‘ಪಿಆರ್ಕೆ ಆಡಿಯೋ’ದಲ್ಲಿ ‘ನೀನೊಂದು ಶಾಯರಿ’; ಕಾಡುವ ಕಿರುಚಿತ್ರಕ್ಕೆ ಸಿಕ್ತು ಮೆಚ್ಚುಗೆ
ರಾಕೇಶ್ ಮಯ್ಯ ಮತ್ತು ಅಶ್ವಿತಾ ಹೆಗಡೆ ಅವರು ‘ನೀನೊಂದು ಶಾಯರಿ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರೇಮಿಗಳಾಗಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಸ್ವರಾ ಮತ್ತು ಸಾಗರ್ ಎಂಬ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಈ ಪಾತ್ರಗಳು ನೋಡುಗರಿಂದ ಪ್ರಶಂಸೆ ಗಳಿಸುತ್ತಿವೆ.
ಕನ್ನಡದಲ್ಲಿ ಕಿರುಚಿತ್ರಗಳಿಗೇನೂ ಕೊರತೆ ಇಲ್ಲ. ಅವುಗಳ ನಡುವೆ ಕೆಲವು ಪ್ರಯತ್ನಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇತ್ತೀಚೆಗೆ ‘ಪಿಆರ್ಕೆ ಆಡಿಯೋ’ (PRK Audio) ಮೂಲಕ ‘ನೀನೊಂದು ಶಾಯರಿ’ ಶಾರ್ಟ್ ಫಿಲ್ಮ್ (Kannada Short Film) ಬಿಡುಗಡೆ ಆಗಿದೆ. 20 ನಿಮಿಷ ಅವಧಿಯ ಈ ಕಿರುಚಿತ್ರಕ್ಕೆ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನೋಡಿದ ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಕೇವಲ ಎರಡು ಪಾತ್ರಗಳನ್ನು ಹೊಂದಿರುವ ‘ನೀನೊಂದು ಶಾಯರಿ’ (Neenondu Shayari) ಕಿರುಚಿತ್ರವು ತುಂಬ ಕಾವ್ಯಾತ್ಮಕವಾಗಿ ಮೂಡಿಬಂದಿದೆ. ದಿನ ಕಳೆದಂತೆ ‘ಪಿಆರ್ಕೆ ಆಡಿಯೋ’ದಲ್ಲಿ ಇದರ ವೀಕ್ಷಣೆ ಹೆಚ್ಚಾಗುತ್ತಿದೆ.
ರಾಕೇಶ್ ಮಯ್ಯ ಮತ್ತು ಅಶ್ವಿತಾ ಹೆಗಡೆ ಅವರು ‘ನೀನೊಂದು ಶಾಯರಿ’ ಕಿರುಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪ್ರೇಮಿಗಳಾಗಿ ಅವರಿಬ್ಬರು ಕಾಣಿಸಿಕೊಂಡಿದ್ದಾರೆ. ಇಬ್ಬರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ. ಸ್ವರಾ ಮತ್ತು ಸಾಗರ್ ಎಂಬ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ. ಈ ಪಾತ್ರಗಳು ನೋಡುಗರಿಂದ ಪ್ರಶಂಸೆ ಗಳಿಸುತ್ತಿವೆ. ಒಂದು ಕವನದ ರೀತಿ ಮೂಡಿಬಂದಿರುವ ಈ ಕಿರುಚಿತ್ರದ ಲವ್ಸ್ಟೋರಿ ಇಷ್ಟವಾಗುವಂತಿದೆ. ‘ಮಳೆ ಎಲ್ಲರಿಗೂ ರೊಮ್ಯಾಂಟಿಕ್ ಆಗಿರುವುದಿಲ್ಲ. ಕೆಲವರಿಗೆ ಕಣ್ಣೀರು ಮರೆಮಾಚಲು, ಇನ್ನೂ ಕೆಲವರಿಗೆ ನೆನಪುಗಳ ಮರೆಯಲು..’ ಎಂಬಿತ್ಯಾದಿ ಡೈಲಾಗ್ಗಳಿಂದಾಗಿ ‘ನೀನೊಂದು ಶಾಯರಿ’ಯ ಅಂದ ಹೆಚ್ಚಿದೆ.
ಇದನ್ನೂ ಓದಿ: ‘ಕಾಮಿಡಿ ಕಿಲಾಡಿಗಳು’ ನಟ ಸೀರುಂಡೆ ರಘು ಹೀರೋ ಆಗಿರುವ ‘ರಣಾಕ್ಷ’ ಚಿತ್ರದ ಆಡಿಯೋ ಬಿಡುಗಡೆ
ಭರತ ಕೆ. ತುಮಕೂರು ಅವರು ‘ನೀನೊಂದು ಶಾಯರಿ’ ಕಿರುಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಂಭಾಷಣೆ ಕೂಡ ಅವರದ್ದೇ. ಅವಿನಾಶ ಶಾಸ್ತ್ರಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಕಥೆಯ ಜೊತೆಗೆ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಪ್ರಸನ್ನ ಕುಮಾರ್ ಎಂ.ಎಸ್. ಅವರ ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ. ಸಂಜೀವ್ ಜಾಗಿರ್ದಾರ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘4s ಪ್ರೊಡಕ್ಷನ್’ ಮತ್ತು ‘ಕ್ಲ್ಯಾಪ್ಬೋರ್ಡ್ ಪ್ರೊಡಕ್ಷನ್’ ಮೂಲಕ ಈ ಶಾರ್ಟ್ಫಿಲ್ಮ್ ನಿರ್ಮಾಣ ಆಗಿದೆ.
‘ನೀನೊಂದು ಶಾಯರಿ’ ಕಿರುಚಿತ್ರ:
ರಂಗಭೂಮಿ ಹಿನ್ನೆಲೆ ಹೊಂದಿರುವ ಅಶ್ವಿತಾ ಹೆಗಡೆ ಅವರು ಈ ಮೊದಲು ‘ಕಂಬ್ಳಿಹುಳ’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರು ‘ನೀನೊಂದು ಶಾಯರಿ’ ಶಾರ್ಟ್ ಫಿಲ್ಮ್ ಮೂಲಕ ಗಮನ ಸಳೆಯುತ್ತಿದ್ದಾರೆ. ಇನ್ನು, ‘ಮಗಳು ಜಾನಕಿ’ ಸೀರಿಯಲ್ನಲ್ಲಿ ಪ್ರಮುಖ ಪಾತ್ರ ಮಾಡಿ ಜನಮನ ಗೆದ್ದ ನಟ ರಾಕೇಶ್ ಮಯ್ಯ ಅವರು ಈಗಾಗಲೇ ‘ಖುಷ್ ಖುಷಿಯಾಗಿ’ ರೀತಿಯ ಕಿರುಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನಟನೆಯಿಂದ ‘ನೀನೊಂದು ಶಾಯರಿ’ ತೂಕ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ