ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ

ನನಗೆ ಐಂಡೆಂಟಿಟಿ ಕೊಟ್ಟ ಬಿಗ್​ ಬಾಸ್​ ಹಾಗೂ ಹರಸಿದ ವಿಧೇಯತೆಯಿಂದ ಬಹಿರಂಗ ಪತ್ರ ಎಂದು ತಮ್ಮ ಪೋಸ್ಟ್​ ಆರಂಭಿಸಿದ್ದಾರೆ ಪ್ರಥಮ್​ .

ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ; ಬಿಗ್ ಬಾಸ್- 8 ನಿಂತಿದ್ದಕ್ಕೆ ಪ್ರಥಮ್ ಬೇಸರ
ಪ್ರಥಮ್​ ಜತೆ ಸುದೀಪ್​

Updated on: May 09, 2021 | 4:56 PM

ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಲ್ಲುತ್ತಿರುವ ವಿಚಾರ ಪ್ರೇಕ್ಷಕರಿಗೆ ಬೇಸರ ತರಿಸಿದೆ. ಇನ್ನೂ 30 ದಿನ ಬಾಕಿ ಇರುವಾಗಲೇ ಈ ಸೀಸನ್ ನಿಲ್ಲುತ್ತಿದೆ. ಈ ಬಗ್ಗೆ ಸಾಕಷ್ಟು ಜನರು ಬೇಸರ ಹೊರ ಹಾಕಿದ್ದಾರೆ. ಈಗ ಬಿಗ್​ ಬಾಸ್​ ಕನ್ನಡ ಸೀಸನ್​ 4ರ ವಿನ್ನರ್​ ಒಳ್ಳೆ ಹುಡುಗ ಪ್ರಥಮ್​ ಈ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ಪೋಸ್ಟ್​ ಹಾಕಿದ್ದಾರೆ.

ನನಗೆ ಐಡೆಂಟಿಟಿ ಕೊಟ್ಟ ಬಿಗ್​ ಬಾಸ್​ ಹಾಗೂ ಹರಸಿದ ವಿಧೇಯತೆಯಿಂದ ಬಹಿರಂಗ ಪತ್ರ ಎಂದು ತಮ್ಮ ಪೋಸ್ಟ್​ ಆರಂಭಿಸಿದ್ದಾರೆ ಪ್ರಥಮ್​. ಖುಷಿ ಇರಲಿ, ನೋವಿರಲಿ ಪ್ರತಿ ಶನಿವಾರ ಸುದೀಪ್​ ಸರ್ ಎಲ್ಲವನ್ನು ಮರೆತು ನಮ್ಮ ಮುಂದೆ ಬಂದು ನಿಲ್ಲುತ್ತಿದ್ದರು. ನಾನಿದ್ದ ಬಿಗ್​ ಬಾಸ್​ ಸೀಸನ್​ ಸಮಸ್ಯೆಯೇ ಇಲ್ಲದಂತೆ ನಡೆಯಿತು. ಸೀಸನ್ 5 ಮುಗಿಯುತ್ತಿದ್ದಂತೆ ಬಿಗ್​ ಬಾಸ್​ ಮನೆಗೆ ಬೆಂಕಿ ಬಿತ್ತು. ಸೀಸನ್​ 6 ಮುಗಿಯುತ್ತಿದ್ದಂತೆ ಕಲರ್ಸ್​ ಕನ್ನಡ ಎರಡನೇ ಸ್ಥಾನಕ್ಕೆ ಬಂತು (ಸ್ಪರ್ಧಾತ್ಮಕ ಪ್ರಪಂಚದಲ್ಲಿ ಇದೆಲ್ಲವೂ ಸಾಮಾನ್ಯ) ಎಂದು ಬರೆದುಕೊಂಡಿದ್ದಾರೆ ಪ್ರಥಮ್​.

ಸೀಸನ್​ 7 ಮುಗಿಯುತ್ತಿದ್ದಂತೆ ಕರೋನಾ ಶುರುವಾಯ್ತು. ಸೀಸನ್​ 8 ಬಹಳ ತಡವಾಗಿ ಶುರುವಾಯ್ತು. ಸತತ ಮೂರು ವಾರ ಬಿಗ್​ ಬಾಸ್​ ವೇದಿಕೆಯಲ್ಲಿ ಸುದೀಪ್ ಸರ್ ಇಲ್ಲದಿರುವ ವಿಚಾರ ನಿಜಕ್ಕೂ ಬೇಸರವಾಯ್ತು. ಈಗ ನೋಡಿದ್ರೆ ಬಿಗ್​ ಬಾಸ್​ ನಿಲ್ಲುತ್ತಿದೆ. ಈ ಸುದ್ದಿ ನಿಜಕ್ಕೂ ನೋವಾಯ್ತು ಎಂದು ಪ್ರಥಮ್​ ಬೇಸರ ಹೊರ ಹಾಕಿದ್ದಾರೆ.

ದೇವರು ಯಾಕೆ ಹೀಗೆ ಮಾಡ್ತಿದ್ದಾನೋ ಗೊತ್ತಿಲ್ಲ. ಸುದೀಪ್ ಸರ್ ಮೊದಲು ಚೇತರಿಸಿಕೊಳ್ಳಲಿ. ನನಗೆ ಐಡೆಂಟಿಟಿ ತಂದುಕೊಟ್ಟ ಬಿಗ್​ ಬಾಸ್​ ಮುಂದಿನ ಸೀಸನ್​ಗಳಲ್ಲಿ ಮತ್ತಷ್ಟು ಜನಮನ ಗೆಲ್ಲಲಿ. ಯಾವಾಗಲೂ ನಾನು ಊಟ ಮಾಡುವಾಗ ನೆನೆಸಿಕೊಳ್ಳೋದು ಒಂದೇ, ಏನು ಅಲ್ಲದ ನನ್ನನ್ನು ಈ ಬಿಗ್​ ಬಾಸ್​ ನನಗೆ ಎಲ್ಲವನ್ನೂ ನೀಡಿದೆ. ನಾನಿದ್ದ ಸೀಸನ್​ ಬೆಸ್ಟ್ ಎಂದಿದ್ದಾರೆ ಪ್ರಥಮ್​.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಈಡೇರಿತು ರಘು ಗೌಡ ಆಸೆ

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​​ 8ರಲ್ಲಿ ನಡೆಯಿತು ಯಾರೂ ಊಹಿಸಿರದ 3 ವಿಚಿತ್ರ ಘಟನೆಗಳು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us