ದಾವೂದ್​ ಜೊತೆಗಿನ ಪ್ರಣಯದಿಂದ ಕೊನೆಯಾಯ್ತು ಈ ಖ್ಯಾತ ನಟಿಯ ಕರಿಯರ್

ದಾವೂದ್ ಇಬ್ರಾಹಿಂ ಬಾಲಿವುಡ್ ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದ. ಆ ವೇಳೆ ಈ ವಿಷಯ ಭಾರೀ ಸಂಚಲನ ಮೂಡಿಸಿತ್ತು. ನಟಿಯರ ಜೊತೆಗೆ ನಿರ್ಮಾಪಕರು, ನಿರ್ದೇಶಕರು ಕೂಡ ಈತನ ಬಲೆಗೆ ಸಿಲುಕಿದ್ದರು.

ದಾವೂದ್​ ಜೊತೆಗಿನ ಪ್ರಣಯದಿಂದ ಕೊನೆಯಾಯ್ತು ಈ ಖ್ಯಾತ ನಟಿಯ ಕರಿಯರ್
ಮಂದಾಕಿನಿ
Updated By: ರಾಜೇಶ್ ದುಗ್ಗುಮನೆ

Updated on: Dec 19, 2023 | 12:22 PM

ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾನೆ. ವಿಷಪ್ರಾಸನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ. 1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂಗೆ ಈಗ 67 ವರ್ಷ ವಯಸ್ಸು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದಾವೂದ್ ಸಾವನ್ನಪ್ಪಿದ್ದಾನೆ ಎಂಬ ವದಂತಿಗಳೂ ಕೇಳಿಬಂದಿದ್ದವು. ಆದರೆ ಆತನ ಸಾವಿನ ಸುದ್ದಿ ಸಂಪೂರ್ಣ ಸುಳ್ಳು ಎಂದು ಗುಪ್ತಚರ ಇಲಾಖೆ ಸ್ಪಷ್ಟಪಡಿಸಿವೆ. ಈ ಮಧ್ಯೆ ದಾವೂದ್​​ನ ಲವ್​​ಸ್ಟೋರಿ ಸಾಕಷ್ಟು ಸುದ್ದಿ ಆಗುತ್ತಿದೆ. ದಾವೂದ್ ಬಾಲಿವುಡ್​ನ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದ.

ದಾವೂದ್ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವುದು ನಿಜ ಎಂದು ವರದಿಗಳು ಸ್ಪಷ್ಟಪಡಿಸಿವೆ. ದಾವೂದ್ ಹಲವು ವರ್ಷಗಳಿಂದ ಕುಟುಂಬ ಸಮೇತ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ. ಆತ ಹಲವು ವರ್ಷಗಳ ಕಾಲ ಮುಂಬೈನಲ್ಲಿಯೇ ಇದ್ದ. ಬಾಲಿವುಡ್​ನ ಜೊತೆ ಆತನಿಗೆ ನಂಟಿತ್ತು. ಅಲ್ಲಿ ದಾವೂದ್​ನ ಮಾತುಗಳು ನಡೆಯುತ್ತಿದ್ದವು.

ದಾವೂದ್ ಇಬ್ರಾಹಿಂ ಬಾಲಿವುಡ್ ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡಿದ್ದ. ಆ ವೇಳೆ ಈ ವಿಷಯ ಭಾರೀ ಸಂಚಲನ ಮೂಡಿಸಿತ್ತು. ನಟಿಯರ ಜೊತೆಗೆ ನಿರ್ಮಾಪಕರು, ನಿರ್ದೇಶಕರು ಕೂಡ ಈತನ ಬಲೆಗೆ ಸಿಲುಕಿದ್ದರು. ದಾವೂದ್ ರೊಮ್ಯಾನ್ಸ್ ಮಾಡಿದ ನಾಯಕಿಯರಲ್ಲಿ ಮಂದಾಕಿನಿ ಕೂಡ ಒಬ್ಬರು. 80-90ರ ದಶಕದಲ್ಲಿ ಮಿಂಚಿದ ಬಾಲಿವುಡ್ ನಟಿ ಮಂದಾಕಿನಿ ತಮ್ಮ ಸೌಂದರ್ಯದಿಂದ ಎಲ್ಲರ ಗಮನ ಸೆಳೆದರು.

ರಾಜ್ ಕಪೂರ್ ನಿರ್ದೇಶಿಸದ ‘ರಾಮ್ ತೇರಿ ಗಂಗಾ ಮೈಲಿ’ ಸಿನಿಮಾ ಮೂಲಕ ಮಂದಾಕಿನಿ ವೃತ್ತಿಜೀವನ ಆರಂಭಿಸಿದರು. ಈ ಸಿನಿಮಾದ ಯಶಸ್ಸಿನ ನಂತರ ಮಂದಾಕಿನಿ ರಾತ್ರೋರಾತ್ರಿ ಸ್ಟಾರ್ ಆದರು. ಆಫರ್‌ಗಳು ಅವರನ್ನು ಹುಡುಕಿ ಬಂದವು. ಆದರೆ ಒಂದೇ ಒಂದು ಫೋಟೋ ಆಕೆಯ ಇಡೀ ವೃತ್ತಿಜೀವನವನ್ನು ತಲೆಕೆಳಗಾಗಿಸಿತು.

ದಾವೂದ್ ಇಬ್ರಾಹಿಂ ಮಂದಾಕಿನಿಯ ಸೌಂದರ್ಯಕ್ಕೆ ಮರುಳಾಗಿದ್ದ. ಅವನು ಅವಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಈತನ ಜೊತೆಗಿನ ರಿಲೇಶನ್​ಶಿಪ್​ನಿಂದ ಮಂದಾಕಿನಿಯ ವೃತ್ತಿ ಜೀವನಕ್ಕೆ ಧಕ್ಕೆ ಆಯಿತು. ದುಬೈನ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂದಾಕಿನಿ ಮತ್ತು ದಾವೂದ್ ಅಕ್ಕಪಕ್ಕದಲ್ಲಿ ಕುಳಿತಿರುವ ಫೋಟೋವನ್ನು ವೈರಲ್ ಆಯಿತು. ಈ ಫೋಟೋ ಅಂದು ಭಾರೀ ಸಂಚಲನ ಮೂಡಿಸಿತ್ತು. ಈ ಫೋಟೋದಿಂದಾಗಿ ಮಂದಾಕಿನಿ ಹಲವು ಆರೋಪಗಳನ್ನು ಎದುರಿಸಿದ್ದರು.

ಕ್ರಮೇಣ ಸಿನಿಮಾ ಅವಕಾಶಗಳೂ ಕಡಿಮೆಯಾಗುತ್ತಿದ್ದಂತೆ ಮಂದಾಕಿನಿಯ ವೃತ್ತಿಜೀವನ ಕುಸಿಯತೊಡಗಿತು. ದಾವೂದ್ ಮೇಲಿನ ಆರೋಪಗಳಿಂದ ನಿರ್ಮಾಪಕರು ಮಂದಾಕಿನಿಗೆ ಚಿತ್ರಗಳಲ್ಲಿ ಅವಕಾಶ ನೀಡುವುದನ್ನು ನಿಲ್ಲಿಸಿದರು. ಇದರಿಂದಾಗಿ ಮಂದಾಕಿನಿ ಕ್ರಮೇಣ ಚಿತ್ರರಂಗದಿಂದ ದೂರವಾದರು. 1996ರಲ್ಲಿ ಬಿಡುಗಡೆಯಾದ ‘ಜೋರ್ದಾರ್’ ಚಿತ್ರವೇ ಕೊನೆ. ಇದಾದ ಬಳಿಕ ಅವರು ನಟನೆಯಿಂದ ದೂರ ಉಳಿದರು.

ಇದನ್ನೂ ಓದಿ: ದಾವೂದ್ ಇಬ್ರಾಹಿಂ ಸಾವಿನ ಕುರಿತು ಪಾಕ್ ಪ್ರಧಾನಿ ಟ್ವೀಟ್  ಫೇಕ್!

1996ರ ನಂತರ ಮಂದಾಕಿನಿ ದುಬೈಗೆ ಶಿಫ್ಟ್ ಆದರು. ದಾವೂದ್​​ ಭೇಟಿ ಆಗಿದ್ದು ಅವರ ಬಾಳಲ್ಲಿ ನಡೆದ ದುರದೃಷ್ಟಕರ ಘಟನೆ. ಸಿನಿಮಾ ಜಗತ್ತಿನಲ್ಲಿ ಮಿಂಚಬೇಕಿದ್ದ ಮಂದಾಕಿನಿಯ ವೃತ್ತಿ ಜೀವನ ದಾವೂದ್ ಜೊತೆಗಿನ ಪ್ರೇಮದಿಂದ ಸಂಪೂರ್ಣ ನೆಲಕಚ್ಚಿತು. ಮಂದಾಕಿನಿ ಪ್ರಸಿದ್ಧ ವೈದ್ಯ ಕಗ್ಯೂರ್ ರಿಂಪೋಚೆ ಠಾಕೂರ್ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದ್ಯ ಅವರು ದುಬೈನಲ್ಲೇ ಸೆಟಲ್ ಆಗಿದ್ದಾರೆ.

ಮಂದಾಕಿನಿ ಹೇಳೋದೇ ಬೇರೆ..

ಮಂದಾಕಿನಿ ಅವರು ದಾವೂದ್ ಜೊತೆಗಿನ ಪ್ರಿತಿ ವಿಚಾರವನ್ನು ಅಲ್ಲ ಗಳೆದಿದ್ದರು. ತಾವು ಭೂಗತ ಪಾತಕಿ ಜೊತೆ ಡೇಟಿಂಗ್ ಮಾಡಿಲ್ಲ ಎಂದಿದ್ದರು. ‘ನಾನು ದುಬೈನಲ್ಲಿ ದಾವೂದ್​ನ ಭೇಟಿ ಮಾಡಿದ್ದು ಹೌದು. ಆದರೆ, ಆತನ ಜೊತೆಗೆ ಯಾವುದೇ ಪ್ರೀತಿ-ಪ್ರೇಮ ಇರಲಿಲ್ಲ’ ಎಂದಿದ್ದರು ಮಂದಾಕಿನಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ