AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ

Homebound movie: ಭಾರತದ ಸಿನಿಮಾ ‘ಹೋಮ್​​ಬೌಂಡ್’ ಆಸ್ಕರ್ ಸ್ಪರ್ಧೆಯಲ್ಲಿದ್ದು, ಈಗಾಗಲೇ ಎರಡು ಹಂತ ದಾಟಿ 15 ಸಿನಿಮಾಗಳ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಸಹ ಆಗಿದೆ. ಸಿನಿಮಾ ಆಸ್ಕರ್ ​​ರೇಸಿನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಿರುವಾಗಲೇ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ವಿರುದ್ಧ ಕೃತಿಚೌರ್ಯ ಆರೋಪವನ್ನು ಲೇಖಕಿಯೊಬ್ಬರು ಮಾಡಿದ್ದಾರೆ.

ಆಸ್ಕರ್ ರೇಸಿನಲ್ಲಿರುವ ‘ಹೋಮ್​ಬೌಂಡ್​’ಗೆ ಕಾನೂನು ಸಂಕಷ್ಟ
Homebound
ಮಂಜುನಾಥ ಸಿ.
|

Updated on: Dec 26, 2025 | 1:29 PM

Share

ಭಾರತದಿಂದ ಈ ಬಾರಿ ಆಸ್ಕರ್​​ಗೆ (Oscar) ಅಧಿಕೃತ ಆಯ್ಕೆಯಾಗಿ ಹಿಂದಿ ಸಿನಿಮಾ ‘ಹೋಮ್​​ಬೌಂಡ್’ ಅನ್ನು ಕಳಿಸಲಾಗಿದೆ. ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ‘ಹೋಮ್​​ಬೌಂಡ್’ ಸಿನಿಮಾ ಸ್ಪರ್ಧೆಯಲ್ಲಿದ್ದು, ಈಗಾಗಲೇ ಎರಡು ಹಂತ ದಾಟಿ 15 ಸಿನಿಮಾಗಳ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಸಹ ಆಗಿದೆ. ಸಿನಿಮಾ ಆಸ್ಕರ್ ​​ರೇಸಿನಲ್ಲಿ ಒಳ್ಳೆಯ ಪ್ರದರ್ಶನ ಮಾಡುತ್ತಿರುವಾಗಲೇ ಸಿನಿಮಾ ಕಾನೂನು ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಸಿನಿಮಾದ ವಿರುದ್ಧ ಕೃತಿಚೌರ್ಯ ಆರೋಪವನ್ನು ಲೇಖಕಿಯೊಬ್ಬರು ಮಾಡಿದ್ದಾರೆ.

ಪತ್ರಕರ್ತೆ, ಲೇಖಕಿಯೂ ಆಗಿರುವ ಪೂಜಾ ಚಂಗೋಯ್ವಾಲ ಅವರು ‘ಹೋಮ್​​ಬೌಂಡ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ ಮತ್ತು ನೆಟ್​ಫ್ಲಿಕ್ಸ್​ ವಿರುದ್ಧ ದಾವೆ ಹೂಡಿದ್ದಾರೆ. ತಮ್ಮ ಕತೆಯೊಂದನ್ನು ಕದ್ದು ಸಿನಿಮಾ ಮಾಡಲಾಗಿದೆ ಎಂದು ಪೂಜಾ ಅವರು ಆರೋಪ ಮಾಡಿದ್ದಾರೆ. ತಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದ್ದಾರೆ.

ಪೂಜಾ ಅವರು 2021 ರಲ್ಲಿ ‘ಹೋಮ್​​ಬೌಂಡ್’ ಹೆಸರಿನ ಕತೆಯೊಂದನ್ನು ಬರೆದಿದ್ದರು. ಇದೀಗ ಆಸ್ಕರ್ ರೇಸಿನಲ್ಲಿರುವ ‘ಹೋಮ್​​ಬೌಂಡ್’ ಸಿನಿಮಾವು ತಮ್ಮದೇ ಬರೆದಿರುವ ಕತೆಯನ್ನು ಒಳಗೊಂಡಿದ್ದು, ಕತೆ ಬಳಸುವುದಕ್ಕೆ ನಿರ್ದೇಶಕ ನೀರಜ್ ಗಯ್​​ವಾನ್ ಆಗಲಿ ನಿರ್ಮಾಣ ಸಂಸ್ಥೆಯಾದ ಧರ್ಮಾ ಪ್ರೊಡಕ್ಷನ್ಸ್ ಆಗಲಿ ಅನುಮತಿ ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ. ನಿರ್ಮಾಣ ಸಂಸ್ಥೆಗೆ ಈಗಾಗಲೇ ನೊಟೀಸ್ ಅನ್ನು ಸಹ ಕಳಿಸಿದ್ದಾರೆ.

ಇದನ್ನೂ ಓದಿ:ಆಸ್ಕರ್​​ಗೆ ಶಾರ್ಟ್​​ಲಿಸ್ಟ್ ಆದ ಭಾರತೀಯ ಸಿನಿಮಾ ‘ಹೋಮ್​​ಬೌಂಡ್’: ಮುಂದೇನು?

‘ನನ್ನ ಕತೆ ಹಾಗೂ ‘ಹೋಮ್​​ಬೌಂಡ್’ ಸಿನಿಮಾದ ಕತೆ ಎರಡರಲ್ಲೂ ಸಾಕಷ್ಟು ಸಾಮ್ಯತೆ ಇದೆ. ಎರಡೂ ಸಹ ಕೋವಿಡ್ ಪರಿಣಾಮಗಳ ಕುರಿತಾದ ಕತೆಯನ್ನು ಒಳಗೊಂಡಿವೆ. ತಮ್ಮ ಕತೆಯ ಹೆಸರನ್ನೇ ಅನಾಮತ್ತಾಗಿ ಎತ್ತಿಕೊಂಡಿರುವ ಜೊತೆಗೆ, ಸಿನಿಮಾದ ಎರಡನೇ ಭಾಗದಲ್ಲಿ ನನ್ನ ಕತೆಯಲ್ಲಿರುವ ಹಲವು ಸನ್ನಿವೇಶಗಳು, ಪಾತ್ರಗಳು, ಘಟನಾವಳಿಗಳು ಮತ್ತು ಸಂಭಾಷಣೆಗಳನ್ನು ಸಹ ಬಳಸಿಕೊಳ್ಳಲಾಗಿದೆ’ ಎಂದು ಲೇಖಕಿ ಪೂಜಾ ಆರೋಪಿಸಿದ್ದಾರೆ.

ಲೇಖಕಿಯ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಧರ್ಮಾ ಪ್ರೊಡಕ್ಷನ್ಸ್, ‘ಲೇಖಕಿ ಪೂಜಾ ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು. ನಮ್ಮ ನಿರ್ಮಾಣದ ‘ಹೋಮ್​​ಬೌಂಡ್’ ಸಿನಿಮಾ ನ್ಯೂಯಾರ್ಕ್ ಟೈಮ್ಸ್​​ನಲ್ಲಿ ಬಷರತ್ ಪೀರ್ ಎಂಬುವರು ಬರೆದಿದ್ದ ಆರ್ಟಿಕಲ್​​ ಒಂದನ್ನು ಆಧರಿಸಿದ್ದು, ಆ ಆರ್ಟಿಕಲ್​​ನ ಮಾಹಿತಿಯನ್ನು ಸಿನಿಮಾಕ್ಕೆ ಬಳಸಿಕೊಳ್ಳಲು ನಾವು ಅವಶ್ಯಕ ಅನುಮತಿಗಳನ್ನು ಪಡೆದುಕೊಂಡಿದ್ದೇವೆ ಮತ್ತು ಸಿನಿಮಾನಲ್ಲಿ ಮೂಲ ಲೇಖಕರಿಗೆ ನಾವು ಗೌರವ ಸಹ ಸಲ್ಲಿಸಿದ್ದೇವೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ