಾಣಿ ಮತ್ತು ತಂಡದವರು ಪ್ರತಿಷ್ಠಿತ ಪ್ರಶಸ್ತಿ ಪಡೆದು ನಗು ಚೆಲ್ಲಿದ್ದಾರೆ. ಈ ಖುಷಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟ್ವೀಟ್​ ಮಾಡಿದ್ದಾರೆ. ಜೊತೆಗೆ ‘ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್​ ಫಿಲ್ಮ್​’ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ‘ದಿ ಎಲಿಫೆಂಟ್​ ವಿಸ್ಪರರ್ಸ್​’ ತಂಡಕ್ಕೂ ಅವರು ಟ್ವಿಟರ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಅದೇ ರೀತಿ ಅನೇಕ ಸೆಲೆಬ್ರಿಟಿಗಳು ಕೂಡ ಪ್ರಶಸ್ತಿ ವಿಜೇತರ ಬೆನ್ನು ತಟ್ಟುತ್ತಿದ್ದಾರೆ.

‘ನಾಟು ನಾಟು..’ ಹಾಡಿನ ಬಗ್ಗೆ ಮೋದಿ ಟ್ವೀಟ್​:

‘ಜಾಗತಿಕ ಮಟ್ಟದಲ್ಲಿ ನಾಟು ನಾಟು ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಇದು ಮುಂದಿನ ಕಾಲಕ್ಕೂ ನೆನಪಿನಲ್ಲಿ ಉಳಿಯುವಂತಹ ಹಾಡು. ಪ್ರತಿಷ್ಠಿತ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ಗೀತರಚನಕಾರ ಚಂದ್ರಬೋಸ್​ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಭಾರತಕ್ಕೆ ಸಂತಸ ಮತ್ತು ಹೆಮ್ಮೆ’ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 
Ram Charan: ‘ಭಾರತೀಯರಿಗೆ ಆಸ್ಕರ್​ ಪ್ರಶಸ್ತಿ ಅಂದ್ರೆ ಒಲಂಪಿಕ್ಸ್​ ಗೋಲ್ಡ್​ ಮೆಡಲ್​ ಇದ್ದಂಗೆ’: ರಾಮ್​ ಚರಣ್​

ಆನೆ ಸಾಕುವವರ ಜೀವನದ ಕುರಿತು ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಸಾಕ್ಷ್ಯಚಿತ್ರ ತಯಾರಾಗಿದೆ. ಆಸ್ಕರ್​ ಗೆದ್ದಿರುವ ಈ ತಂಡಕ್ಕೂ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮೂರು ವಿಭಾಗಗಳಲ್ಲಿ ಭಾರತದ ಸಿನಿಮಾಗಳು ಈ ಬಾರಿಯ ಆಸ್ಕರ್​ ಸ್ಪರ್ಧೆಗೆ ನಾಮಿನೇಟ್​ ಆಗಿದ್ದವು. ಆ ಪೈಕಿ ಎರಡು ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವುದು ಖುಷಿ ತಂದಿದೆ.

ಇದನ್ನೂ ಓದಿ: The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

‘ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ’ ಎಂದ ಎಂ.ಎಂ. ಕೀರವಾಣಿ:

‘ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ಆಸ್ಕರ್​ ಪ್ರಶಸ್ತಿಯ ಗರಿ ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ. ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಆರ್​ಆರ್​ಆರ್​ ಚಿತ್ರ ಗೆಲ್ಲಬೇಕು, ಪ್ರತಿ ಭಾರತೀಯ ಹೆಮ್ಮೆ ಪಡಬೇಕು. ಈ ಆಸೆ ಈಡೇರಿದೆ’ ಎಂದಿದ್ದಾರೆ ಕೀರವಾಣಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 11:00 am, Mon, 13 March 23