ಸಣ್ಣ ಮಕ್ಕಳಂತೆ ಮಾತನಾಡುತ್ತಾರೆ ನಿತ್ಯಾ ಮೆನನ್; ಎಷ್ಟು ಕ್ಯೂಟ್ ನೋಡಿ

Nithya Menen: ಕನ್ನಡತಿ ನಿತ್ಯಾ ಮೆನನ್ ಸದ್ದು ಮಾಡಿರುವುದು ಪರಭಾಷೆ ಸಿನಿಮಾಗಳಲ್ಲಿ. ಪರ ಭಾಷೆಯಲ್ಲೇ ಹೆಚ್ಚು ಸಿನಿಮಾಗಳನ್ನು ಮಾಡಿದ್ದರೂ ಸಹ ಕನ್ನಡತನವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ ಈ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿರುವ ನಿತ್ಯಾ ಮೆನನ್ ನಟನೆ ಜೊತೆಗೆ ಮಿಮಿಕ್ರಿ ಕಲೆ ಸಹ ಬಲ್ಲರು.

ಸಣ್ಣ ಮಕ್ಕಳಂತೆ ಮಾತನಾಡುತ್ತಾರೆ ನಿತ್ಯಾ ಮೆನನ್; ಎಷ್ಟು ಕ್ಯೂಟ್ ನೋಡಿ
Nithya Menen
Edited By:

Updated on: Jul 20, 2025 | 11:09 PM

ನಟಿ ನಿತ್ಯಾ ಮೆನನ್ ಅವರು ಯಾವಾಗಲೂ ಸುದ್ದಿ ಆಗುವ ನಟಿ. ಅವರು ಬೆಂಗಳೂರು ಕಾಲೇಜಿನಲ್ಲೇ ಶಿಕ್ಷಣ ಪಡೆದಿದ್ದಾರೆ. ಅವರು ಸ್ಪಷ್ಟವಾಗಿ ಕನ್ನಡ ಮಾತನಾಡ ಬಲ್ಲರು. ಅವರು ಸ್ಪಷ್ಟವಾಗಿ ಮಾತನಾಡುವ ಹಾಗೂ ಬರೆಯುವ ಭಾಷೆ ಎಂದರೆ ಕನ್ನಡ. ಅವರು ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಅವರು ಕ್ಯೂಟ್ ಆಗಿ ಮಾತನಾಡಿದ್ದಾರೆ. ಚಿಕ್ಕ ಮಕ್ಕಳಂತೆ ಮಿಮಿಕ್ರಿ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

ನಿತ್ಯಾ ಮೆನನ್ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. 2006ರಲ್ಲಿ ರಿಲೀಸ್ ಆದ ‘7 ಓ ಕ್ಲಾಕ್’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಆಗ ಅವರದ್ದು ಪೋಷಕ ಪಾತ್ರ ಆಗಿತ್ತು. ನಂತರ ಮಲಯಾಂ ಸಿನಿಮಾಗಳಲ್ಲಿ ಅವರಿಗೆ ಹೀರೋಯಿನ್ ಆಗಿ ನಟಿಸೋ ಅವಕಾಶ ಸಿಕ್ಕವು. ನಂತರ ಕನ್ನಡದಲ್ಲೂ ಅವರು ನಟಿಸಿದರು. ಕನ್ನಡದ ‘ಮೈನಾ’ ಅವರ ಜನಪ್ರಿಯತೆ ಹೆಚ್ಚಿಸಿತು.

ನಿತ್ಯಾ ಅವರು ಕನ್ನಡದಲ್ಲಿ ಕೊನೆಯದಾಗಿ ನಟಿಸಿದ ಸಿನಿಮಾದ ಎಂದರೆ 2016ರ ‘ಕೋಟಿಗೊಬ್ಬ 2’. ಸುದೀಪ್ ಅವರು ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಇದಾದ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ. ಈಗ ನಿತ್ಯಾ ಅವರು ಸಂದರ್ಶನದಲ್ಲಿ ತಮ್ಮ ಟ್ಯಾಲೆಂಟ್ ತೋರಿಸಿದ್ದಾರೆ.

ಇದನ್ನೂ ಓದಿ:ನಿತ್ಯಾ ಮೆನನ್ ಅದೆಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನೋಡಿ

ನಿತ್ಯಾ ಮೆನನ್ ಅವರು ಸಣ್ಣ ಮಕ್ಕಳು ಮಾತನಾಡಿದಂತೆ ಮಿಮಿಕ್ರಿ ಮಾಡಿದ್ದಾರೆ. ಅವರ ಮಿಮಿಕ್ರಿ ನೋಡಿ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅವರು ಮಿಮಿಕ್ರಿ ಮಾಡುತ್ತಾ ನಂತರ ನಾರ್ಮಲ್ ಟೋನ್​ಗೆ ಬಂದರು. ಇದನ್ನು ನೋಡಿ ಜನರು ಅಚ್ಚರಿಗೊಂಡರು. ಇದನ್ನು ಮಾಡೋಕೆ ನಿತ್ಯಾ ಅವರಿಂದ ಮಾತ್ರ ಸಾಧ್ಯ ಎಂದು ಅನೇಕರು ಹೇಳಿಕೊಂಡಿದ್ದಾರೆ.

ನಿತ್ಯಾ ಮೆನನ್ ಅವರಿಗೆ ಈಗಾಗಲೇ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಇದು ಅವರ ಖುಷಿಯನ್ನು ಹೆಚ್ಚಿಸಿದೆ. ಸದ್ಯ ಅವರು ತಮಿಳು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಥಲೈವಿ ಥಲೈವಿ’ ಸಿನಿಮಾದಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಇಡ್ಲಿ ಕಡಾಯಿ’ ಹೆಸರಿನ ಚಿತ್ರವನ್ನು ಕೂಡ ಅವರು ಮಾಡುತ್ತಿದ್ದಾರೆ. ಅವರ ವಿವಾಹ ಯಾವಾಗ ಎನ್ನುವ ಪ್ರಶ್ನೆ ಅಭಿಮಾನಿಗಳಿಂದ ಬರುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ