75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್

| Updated By: ಪೃಥ್ವಿಶಂಕರ

Updated on: Sep 22, 2022 | 8:36 PM

ಇತ್ತೀಚೆಗೆ ತೆರೆಗೆ ಬಂದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ 75 ರೂಪಾಯಿ ಟಿಕೆಟ್ ಆಫರ್ ವರದಾನವಾಗಿದೆ.

75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್
Follow us on

ಒಟಿಟಿ (OTT) ವ್ಯಾಪ್ತಿ ಹೆಚ್ಚಿದ ನಂತರದಲ್ಲಿ ಸಿನಿಮಾ ನೋಡಲು ಥಿಯೇಟರ್​ಗೆ ಹೋಗುವವರ ಸಂಖ್ಯೆ ಸ್ವಲ್ಪ ಕಡಿಮೆ ಆಗಿದೆ ಎಂಬುದು ಕೆಲವರ ವಾದ. ಬಾಲಿವುಡ್​ನ ದೊಡ್ಡದೊಡ್ಡ ಸಿನಿಮಾಗಳು ಮಕಾಡೆ ಮಲಗುತ್ತಿರುವುದು ನೋಡಿದರೆ ಇದು ಹೌದೆನ್ನಿಸುತ್ತದೆ. ಟಿಕೆಟ್ ದರ ಹೆಚ್ಚಿಗೆ ಇರುವುದೂ ಕೂಡ ಇದಕ್ಕೆ ಕಾರಣ ಇರಬಹುದು ಎಂದು ಕೆಲವರು ವಾದ ಮಂಡಿಸಿದ್ದಿದೆ. ಈ ವಾದಕ್ಕೆ ಪುಷ್ಟಿ ನೀಡುವಂತಿದೆ 75 ರೂಪಾಯಿ ಟಿಕೆಟ್ ದರದ ಆಫರ್. ರಾಷ್ಟ್ರೀಯ ಸಿನಿಮಾ ದಿನವನ್ನು ಸೆಪ್ಟೆಂಬರ್ 23ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್​ನಲ್ಲಿ (Multiplex) ಟಿಕೆಟ್ ದರವನ್ನು 75 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಹಲವು ಸಿನಿಮಾಗಳ ಶೋಗಳ ಟಿಕೆಟ್​ಗಳು ಸೋಲ್ಡ್​ಔಟ್ ಆಗಿದೆ.

ಇತ್ತೀಚೆಗೆ ತೆರೆಗೆ ಬಂದ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ 75 ರೂಪಾಯಿ ಟಿಕೆಟ್ ಆಫರ್ ವರದಾನವಾಗಿದೆ. ಶುಕ್ರವಾರ (ಸೆಪ್ಟೆಂಬರ್ 23) ಪ್ರೇಕ್ಷಕರು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಬೆಂಗಳೂರು, ಮುಂಬೈ, ದೆಹಲಿ ಸೇರಿ ಬಹುತೇಕ ಎಲ್ಲಾ ಕಡೆಗಳಲ್ಲಿ ಈ ಚಿತ್ರದ ಶೋಗಳು ಸೋಲ್ಡ್​ಔಟ್ ಆಗಿದೆ. ಅಲ್ಲದೆ, ಶೋಗಳನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ. ಹೀಗಾಗಿ, ಸಿನಿಮಾ ಸೆಪ್ಟೆಂಬರ್ 23ರಂದು ಬಾಕ್ಸ್ ಆಫೀಸ್​ನಲ್ಲಿ ‘ಬ್ರಹ್ಮಾಸ್ತ್ರ’ ಬಂಗಾರದ ಬೆಳೆ ತೆಗೆಯುವ ಸಾಧ್ಯತೆ ಇದೆ. ಅನೇಕ ದಾಖಲೆಗಳು ಕೂಡ ನಿರ್ಮಾಣ ಆಗುವ ನಿರೀಕ್ಷೆ ಇದೆ.

‘ಗುರು ಶಿಷ್ಯರು’ ಸಿನಿಮಾ ಸೆಪ್ಟೆಂಬರ್ 23ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೂ ಮಲ್ಟಿಪ್ಲೆಕ್ಸ್​ನಲ್ಲಿ 75 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದರಿಂದ ಚಿತ್ರದ ಕಲೆಕ್ಷನ್​​ಗೆ ಕೊಂಚ ಹೊಡೆತ ಆಗಬಹುದು ಎನ್ನಲಾಗುತ್ತಿದೆ. ಧನಂಜಯ್ ನಟನೆಯ ‘ಮಾನ್ಸೂನ್ ರಾಗ’ ಸೇರಿ ಅನೇಕ ಚಿತ್ರಗಳ ಟಿಕೆಟ್​ಗಳು ವೇಗವಾಗಿ ಬುಕ್ ಆಗುತ್ತಿದೆ.

ಇದನ್ನೂ ಓದಿ: Ranbir Kapoor: 650 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಯ್ತಾ ‘ಬ್ರಹ್ಮಾಸ್ತ್ರ’? ಲಾಸ್​ ಎಂದವರಿಗೆ ರಣಬೀರ್​ ಕೊಟ್ರು ಉತ್ತರ

ಹಾಲಿವುಡ್​ನ ‘ಅವತಾರ್​ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಕಾರಣಕ್ಕೆ ‘ಅವತಾರ್​’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಶುಕ್ರವಾರ ಸರಿಯಾದ ಸಮಯ ಎಂಬಂತಾಗಿದೆ. ಈ ಚಿತ್ರದ ಟಿಕೆಟ್ ಬೆಲೆ ಕೂಡ ಸೆಪ್ಟೆಂಬರ್ 23ರಂದು 75 ರೂಪಾಯಿ ಇದೆ. ಹೀಗಾಗಿ, ಈ ಚಿತ್ರದ ಬಹುತೇಕ ಟಿಕೆಟ್​​ಗಳು ಆನ್​ಲೈನ್​ನಲ್ಲಿ ಮಾರಾಟವಾಗಿದೆ.

Published On - 7:59 pm, Thu, 22 September 22