ನಟಿ ಆಲಿಯಾ ಭಟ್ (Alia Bhatt) ಅವರು ಈಗ ಹಾಲಿವುಡ್ ಮಟ್ಟದಲ್ಲಿ ಗುರುತಿಸಿಕೊಳ್ಳೋಕೆ ರೆಡಿ ಆಗಿದ್ದಾರೆ. ಅವರ ನಟನೆಯ ‘ಹಾರ್ಟ್ ಆಫ್ ಸ್ಟೋನ್’ ಚಿತ್ರ (Heart Of Stone Movie) ರಿಲೀಸ್ಗೆ ರೆಡಿ ಇದೆ. ಈ ಸಿನಿಮಾ ಆಗಸ್ಟ್ 11ರಂದು ರಿಲೀಸ್ ಆಗುತ್ತಿದೆ. ಇದಕ್ಕೂ ಮೊದಲು ಅವರು ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರ ವರ್ತನೆ ಸಾಕಷ್ಟು ಜನರ ಕೋಪಕ್ಕೆ ಕಾರಣ ಆಗಿದೆ. ಅನೇಕರು ಆಲಿಯಾ ಭಟ್ ವಿರುದ್ಧ ಕಿಡಿಕಾರಿದ್ದಾರೆ. ‘ಅದು ಕಾಫಿ ವಿತ್ ಕರಣ್ ಶೋ ಅಲ್ಲ’ ಎಂದು ಅನೇಕರು ಬುದ್ಧಿ ಹೇಳಿದ್ದಾರೆ.
ಗ್ಲಾಮರ್ ಹಾಗೂ ಮಹಿಳಾ ಪ್ರಧಾನ ಪಾತ್ರಗಳ ಮೂಲಕ ಆಲಿಯಾ ಭಟ್ ಗಮನ ಸೆಳೆದಿದ್ದಾರೆ. ಆದರೆ, ವಿಲನ್ ಪಾತ್ರ ಮಾಡಿರಲಿಲ್ಲ. ಈಗ ಅಂಥದ್ದೊಂದು ಪಾತ್ರದಲ್ಲಿ ನಟಿಸಲು ಒಪ್ಪಿದ್ದಾರೆ. ಹಾಲಿವುಡ್ನ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದಲ್ಲಿ ಆಲಿಯಾ ಭಟ್ಗೆ ಅಂಥ ಪಾತ್ರ ಸಿಕ್ಕಿದೆ. ಆಗಸ್ಟ್ 11ರಂದು ನೆಟ್ಫ್ಲಿಕ್ಸ್ ಮೂಲಕ ಈ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಸಂದರ್ಶನದ ವಿಡಿಯೋ ವೈರಲ್ ಆಗಿದೆ.
ಈ ಚಿತ್ರದ ಇತರ ಪ್ರಮುಖ ಪಾತ್ರಧಾರಿಗಳಾದ ಗಾಲ್ ಗಡೋಟ್ ಹಾಗೂ ಜೇಮಿ ಡಾರ್ನನ್ ಜೊತೆ ಆಲಿಯಾ ಭಟ್ ಅವರು ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಅವರಿಗೆ ಯಾವುದೇ ಆಸಕ್ತಿ ಇದ್ದಂತೆ ಕಂಡಿಲ್ಲ. ಅವರು ತಮ್ಮದೇ ಲೋಕದಲ್ಲಿ ಮುಳುಗಿದ್ದರು. ಕೂದಲನ್ನು ಸರಿ ಮಾಡಿಕೊಳ್ಳುತ್ತಾ, ಉಗುರನ್ನು ಮುಟ್ಟಿಕೊಳ್ಳುತ್ತಾ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅನೇಕರು ಟೀಕೆ ಮಾಡಿದ್ದಾರೆ.
ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಶೋಗೆ ಬರುವ ಅತಿಥಿಗಳು ಸ್ವಲ್ಪ ಇದೇ ರೀತಿ ಮಾಡುತ್ತಾರೆ. ಅಲ್ಲಿ ಈ ರೀತಿಯ ವರ್ತನೆಗಳನ್ನು ಒಪ್ಪಬಹುದು. ಆದರೆ, ವಿದೇಶಿ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
Heart of Stone interview: Alia’s body language and posture is so awkward and off putting here
by u/EntranceRemarkable16 in BollyBlindsNGossip
ಇದನ್ನೂ ಓದಿ: Alia Bhatt: ‘ರಣಬೀರ್ ಕಪೂರ್ ಬೇಡ, ನೀವು ಮಾತ್ರ ಪೋಸ್ ನೀಡಿ’: ಪಾಪರಾಜಿ ಮನವಿಗೆ ಆಲಿಯಾ ಪ್ರತಿಕ್ರಿಯೆ ಏನು?
ಟಾಮ್ ಹಾರ್ಪರ್ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರೇಚಲ್ ಸ್ಟೋನ್ ಹೆಸರಿನ ಪಾತ್ರವನ್ನು ಗಾಲ್ ಗಡೋಟ್ ಮಾಡಿದ್ದಾರೆ. ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ ಸಿನಿಮಾ ಮೂಲಕ ಗಾಲ್ ಗಡೋಟ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Wed, 28 June 23