ವಾಚ್​ಮ್ಯಾನ್​ ಆಗಿ ಕೆಲಸ ಮಾಡಿದ್ದ ಈ ಖ್ಯಾತ ನಟ ಈಗ ಕೋಟಿ ಒಡೆಯ

ನವಾಜುದ್ದೀನಿ ಸಿದ್ದಿಕಿ ಓರ್ವ ಖ್ಯಾತ ನಟ ಎಂಬುದಷ್ಟೇ ಅನೇಕರಿಗೆ ತಿಳಿದಿದೆ. ಆದರೆ ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನು ಅಭಿಮಾನಿಗಳು ಆಗಾಗ ನೆನಪಿಸಿಕೊಳ್ಳುತ್ತಾರೆ.

ವಾಚ್​ಮ್ಯಾನ್​ ಆಗಿ ಕೆಲಸ ಮಾಡಿದ್ದ ಈ ಖ್ಯಾತ ನಟ ಈಗ ಕೋಟಿ ಒಡೆಯ
ನವಾಜುದ್ದೀನ್ ಸಿದ್ದಿಕಿ
Follow us
|

Updated on: Nov 18, 2023 | 10:43 AM

ಚಿತ್ರರಂಗ ಎಲ್ಲರನ್ನೂ ಸ್ವಾಗತಿಸುತ್ತದೆ. ಇಲ್ಲಿ ಬಂದು ಹೇಗೆ ನೆಲೆ ಕಂಡುಕೊಳ್ಳಬೇಕು ಎನ್ನುವ ತಂತ್ರಗಾರಿಕೆ ತಿಳಿದಿದ್ದರೆ ಗೆಲುವು ಸುಲಭ ಆಗುತ್ತದೆ. ಬಾಲಿವುಡ್​ನಲ್ಲಿ ಓರ್ವ ನಟನಿದ್ದಾನೆ. ಅವರ ಕುಟುಂಬಕ್ಕೂ ಬಾಲಿವುಡ್​ಗೂ ಯಾವುದೇ ಸಂಬಂಧ ಇರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಈ ವ್ಯಕ್ತಿಯ ಕನಸು ಬಹಳ ದೊಡ್ಡದಾಗಿತ್ತು. ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾಗ ಈ ನಟ ಒಂದು ತುತ್ತಿನ ಊಟಕ್ಕಾಗಿ, ಕುಟುಂಬವನ್ನು ಪೋಷಿಸುವುದಕ್ಕಾಗಿ ಅವರು ಕೆಲಸಗಳನ್ನು ಮಾಡಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಈ ನಟನ ಆತ್ಮ ವಿಶ್ವಾಸ ಅವರನ್ನು ಯಶಸ್ಸಿನ ಶಿಖರಕ್ಕೇರಿಸಿದೆ. ಸಾಮಾನ್ಯ ಕುಟುಂಬದಿಂದ ಬಂದ ಈ ವ್ಯಕ್ತಿ ಈಗ ಬಾಲಿವುಡ್‌ನ ಅತ್ಯುತ್ತಮ ನಟರ ಪಟ್ಟಿಯಲ್ಲಿ ಇವರಿಗೂ ಸ್ಥಾನ ಇದೆ. ಅವರು ಬೇರಾರು ಅಲ್ಲ ನವಾಜುದ್ದೀನ್ ಸಿದ್ದಿಕಿ (Nawazuddin Siddiqui).

ನವಾಜುದ್ದೀನಿ ಸಿದ್ದಿಕಿ ಓರ್ವ ಖ್ಯಾತ ನಟ ಎಂಬುದಷ್ಟೇ ಅನೇಕರಿಗೆ ತಿಳಿದಿದೆ. ಆದರೆ ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಇದನ್ನು ಅಭಿಮಾನಿಗಳು ಆಗಾಗ ನೆನಪಿಸಿಕೊಳ್ಳುತ್ತಾರೆ. ಅವರು ಕೂಡ ಕೆಲವು ಕಡೆಗಳಲ್ಲಿ ಇದನ್ನು ಹೇಳಿಕೊಂಡಿದ್ದಿದೆ.

ನವಾಜುದ್ದೀನ್ ಸಿದ್ದಿಕಿ ಇಲ್ಲಿಯವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪ್ರತಿ ಸಿನಿಮಾದಲ್ಲೂ ನವಾಜುದ್ದೀನ್ ಸಿದ್ದಿಕಿ ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅವರು ಒಂದೇ ರೀತಿಯ ಪಾತ್ರಕ್ಕೆ ಕಟ್ಟುಬಿದ್ದವರಲ್ಲ. ‘ಸೆಕ್ರೇಡ್ ಗೇಮ್ಸ್’ ವೆಬ್ ಸೀರಿಸ್​ನಲ್ಲಿ ಗಣೇಶ್ ಗಾಯ್ತೊಂಡೆ ಪಾತ್ರ ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದರು. ಅವರು ತಮ್ಮ ಕಲೆಯ ಮೂಲಕ ನೆಲೆ ಕಂಡುಕೊಂಡಿದ್ದಾರೆ.

1999ರಲ್ಲಿ ನವಾಜುದ್ದೀನ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸರ್ಫರೋಷ್’ ಅವರು ನಟಿಸಿದ ಮೊದಲ ಸಿನಿಮಾ. ಅವರು ಬಣ್ಣದ ಬದುಕಿಗೆ ಕಾಲಿಟ್ಟು 24 ವರ್ಷಗಳು ಕಳೆದಿವೆ. ಸಂಭಾಷಣೆಗೆ, ಒಂದು ಪಾತ್ರಕ್ಕೆ ಜೀವ ತುಂಬುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ನವಾಜುದ್ದೀನ್ ಸಿದ್ದಿಕಿ. ನಾಲ್ಕೈದು ಸಿನಿಮಾಗಳು ಅವರ ಕೈಯಲ್ಲಿವೆ. ನವಾಜುದ್ದೀನ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಇತ್ತೀಚೆಗೆ ಸುದ್ದಿಯಲ್ಲಿದ್ದರು. ತಮಗೆ ಕಿರುಕುಳ ನೀಡುತ್ತಿರುವುದಾಗಿ ಅವರ ಪತ್ನಿ ಕೇಸ್ ಹಾಕಿದ್ದರು.

ಇದನ್ನೂ ಓದಿ: ‘ನಾನು ಫ್ರಾಡ್ ಇರಬಹುದು, ಆದರೆ ನನ್ನದು ಶುದ್ಧ ಪ್ರೀತಿ’: ನವಾಜುದ್ದೀನ್ ಸಿದ್ದಿಕಿ

ನವಾಜುದ್ದೀನ್ ಸಿದ್ದಿಕಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಇಂದು ಹಲವಾರು ಏಳುಬೀಳುಗಳನ್ನು ಕಂಡು ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ