ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿರುವುದೇಕೆ ನಿತ್ಯಾ ಮೆನನ್: ಕೊಟ್ಟರು ಉತ್ತರ

ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿರುವ ನಿತ್ಯಾ ಮೆನನ್ ಅವರು ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ದಶಕಗಳಿಂದಲೂ ಚಿತ್ರರಂಗದಲ್ಲಿರುವ ನಿತ್ಯಾ ಮೆನನ್, ಭಿನ್ನ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅವಕ್ಕೆ ಜೀವ ತುಂಬುತ್ತಾರೆ. ಆದರೆ ನಿತ್ಯಾ ಮೆನನ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನೇ ಕಡಿಮೆ ಮಾಡಿದ್ದಾರೆ. ಅದಕ್ಕೆ ಕಾರಣವೇನು ಎಂದು ಖುದ್ದು ನಟಿ ನಿತ್ಯಾ ಮೆನನ್ ವಿವರಿಸಿದ್ದಾರೆ.

ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿರುವುದೇಕೆ ನಿತ್ಯಾ ಮೆನನ್: ಕೊಟ್ಟರು ಉತ್ತರ
Nitya Menon

Updated on: Nov 23, 2026 | 11:31 AM

ಮುಖ್ಯಾಂಶಗಳು

  • ನಟಿ ನಿತ್ಯಾ ಮೆನನ್ ಅಪ್ಪಟ ಕನ್ನಡದ ನಟಿ
  • ಹಲವಾರು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ
  • ಇತ್ತೀಚೆಗೆ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿರುವ ಬಗ್ಗೆ ನಟಿ ಮಾತು

ನಟಿ ನಿತ್ಯಾ ಮೆನನ್ ಅಪ್ಪಟ ಕನ್ನಡತಿ. ಬೆಂಗಳೂರಿನ ಈ ಹುಡುಗಿ ಮಿಂಚಿದ್ದು ಮಾತ್ರ ಪರಭಾಷೆ ಸಿನಿಮಾಗಳಲ್ಲಿ. ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿರುವ ನಿತ್ಯಾ ಮೆನನ್ ಅವರು ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ದಶಕಗಳಿಂದಲೂ ಚಿತ್ರರಂಗದಲ್ಲಿರುವ ನಿತ್ಯಾ ಮೆನನ್, ಭಿನ್ನ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅವಕ್ಕೆ ಜೀವ ತುಂಬುತ್ತಾರೆ. ಆದರೆ ನಿತ್ಯಾ ಮೆನನ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದನ್ನೇ ಕಡಿಮೆ ಮಾಡಿದ್ದಾರೆ. ಅದಕ್ಕೆ ಕಾರಣವೇನು ಎಂದು ಖುದ್ದು ನಟಿ ನಿತ್ಯಾ ಮೆನನ್ ವಿವರಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವ ಬಗ್ಗೆ ಹಾಗೂ ಚಿತ್ರೀಕರಣವಿಲ್ಲದ ಸಮಯದಲ್ಲಿ ತಾವು ಹೇಗೆ ಸಮಯ ಕಳೆಯುತ್ತೇನೆ ಎಂಬ ಬಗ್ಗೆ ಮೆನನ್ ಮಾತನಾಡಿದ್ದಾರೆ, ಸಿನಿಮಾಕ್ಕಿಂತಲೂ ಜೀವನ ಬಹಳ ದೊಡ್ಡದು ಮತ್ತು ಮುಖ್ಯವಾದುದು. ಕಲಿಯಲು, ಹೊಸದನ್ನು ಅನ್ವೇಷಿಸಲು ಹಲವಾರು ದಾರಿಗಳಿವೆ. ಅವುಗಳನ್ನು ಮಾಡಬೇಕಿದೆ. ಕೆಲಸವು ಪರಿಪೂರ್ಣ ಜೀವನದ ಒಂದು ಮುಖ ಮಾತ್ರ ಎಂದು ಮೆನನ್ ವಿವರಿಸಿದರು.

Loading...

ನಿತ್ಯಾ ಮೆನನ್ ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಯ್ತು. ಕೊನೆಯ ಬಾರಿ ಅವರು ಧನುಷ್ ನಟನೆಯ ‘ಇಡ್ಲಿ ಕಡೈ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಿತ್ತು. ನಾಯಕಿಯೊಬ್ಬರು ಎರಡು ಸಿನಿಮಾಗಳ ನಡುವೆ ಇಷ್ಟು ದೊಡ್ಡ ಅಂತರ ಇಟ್ಟುಕೊಳ್ಳುವುದಿಲ್ಲ. ಆದರೆ ನಿತ್ಯಾ ಮೆನನ್ ಹೇಳಿರುವಂತೆ ಅವರು ಬೇಕೆಂದೇ ಸಿನಿಮಾಗಳ ನಡುವೆ ಬ್ರೇಕ್ ತೆಗೆದುಕೊಳ್ಳುತ್ತಾರಂತೆ. ಇದೀಗ ಅವರ ನಟನೆಯ ‘ಮಿಸ್ಟರ್ ಆಂಡ್ ಮಿಸಸ್ ಗ್ರೇ’ ಹೆಸರಿನ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಭಾರಿ ನಿರಾಸೆ, ಸಿನಿಮಾ ರಿಲೀಸ್ ಮುಂದೂಡಿಕೆ

ಚಿತ್ರೀಕರಣದಿಂದ ವಿರಾಮ ಪಡೆದಾಗ ತಾನು ಏನು ಮಾಡುತ್ತೇನೆಂದು ವಿವರಿಸಿದ ನಟಿ, ವಿರಾಮದ ಸಮಯದಲ್ಲಿ ಮನೆಯಲ್ಲೇ ಇದ್ದು ಹೊಸ ವಿಷಯಗಳನ್ನು ಕಲಿಯುವುದನ್ನು ತಾವು ಇಷ್ಟಪಡುತ್ತೇನೆ. ಸಿನಿಮಾಗಳಿಂದ ದೀರ್ಘವಾದ ಬ್ರೇಕ್ ತೆಗೆದುಕೊಳ್ಳುವಾಗೆಲ್ಲ, ನನ್ನ ನಿರ್ಧಾರಗಳ ಬಗ್ಗೆ ನನಗೇ ಅನುಮಾನಗಳು ಮೂಡುತ್ತವೆ. ಆದರೆ ಈ ವಿರಾಮಗಳು ತಮ್ಮ ಸೃಜನಶೀಲ ಪ್ರಕ್ರಿಯೆಗೆ ಅತ್ಯಗತ್ಯ ಎಂಬುದು ನಟಿಯ ನಿಲವು. ತಮ್ಮನ್ನು ತಾವು ಒಂದು ಹೂವಿಗೆ ಹೋಲಿಸಿಕೊಂಡ ಅವರು, ತಮ್ಮ ಸುತ್ತಮುತ್ತಲಿನಿಂದಲೇ ಪೋಷಣೆ ಮತ್ತು ಸ್ಫೂರ್ತಿ ಪಡೆಯುತ್ತೇನೆ ಎಂದು ಹೇಳಿದರು. ತಮಗೆ ಯಂತ್ರದಂತೆ ಕೆಲಸ ಮಾಡಲು ಅಥವಾ ಕೃತಕ ಅಭಿನಯ ಮಾಡಲು ಆಗುವುದಿಲ್ಲ’ ಎಂದಿದ್ದಾರೆ ನಿತ್ಯಾ.

ನಟನೆಗೆ ಬೇಕಾದ ನೈಜತೆ ಒಳಗಿನಿಂದಲೇ ಹುಟ್ಟುಬೇಕು. ಪಾತ್ರಗಳನ್ನು ಸಹಜವಾಗಿ ಆವಾಹಿಸಿಕೊಳ್ಳಲು ಸಾಕಷ್ಟು ತಯಾರಿ ಬೇಕಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ, ಜನರಿಂದಲೇ ಹೊಸ ಪಾತ್ರಗಳಲ್ಲಿ ನಟಿಸಲು ಸ್ಪೂರ್ತಿ ಸಿಗುತ್ತದೆ, ಚಿತ್ರಗಳ ನಡುವೆ ವಿಶ್ರಾಂತಿ, ಸ್ಪೂರ್ತಿಯನ್ನು, ಶಕ್ತಿಯನ್ನು ಮರಳಿ ನೀಡುತ್ತದೆ ಎಂದಿದ್ದಾರೆ ನಟಿ.

2006 ರಲ್ಲಿ ಬಿಡುಗಡೆ ಆದ ‘ಸೆವೆನ್ ಓ ಕ್ಲಾಕ್’ ಕನ್ನಡ ಸಿನಿಮಾ ಮೂಲಕ ನಾಯಕಿಯಾಗಿ ನಟನೆ ಆರಂಭಿಸಿದ ನಿತ್ಯಾ ಮೆನನ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇತ್ತೀಚೆಗೆ ತುಸು ಕಡಿಮೆ ಸಿನಿಮಾಗಳಲ್ಲಿ ನಿತ್ಯಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us