AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ರಾಮಾಯಣ’

ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗುತ್ತಾ ಬರುತ್ತಿದ್ದು, ಈಗಲೂ ಸಹ ಸಿನಿಮಾದ ಗಳಿಕೆಯ ವೇಗ ಕಡಿಮೆ ಆಗಿಲ್ಲ. ವಾರದ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ತುಸು ಕಡಿಮೆ ಆಗಿತ್ತಾದರೂ ವೀಕೆಂಡ್​​ನಲ್ಲಿ ಮತ್ತೆ ವೇಗ ಪಡೆದುಕೊಂಡಿದೆ. ಆ ಮೂಲಕ 2000 ಕೋಟಿ ಕಲೆಕ್ಷನ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ ಸಿನಿಮಾ.

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ರಾಮಾಯಣ’
Ramayana Movie
ಮಂಜುನಾಥ ಸಿ.
|

Updated on: Nov 23, 2026 | 8:32 AM

Share

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾ ಕಲೆಕ್ಷನ್
  • ಭಾನುವಾರ ‘ರಾಮಾಯಣ’ ಸಿನಿಮಾದ ಗಳಿಕೆ
  • ಭಾನುವಾರ ಈ ಸಿನಿಮಾ ಗಳಿಕೆ ಮಾಡಿದ್ದೆಷ್ಟು?

ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗುತ್ತಾ ಬರುತ್ತಿದ್ದು, ಈಗಲೂ ಸಹ ಸಿನಿಮಾದ ಗಳಿಕೆಯ ವೇಗ ಕಡಿಮೆ ಆಗಿಲ್ಲ. ವಾರದ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ತುಸು ಕಡಿಮೆ ಆಗಿತ್ತಾದರೂ ವೀಕೆಂಡ್​​ನಲ್ಲಿ ಮತ್ತೆ ವೇಗ ಪಡೆದುಕೊಂಡಿದೆ. ಆ ಮೂಲಕ 2000 ಕೋಟಿ ಕಲೆಕ್ಷನ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ ಸಿನಿಮಾ.

ನಿನ್ನೆಗೆ (ಭಾನುವಾರ) ‘ರಾಮಾಯಣ’ ಸಿನಿಮಾ ರಿಲೀಸ್ ಆಗಿ 18 ದಿನಗಳಾಗಿವೆ. ಭಾನುವಾರ ಸಿನಿಮಾದ ಕಲೆಕ್ಷನ್​​ನಲ್ಲಿ ದೊಡ್ಡ ಮೊತ್ತದ ಏರಿಕೆ ಆಗಿದ್ದು, ಭಾನುವಾರ ಒಂದೇ ದಿನ ‘ರಾಮಾಯಣ’ ಸಿನಿಮಾ 35.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾ ರಿಲೀಸ್ ಆಗಿ 18ನೇ ದಿನಕ್ಕೆ 35 ಕೋಟಿ ಗಳಿಕೆ ಮಾಡಿರುವುದು ಸಾಮಾನ್ಯ ಸಾಧನೆಯಲ್ಲ. ಈ ಮೂಲಕ ‘ಧುರಂಧರ್ 2’ ಮತ್ತು ‘ಪುಷ್ಪ 2’ ಸಿನಿಮಾಗಳ ದಾಖಲೆಯನ್ನೂ ಸಹ ಮುರಿದಿದೆ ಈ ಸಿನಿಮಾ.

ಈ ವೀಕೆಂಡ್​​​ನಲ್ಲಿ ‘ರಾಮಾಯಣ’ ಸಿನಿಮಾಕ್ಕೆ ಭರ್ಜರಿ ಕಲೆಕ್ಷನ್ ಆಗಿದೆ. ಶನಿವಾರದಂದು 27.65 ಕೋಟಿ ರೂಪಾಯಿಗಳು ಗಳಿಕೆ ಆಗಿದ್ದರೆ ಭಾನುವಾರ 35.60 ಕೋಟಿ ರೂಪಾಯಿ ಗಳಿಕೆ ಆಗಿದೆ. ಆ ಮೂಲಕ ಎರಡೇ ದಿನಕ್ಕೆ 63 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿದೆ. ಸಿನಿಮಾದ ಒಟ್ಟು ಗಳಿಕೆ 1690 ಕೋಟಿ ಆಗಿದ್ದು, ಭಾರತದಲ್ಲಿ ಸಿನಿಮಾದ ಗಳಿಕೆ 942 ಕೋಟಿಗೆ ಏರಿದೆ.

ಇದನ್ನೂ ಓದಿ:ರಣ್​​ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?

ಭಾಷಾವಾರು ಕಲೆಕ್ಷನ್‌ಗಳಲ್ಲಿ ಹಿಂದಿ ಆವೃತ್ತಿಯೇ ಅತಿ ಹೆಚ್ಚು ಕೊಡುಗೆ ನೀಡಿದ್ದು, 13,852 ಶೋಗಳಿಂದ 26.25 ಕೋಟಿ ರೂ. ಗಳಿಸಿದೆ. ಮಲಯಾಳಂ ಆವೃತ್ತಿಯು 873 ಶೋಗಳಿಂದ 3.40 ಕೋಟಿ ರೂ. ಸಂಗ್ರಹಿಸಿದ್ದು, ಅದರ ನಂತರ ಕನ್ನಡದಲ್ಲಿ 449 ಶೋಗಳಿಂದ 2.50 ಕೋಟಿ ರೂ., ತಮಿಳಿನಲ್ಲಿ 645 ಶೋಗಳಿಂದ 2.40 ಕೋಟಿ ರೂ. ಮತ್ತು ತೆಲುಗಿನಲ್ಲಿ 458 ಶೋಗಳಿಂದ 1.05 ಕೋಟಿ ರೂ. ಗಳಿಸಿದೆ.

ಒಟ್ಟಾರೆಯಾಗಿ, 18ನೇ ದಿನ ದೇಶಾದ್ಯಂತ 16,277 ಶೋಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಪ್ರತಿ ಶೋಗೆ ಸರಾಸರಿ 21,881 ರೂ. ಗಳಿಸಿದೆ. ಸಿನಿಮಾದ ಟಿಕೆಟ್ ಬೆಲೆಯನ್ನು ಇತ್ತೀಚೆಗಷ್ಟೆ ಕಡಿಮೆ ಮಾಡಲಾಗಿದೆ. ಹೆಚ್ಚು ಜನ ಸಿನಿಮಾ ನೋಡಲು ಇದೂ ಸಹ ಒಂದು ಕಾರಣ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More