‘ಬಾಹುಬಲಿ, ‘ಆರ್​ಆರ್​ಆರ್​’ ಅಲ್ಲ, ರಾಜಮೌಳಿಗೆ ಫೇವರಿಟ್ ಈ ಸುದೀಪ್ ಸಿನಿಮಾ

SS Rajamouli movies: ಎಸ್​ಎಸ್ ರಾಜಮೌಳಿ, ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ನಿರ್ದೇಶಕ. ಅವರು ನಿರ್ದೇಶಿಸಿರುವ ಈ ವರೆಗಿನ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಹಲವು ಸಿನಿಮಾಗಳು ಇತಿಹಾಸ ಸೃಷ್ಟಿಸಿವೆ. ಈ ವರೆಗೆ ರಾಜಮೌಳಿ ನಿರ್ದೇಶನ ಮಾಡಿರುವ ಸಿನಿಮಾಗಳಲ್ಲಿ ತಮಗೆ ಇಷ್ಟವಾದ ಸಿನಿಮಾ ಯಾವುದೆಂದು ಹೇಳಿದ್ದಾರೆ.

‘ಬಾಹುಬಲಿ, ‘ಆರ್​ಆರ್​ಆರ್​’ ಅಲ್ಲ, ರಾಜಮೌಳಿಗೆ ಫೇವರಿಟ್ ಈ ಸುದೀಪ್ ಸಿನಿಮಾ
Ss Rajamouli
Updated By: ಮದನ್​ ಕುಮಾರ್​

Updated on: Jul 17, 2025 | 10:32 PM

ಹಲವು ಹಿಟ್ ಚಿತ್ರಗಳನ್ನು ನೀಡಿದ ನಿರ್ದೇಶಕನ ಎದುರು ನಿಮಗೆ ಯಾವ ಸಿನಿಮಾ ಇಷ್ಟ ಎಂದು ಕೇಳಿದರೆ ಅವರು ಯಾವ ಸಿನಿಮಾಗಳನ್ನು ತಾನೇ ಹೇಳಿಯಾರು ಹೇಳಿ? ಎಲ್ಲವನ್ನು ಅವರೇ ನಿರ್ದೇಶನ ಮಾಡಿರುತ್ತಾರೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದಾಗ ಗೊಂದಲ ಸಹಜ. ಈಗ ರಾಜಮೌಳಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ತಮ್ಮಿಷ್ಟದ ಒಂದು ಚಿತ್ರವನ್ನು ಅವರು ಪಿಕ್ ಮಾಡಿದ್ದಾರೆ. ಅವರಿಗೆ ‘ಈಗ’ ಫೇವರಿಟ್ ಎನಿಸಿಕೊಂಡಿದೆ.

‘ಬಾಹುಬಲಿ’, ‘ಆರ್​ಆರ್​ಆರ್’, ‘ಈಗ’, ‘ವಿಕ್ರಮಾರ್ಕುಡು’ ಹೀಗೆ ರಾಜಮೌಳಿ ಅವರ ಹಿಟ್ ಸಿನಿಮಾಗಳ ಪಟ್ಟಿ ದೊಡ್ಡದಾಗುತ್ತಾ ಹೋಗುತ್ತದೆ. ಆದಾಗ್ಯೂ ಅವರು ತಗ್ಗಿ ಬಗ್ಗಿ ನಡೆಯುತ್ತಾರೆ. ‘ಜೂನಿಯರ್’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ನಲ್ಲಿ ರಾಜಮೌಳಿ ಅವರು ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ರಾಜಮೌಳಿ ಅವರು ಹಲವು ಮಾಸ್ ಸಿನಿಮಾಗಳನ್ನು ಮಾಡಿದ್ದಾರೆ. ಅವರು ತಮ್ಮನ್ನು ತಾವು ಮಾಸ್ ಚಿತ್ರಗಳಿಗೆ ಸೀಮಿತ ಮಾಡಿಕೊಂಡಿದ್ದಾರೆ ಎಂಬ ಟೀಕೆಗಳು ಬಂದವು. ಇದನ್ನು ರಾಜಮೌಳಿ ಅವರೇ ಬ್ರೇಕ್ ಮಾಡಿದ್ದರು. ಆಗ ಮಾಡಿದ್ದೇ ‘ಈಗ’. ‘ಈಗ ನನ್ನ ಬೆಸ್ಟ್ ಸಿನಿಮಾ’ ಎಂದಿದ್ದಾರೆ ಅವರು. ಈ ಚಿತ್ರದಲ್ಲಿ ನಾನಿ, ಸಮಂತಾ ಹಾಗೂ ಸುದೀಪ್ ನಟಿಸಿದ್ದಾರೆ. ಈ ಚಿತ್ರದಲ್ಲಿ ಒಂದು ನೊಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿತು.

ಇದನ್ನೂ ಓದಿ:13 ವರ್ಷದ ಬಳಿಕ ದಕ್ಷಿಣಕ್ಕೆ ಬಂದ ಜೆನಿಲಿಯಾ, ಸ್ವಾಗತ ಕೋರಿದ ರಾಜಮೌಳಿ

ಈ ಚಿತ್ರದಲ್ಲಿ ಫೈಟ್ ದೃಶ್ಯಗಳು ಹೆಚ್ಚಿಲ್ಲ. ಮಾಸ್ ಅಂಶವೂ ಇರಲಿಲ್ಲ. ಆದಾಗ್ಯೂ ಸಿನಿಮಾ ಜನರಿಗೆ ಇಷ್ಟ ಆಯಿತು. ಗ್ರಾಫಿಕ್ಸ್ ನೊಣವೇ ಎಲ್ಲದಕ್ಕೂ ಕಾರಣ ಆಯಿತು. ಜೊತೆಗೆ ಭಾವನಾತ್ಮಕವಾಗಿ ಸಿನಿಮಾ ಇಷ್ಟ ಆಯಿತು.

ರಾಜಮೌಳಿ ಅವರು ಸದ್ಯ ಮಹೇಶ್ ಬಾಬು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ನಾಯಕಿ. ಈ ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿ ಇದೆ ಮತ್ತು ಸಿನಿಮಾವು 2026ರಲ್ಲಿ ರಿಲೀಸ್ ಆಗಬಹುದು ಎಂದು ಊಹಿಸಲಾಗಿದೆ. ‘ಆರ್​ಆರ್​ಆರ್’ ಚಿತ್ರದ ಬಳಿಕ ಅವರು ದೊಡ್ಡ ಬ್ರೇಕ್ ಪಡೆದಿದ್ದರು. ಈ ವೇಳೆ ಸ್ಕ್ರಿಪ್ಟ್ ಕೆಲಸಗಳನ್ನು ಅವರು ಮಾಡಿ ಮುಗಿಸಿದ್ದಾರೆ. ಕೀನ್ಯಾದಲ್ಲಿ ಹೊಸ ಚಿತ್ರದ ಶೂಟ್ ನಡೆಯಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Thu, 17 July 25