Rider Movie: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್

Nikhil Kumaraswamy Rider Song Release: ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಹಾಡು ಇಂದು ರಿಲೀಸ್ ಆಗಿದೆ.

Rider Movie: ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್
ರೈಡರ್ ಸಿನಿಮಾ
Edited By:

Updated on: Oct 16, 2021 | 7:33 PM

ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನಾಯಕನಾಗಿ ಕಾಣಿಸಿಕೊಂಡಿರುವ ರೈಡರ್ ಸಿನಿಮಾದ (Rider Movie) ಮೊದಲ ಹಾಡು ಇದೀಗ ರಿಲೀಸ್ ಆಗಿದೆ. ಈ ವಿಡಿಯೋ ಸಾಂಗ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ಯುವ ನಟಿ ಕಾಶ್ಮೀರಿ ಪರ್ದೇಸಿ ಅವರ ಮುದ್ದಾದ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಟನೆಯ ವಿಜಯ್ ಕುಮಾರ್ ಕೊಂಡ ನಿರ್ದೇಶನದ ಬಹುನಿರೀಕ್ಷೆಯ ‘ರೈಡರ್’ ಸಿನಿಮಾದ ‘ಡವ್ವ ಡವ್ವ’ ಹಾಡು ಇಂದು ರಿಲೀಸ್ ಆಗಿದೆ. ಲಹರಿ ಮ್ಯೂಸಿಕ್ ಹಾಗೂ ಟಿ- ಸಿರೀಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಲಹರಿ ಸಂಸ್ಥೆಯ ಯೂಟ್ಯೂಬ್ ಚಾನೆಲ್​ನಲ್ಲಿ ಈ ರೈಡರ್ ಸಿನಿಮಾದ ಹಾಡು ರಿಲೀಸ್ ಆಗಿದೆ. ರೈಡರ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಡವ್ವ ಡವ್ವ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅರ್ಮಾನ್ ಮಲಿಕ್ ಈ ಹಾಡನ್ನು ಹಾಡಿದ್ದಾರೆ.

ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಕಾಶ್ಮೀರಿ ಪರ್ದೇಸಿ ರೈಡರ್ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ಇನ್ನೋರ್ವ ನಾಯಕಿಯಾಗಿ ಅನುಷಾ ರೈ ನಟಿಸಿದ್ದಾರೆ. ಮಂಜು ಪಾವಗಡ, ಗರುಡ ರಾಮ್, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇಂದು ನಡೆದ ರೈಡರ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಜೊತೆ ಸ್ಕ್ರೀನ್ ಶೇರ್ ಮಾಡಿರೋ ಅನುಭವವನ್ನು ಕಾಶ್ಮೀರಿ ಪರ್ದೇಸಿ ಹಾಗೂ ಮಂಜು ಪಾವಗಡ ಹಂಚಿಕೊಂಡಿದ್ದಾರೆ.

ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಕಮಾಲ್ ಮಾಡಿರೋ ನಿಖಿಲ್‌ ಕುಮಾರಸ್ವಾಮಿ ಅವರ ರೈಡರ್ ಸಿನಿಮಾ ಟೀಸರ್ ಈಗಾಗಲೇ ಭಾರೀ ಸದ್ದು ಮಾಡುತ್ತಿದೆ. ಅದರ ಜೊತೆಗೆ ಡವ್ವಾ ಡವ್ವಾ ಡವ್ವ ಹಾಡು ರಿಲೀಸ್ ಆಗಿದೆ. ರೈಡರ್ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಈ ಸಿನಿಮಾ ಟೀಸರ್ ಸಾಕಷ್ಟು ಸದ್ದು ಮಾಡಿದ್ದು. ಅಭಿಮಾನಿಗಳು ಈ ಸಿನಿಮಾದ ಟೀಸರ್‌ ನೋಡಿ ʼರೈಡರ್’ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ: ನಿಖಿಲ್​ ಕುಮಾರಸ್ವಾಮಿ ಬೆನ್ನಲ್ಲೇ ರೈಡರ್​ ಚಿತ್ರತಂಡಕ್ಕೂ ಕೊರೊನಾ