ಬೆನ್ನು ಬಿಡದ ‘ಸುಖೇಶ್’, ನಟಿ ನೋರಾ ಫತೇಹಿಗೆ ಸಮನ್ಸ್ ಜಾರಿ

ಮಹಾ ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನಟಿ ನೋರಾ ಫತೇಹಿಗೆ ನೊಟೀಸ್ ಜಾರಿ ಮಾಡಿದೆ. ಸುಖೇಶ್ ಪ್ರಕರಣದಲ್ಲಿ ಆರಂಭದಿಂದಲೂ ನಟಿ ನೋರಾ ಫತೇಹಿ ಹೆಸರು ಕೇಳಿ ಬರುತ್ತಿದೆಯಾದರೂ ನೋರಾಗೆ ಯಾವುದೇ ಗಂಭೀರ ಸಂಕಷ್ಟ ಎದುರಾಗಿರಲಿಲ್ಲ. ಈಗಲೂ ಸಹ ನೋರಾಗೆ ಸಾಕ್ಷಿ ಆಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಬೆನ್ನು ಬಿಡದ ‘ಸುಖೇಶ್’, ನಟಿ ನೋರಾ ಫತೇಹಿಗೆ ಸಮನ್ಸ್ ಜಾರಿ
Nora Fatehi

Updated on: Oct 30, 2026 | 9:21 PM

ಮುಖ್ಯಾಂಶಗಳು

  • ನೋರಾ ಫತೇಹಿಗೆ ದೆಹಲಿ ಹೈಕೋರ್ಟ್ ಸಮನ್ಸ್
  • ಸುಖೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ
  • ನ್ಯಾಯಾಲಯಕ್ಕೆ ಬಂದು ಸಾಕ್ಷಿ ದಾಖಲಿಸುವಂತೆ ಸೂಚನೆ

ಕನ್ನಡದ ‘ಕೆಡಿ’ ಸಿನಿಮಾದ ಹಾಡಿನಿಂದ ವಿವಾದ ಕೇಂದ್ರವಾಗಿದ್ದ ನಟಿ ನೋರಾ ಫತೇಹಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮಹಾ ವಂಚಕ ಸುಖೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನಟಿ ನೋರಾ ಫತೇಹಿಗೆ ನೊಟೀಸ್ ಜಾರಿ ಮಾಡಿದೆ. ಸುಖೇಶ್ ಪ್ರಕರಣದಲ್ಲಿ ಆರಂಭದಿಂದಲೂ ನಟಿ ನೋರಾ ಫತೇಹಿ ಹೆಸರು ಕೇಳಿ ಬರುತ್ತಿದೆಯಾದರೂ ನೋರಾಗೆ ಯಾವುದೇ ಗಂಭೀರ ಸಂಕಷ್ಟ ಎದುರಾಗಿರಲಿಲ್ಲ. ಈಗಲೂ ಸಹ ನೋರಾಗೆ ಸಾಕ್ಷಿ ಆಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಕುಖ್ಯಾತ ವಂಚಕ ಸುಖೇಶ್ ಚಂದ್ರಶೇಖರ್​​ನ 200 ಕೋಟಿ ರೂ ಸುಲಿಗೆ ಪ್ರಕರಣದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಈ ಪ್ರಕರಣದಲ್ಲಿ ನಟಿಯನ್ನು ಸಾಕ್ಷಿಯಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ದೆಹಲಿ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 16 ರಂದು ಹೊರಡಿಸಲಾದ ಆದೇಶದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್‌ದೀಪ್ ಸಿಂಗ್ ಅವರು, ‘ನೋರಾ ಫತೇಹಿ ಅಲಿಯಾಸ್ ನೌರಾ ಫತೇಹಿ ಅವರನ್ನು, ಮೂರನೇ ಪೂರಕ ಆರೋಪಪಟ್ಟಿಯಲ್ಲಿ ಪಟ್ಟಿ ಮಾಡಲಾದ ಸಾಕ್ಷಿ LW 3, ನವೆಂಬರ್ 2 ರಂದು ವಿಚಾರಣೆಗೆ ಸಮನ್ಸ್ ಜಾರಿಗೊಳಿಸಿ’ ಎಂದು ತಿಳಿಸಿದ್ದಾರೆ.

ಸುಖೇಶ್ ಪ್ರಕರಣದಲ್ಲಿ ತಮ್ಮ ಮೇಲಿನ ಆರೋಪಗಳನ್ನು ನೋರಾ ಫತೇಹಿ ಈಗಾಗಲೇ ನಿರಾಕರಿಸಿದ್ದು, ತಾನೊಬ್ಬಳು ಸಂತ್ರಸ್ತೆ ಎಂದು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿಗಳಿಗೆ ಒಬ್ಬ ಸಾಕ್ಷಿಯಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ಮತ್ತು ಸುಖೇಶ್ ಜೊತೆ ತನಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲವೆಂದು ಈ ಹಿಂದೆ ತಿಳಿಸಿದ್ದರು. ನೋರಾ ಅನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡುವ ಕುರಿತು ಪ್ರಯತ್ನಗಳು ಸಹ ನಡೆದಿತ್ತು ಬಳಿಕ ಜನವರಿ 2023 ರಲ್ಲಿ ದೆಹಲಿ ಪೊಲೀಸ್ ತನಿಖೆಯ ವೇಳೆ ಅವರನ್ನು ಸಾಕ್ಷಿಯಾಗಿ ಹೆಸರಿಸಲಾಗಿತ್ತು.

ಇದನ್ನೂ ಓದಿ:‘ರಾಮಾಯಣ’ ಮೂಲಕ ಸಿನಿಮಾ ವೀಕ್ಷಣೆಯ ಮೊದಲ ಅನುಭವ ಪಡೆದ ಯಶ್ ಮಕ್ಕಳು

ನೋರಾ ಫತೇಹಿ, ಸುಖೇಶ್​ ಇಂದ ಬಿಎಂಡಬ್ಲು ಕಾರೊಂದನ್ನು ಉಡುಗೊರೆಯನ್ನಾಗಿ ಪಡೆದುಕೊಂಡಿದ್ದರು. ಕಾರು ಮಾತ್ರವೇ ಅಲ್ಲದೆ ಹಣವನ್ನೂ ಸಹ ಅವರು ಪಡೆದುಕೊಂಡಿದ್ದರು ಎನ್ನಲಾಗಿತ್ತು. ಆದರೆ ನೋರಾ ಫತೇಹಿ, ತಮಗೆ ಸುಖೇಶ್​ಗೆ ಜೊತೆಗೆ ವೈಯಕ್ತಿಕ ಗೆಳೆತನ ಇಲ್ಲ ಎಂದು ಹೇಳಿದ್ದರು. ಆದರೆ ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುಖೇಶ್ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಆದರೆ ಅವರೂ ಸಹ ತಾವು ಈ ಪ್ರಕರಣದಲ್ಲಿ ಸಂತ್ರಸ್ತೆ ಎಂದು ಹೇಳಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us