ಸಖತ್ ದಪ್ಪ ಇದ್ದ ನಯನತಾರಾ ಸ್ಲಿಮ್ ಆ್ಯಂಡ್ ಫಿಟ್ ಆಗಿದ್ದು ಹೇಗೆ?

ನಯನತಾರಾ ಅವರು ತೂಕ ಇಳಿಸಿಕೊಂಡಿದ್ದು ಅನೇಕರಿಗೆ ಸ್ಫೂರ್ತಿದಾಯಕ. ಅವರು ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಮಿಕ್ಸ್ ಫ್ರುಟ್ಸ್, ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರು. ಅವರು ಸಕ್ಕರೆ ಹಾಗೂ ಸಕ್ಕರೆಯುಕ್ತ ಡ್ರಿಂಕ್ಸ್​ನ ಸಂಪೂರ್ಣವಾಗಿ ತ್ಯಜಿಸಿದ್ದರು.

ಸಖತ್ ದಪ್ಪ ಇದ್ದ ನಯನತಾರಾ ಸ್ಲಿಮ್ ಆ್ಯಂಡ್ ಫಿಟ್ ಆಗಿದ್ದು ಹೇಗೆ?
ನಯನತಾರಾ
Updated By: ರಾಜೇಶ್ ದುಗ್ಗುಮನೆ

Updated on: Oct 06, 2023 | 8:03 AM

ನಯನತಾರಾ ಇಷ್ಟು ವರ್ಷ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿದ್ದರು. ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಅವರು ಗುರುತಿಸಿಕೊಂಡರು. ಈಗ ‘ಜವಾನ್’ ಸಿನಿಮಾ ಮೂಲಕ ನಯನತಾರಾ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಶಾರುಖ್ ಖಾನ್​ಗೆ (Shah Rukh Khan) ಜೊತೆಯಾಗಿ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸೋಕೆ ಅವರು ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ನಯನಾತಾರಾ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ನಯನತಾರಾ ಸಖತ್ ದಪ್ಪ ಇದ್ದರು. ಅವರು ಸಾಕಷ್ಟು ಶ್ರಮ ಹಾಕಿ ತೂಕ ಇಳಿಸಿಕೊಂಡಿದ್ದಾರೆ.

ನಯನತಾರಾ ಚಿತ್ರರಂಗಕ್ಕೆ ಬಂದಿದ್ದು 2003ರಲ್ಲಿ. ಮಲಯಾಳಂ ಚಿತ್ರರಂಗದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಮನಸಿನಕ್ಕರೆ’ ಅವರ ನಟನೆಯ ಮೊದಲ ಸಿನಿಮಾ. ಆ ಬಳಿಕ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆದರು ನಯನತಾರಾ. ನಂತರ ತೆಲುಗು ಸಿನಿಮಾಗಳಲ್ಲೂ ನಟಿಸಿದರು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಕನ್ನಡದ ‘ಸೂಪರ್’ ಚಿತ್ರದಲ್ಲೂ ನಯನತಾರಾ ಬಣ್ಣ ಹಚ್ಚಿದ್ದರು. ಈಗ ಅವರು ಹಿಂದಿಯಲ್ಲೂ ಮಿಂಚುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಅವರು ಲೇಡಿ ಸೂಪರ್​ಸ್ಟಾರ್ ಎಂದೇ ಫೇಮಸ್ ಆಗಿದ್ದಾರೆ.

ನಯನತಾರಾ ಅವರು ತೂಕ ಇಳಿಸಿಕೊಂಡಿದ್ದು ಅನೇಕರಿಗೆ ಸ್ಫೂರ್ತಿದಾಯಕ. ಅವರು ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಮಿಕ್ಸ್ ಫ್ರುಟ್ಸ್, ತರಕಾರಿಗಳನ್ನು ಹೆಚ್ಚು ಸೇವಿಸುತ್ತಿದ್ದರು. ಅವರು ಸಕ್ಕರೆ ಹಾಗೂ ಸಕ್ಕರೆಯುಕ್ತ ಡ್ರಿಂಕ್ಸ್​ನ ಸಂಪೂರ್ಣವಾಗಿ ತ್ಯಜಿಸಿದ್ದರು. ಎಳನೀರನ್ನು ಹೆಚ್ಚು ಕುಡಿಯುತ್ತಿದ್ದರು. ಅವರು ತಮ್ಮದೇ ಆದ ಡಯಟ್ ಹೊಂದಿದ್ದರು.

ನಯನತರಾ ಅವರು ಜಿಮ್​ನಲ್ಲಿ ಹೆಚ್ಚು ವರ್ಕೌಟ್ ಮಾಡುತ್ತಾರೆ. ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಅವರು ವರ್ಕೌಟ್ ತಪ್ಪಿಸುವುದಿಲ್ಲ. ಚರ್ಮದ ಆರೋಗ್ಯಕ್ಕೆ ಅವರು ಹೆಚ್ಚೆಚ್ಚು ನೀರು ಕುಡಿಯುತ್ತಾರೆ. ನಯನತಾರಾ ಅವರು ಜಿಮ್ ಜೊತೆ ಯೋಗ ಕೂಡ ಮಾಡುತ್ತಾರೆ. ಅವರು ಫಿಟ್ನೆಸ್​ ಸೆಷನ್​ನ ಎಂದಿಗೂ ಮಿಸ್ ಮಾಡಿಲ್ಲ. ಈ ಎಲ್ಲಾ ಕಾರಣದಿಂದ ಅವರು ಈಗ ಸಖತ್ ಫಿಟ್ ಆಗಿದ್ದಾರೆ. ‘ಜವಾನ್’ ಸಿನಿಮಾದಲ್ಲಿ ಅವರ ಪಾತ್ರ ಸಾಕಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ಹೇಗಿತ್ತು ನೋಡಿ ನಯನತಾರಾ-ವಿಘ್ನೇಶ್ ಶಿವನ್ ಅವಳಿ ಮಕ್ಕಳ ಮೊದಲ ವರ್ಷದ ಬರ್ತ್​ಡೇ ಸಂಭ್ರಮ

ವಿಘ್ನೇಶ್ ಶಿವನ್ ಜೊತೆ ನಯನತಾರಾ ಅವರು 2022ರ ಜೂನ್ 9ರಂದು ಮದುವೆ ಆದರು. ಇವರ ಮದುವೆ ಸಿಂಪಲ್ ಆಗಿ ನಡೆದಿತ್ತು. ಮೂಲಗಳ ಪ್ರಕಾರ 6 ವರ್ಷದ ಹಿಂದೆಯೇ ಇವರ ಮದುವೆ ನೋಂದಣಿ ನಡೆದಿದೆ ಎನ್ನಲಾಗಿದೆ. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಮಗು ಪಡೆದಿದ್ದಾರೆ. ಅವಳಿ ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ