ಚಿರಂಜೀವಿ ಕುಟುಂಬದ ಕುಡಿ ನಿಹಾರಿಕಾ ಬರ್ತ್ಡೇ; ಎರಡನೇ ಮದುವೆ ಆಲೋಚನೆ ಮಾಡಿದ ನಟಿ
ನಿಹಾರಿಕಾ ಅವರ ಜನ್ಮದಿನಕ್ಕೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು 2020ರ ಡಿಸೆಂಬರ್ 9ರಂದು ಮದುವೆ ಆದರು. ರಾಜಸ್ಥಾನದಲ್ಲಿ ಈ ಮದುವೆ ನಡೆದಿತ್ತು. ಅವರು ಕಳೆದ ವರ್ಷ ಜುಲೈನಲ್ಲಿ ವಿಚ್ಛೇದನ ವಿಚಾರ ಘೋಷಣೆ ಮಾಡಿದರು. ಅವರ ವಿಚ್ಛೇದನಕ್ಕೆ ಹಲವು ಕಾರಣಗಳು ಇದ್ದವಂತೆ.

ನಿಹಾರಿಕಾ ಕೊನಿಡೆಲಾ ಅವರು ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಅವರು ಚಿರಂಜೀವಿ ಸಹೋದರ ನಾಗಬಾಬು ಅವರ ಮಗಳು. ಅವರು ಉದ್ಯಮಿ ಚೈತನ್ಯ ಜೊನ್ನಲಗಡ್ಡ ಅವರನ್ನು ಪ್ರೀತಿಸಿ ಮದುವೆ ಆದರು. ಸೆಲೆಬ್ರಿಟಿ ಮನೆಯ ಮದುವೆ ಎಂಬ ಕಾರಣಕ್ಕೆ ದೊಡ್ಡ ಮಟ್ಟದಲ್ಲೇ ನಡೆಯಿತು. ಆದರೆ, ಕೆಲವೇ ವರ್ಷಗಳಲ್ಲಿ ಇವರ ಸಂಬಂಧ ಕೊನೆಯಾಗಿದೆ. ಇಂದು (ಮಾರ್ಚ್ 18) ಅವರ ಜನ್ಮದಿನ. ಈ ವಿಶೇಷ ದಿನದ ಸಂದರ್ಭದಲ್ಲೇ ಅವರು ಎರಡನೇ ಮದುವೆ ಆಗುವ ಆಲೋಚನೆ ಮಾಡಿದ್ದಾರೆ. ಹಾಗಂತ ಅವರು ಕೆಲವೇ ದಿನಗಳಲ್ಲಿ ವಿವಾಹ ಆಗುತ್ತಿಲ್ಲ. ಅವರು ಈ ಬಗ್ಗೆ ಹೆಚ್ಚು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ.
ನಿಹಾರಿಕಾ ಅವರ ಜನ್ಮದಿನಕ್ಕೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು 2020ರ ಡಿಸೆಂಬರ್ 9ರಂದು ಮದುವೆ ಆದರು. ರಾಜಸ್ಥಾನದಲ್ಲಿ ಈ ಮದುವೆ ನಡೆದಿತ್ತು. ಅವರು ಕಳೆದ ವರ್ಷ ಜುಲೈನಲ್ಲಿ ವಿಚ್ಛೇದನ ವಿಚಾರ ಘೋಷಣೆ ಮಾಡಿದರು. ಅವರ ವಿಚ್ಛೇದನಕ್ಕೆ ಹಲವು ಕಾರಣಗಳು ಇದ್ದವಂತೆ. ಆದರೆ, ಅದೆಲ್ಲವನ್ನೂ ವಿವರಿಸೋದು ಕಷ್ಟ ಎಂದು ಅವರು ಹೇಳಿದ್ದಾರೆ. ಜೊತೆಗೆ ಮತ್ತೊಂದು ಮದುವೆಯ ಬಗ್ಗೆಯೂ ಮಾತತನಾಡಿದ್ದಾರೆ.
‘ನನಗೆ ಮಕ್ಕಳು ಎಂದರೆ ಇಷ್ಟ. ಆದರೆ, ಮದುವೆ ಆಗೋಕೆ ಅದೊಂದೇ ಕಾರಣ ಅಲ್ಲ. ನನಗೆ ಪ್ರೀತಿ ಬಗ್ಗೆ ಯಾವುದೇ ನೆಗೆಟಿವ್ ಆಲೋಚನೆ ಇಲ್ಲ. ಒಂದು ಸಂಬಂಧ ಕೆಟ್ಟಿದೆ ಎಂದರೆ ಅದಕ್ಕೆ ಹಲವು ಕಾರಣಗಳು ಇರುತ್ತವೆ. ಒಂದು ಕಾರಣಕ್ಕೆ ಯಾರಾದರೂ ಬ್ರೇಕಪ್ ಮಾಡಿಕೊಳ್ಳುತ್ತಾರಾ’ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ತಮ್ಮ ಡಿವೋರ್ಸ್ಗೆ ಹಲವು ಕಾರಣ ಇದೆ ಎಂದು ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
‘ನಾನು ಮತ್ತೆ ಮದುವೆ ಆಗಬಹುದು. ಆದರೆ, ಸದ್ಯಕ್ಕಂತೂ ಅಲ್ಲ’ ಎಂದಿದ್ದಾರೆ. ‘ಎರಡನೇ ಮದುವೆಗೆ ಲವ್ ಮ್ಯಾರೇಜ್ ಆಯ್ಕೆ ಮಾಡಿಕೊಳ್ಳುತ್ತೀರೋ ಅಥವಾ ಅರೇಂಜ್ ಮ್ಯಾರೇಜ್ ಆಯ್ಕೆ ಮಾಡಿಕೊಳ್ಳುತ್ತೀರೋ’ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಅವರು ನೇರ ಉತ್ತರ ನೀಡಿಲ್ಲ. ‘ನಾನು ಸದ್ಯಕ್ಕೆ ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ
ನಿಹಾರಿಕಾ ಕೊನಿಡೆಲಾ ಸ್ಟಾರ್ ಕಿಡ್. ಹೀಗಾಗಿ ಚಿತ್ರರಂಗದಲ್ಲಿ ಸುಲಭದಲ್ಲಿ ಅವಕಾಶ ಸಿಕ್ಕಿತು. ಆದರೆ, ಅವರಿಗೆ ಅಷ್ಟು ಸುಲಭದಲ್ಲಿ ಗೆಲುವು ಸಿಕ್ಕಿಲ್ಲ. 2016ರಲ್ಲಿ ರಿಲೀಸ್ ಆದ ‘ಒಕ ಮನಸು’ ಸಿನಿಮಾ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆದರು. 2019ರಲ್ಲಿ ರಿಲೀಸ್ ಆದ ‘ಸೈರಾ ನರಸಿಂಹ ರೆಡ್ಡಿ’ ಅವರ ನಟನೆಯ ಕೊನೆಯ ಚಿತ್ರ. ಇದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಇತ್ತೀಚೆಗೆ ಅವರು ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅವರು ನಿರ್ಮಾಣದಲ್ಲೂ ತೊಡಗಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ