
ಥಿಯೇಟರ್ನಲ್ಲಿ ರಿಲೀಸ್ ಆದ ಸಿನಿಮಾಗಳು ಒಟಿಟಿಯಲ್ಲಿ ಯಾವಾಗ ಬರುತ್ತವೆ ಎಂದು ಪ್ರೇಕ್ಷಕರು ಕಾಯುತ್ತಾ ಇರುತ್ತಾರೆ. ಈಗ ಕನ್ನಡದ ಚಿತ್ರ ‘ಅಜ್ಞಾತವಾಸಿ’ (Agnyathavasi ) ಒಟಿಟಿಗೆ ಬರೋಕೆ ರೆಡಿ ಆಗಿದೆ. ಥಿಯೇಟರ್ನಲ್ಲಿ ಗಮನ ಸೆಳೆದ ಈ ಚಿತ್ರವು ಒಟಿಟಿಯಲ್ಲಿ ಧೂಳೆಬ್ಬಿಸಲು ರೆಡಿ ಆಗಿದೆ. ಹಾಗಾದರೆ, ‘ಅಜ್ಞಾತವಾಸಿ’ ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ? ಆ ಪ್ರಶ್ನೆಗೆ ಜೀ5 ಕಡೆಯಿಂದಲೇ ಅಧಿಕೃತ ಉತ್ತರ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಅಜ್ಞಾತವಾಸಿ’ ಸಿನಿಮಾ ಏಪ್ರಿಲ್ 11ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ರಂಗಾಯಣ ರಘು, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ಪಾವನಾ ಗೌಡ, ರವಿಶಂಕರ್ ಗೌಡ ಇತರರು ನಟಿಸಿದ್ದಾರೆ. ‘ಗುಲ್ಟೂ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಜನಾರ್ಧನ್ ಚಿಕ್ಕಣ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ಹೇಮಂತ್ ರಾವ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕ್ರೈಮ್ ಡ್ರಾಮಾ ಮಿಸ್ಟರಿಯನ್ನು ಈ ಚಿತ್ರ ಒಳಗೊಂಡಿದೆ. ಈ ಸಿನಿಮಾ ಈಗ ಒಟಿಟಿಗೆ ಬರುತ್ತಿದೆ. ಆ ಬಗ್ಗೆ ಜೀ5 ಮಾಹಿತಿ ನೀಡಿದೆ.
ಸಾಮಾನ್ಯವಾಗಿ ಸಿನಿಮಾಗಳು ವೀಕೆಂಡ್ನಲ್ಲಿ ಪ್ರಸಾರ ಕಾಣುತ್ತವೆ. ಆದರೆ, ‘ಅಜ್ಞಾತವಾಸಿ’ ಸಿನಿಮಾ ಬುಧವಾರ (ಮೇ 28) ಪ್ರಸಾರ ಆರಂಭಿಸಲಿದೆ. ಒಟಿಟಿಯಲ್ಲಿ ವಾರದ ದಿನ ಚಿತ್ರದ ಬಗ್ಗೆ ಟಾಕ್ ಶುರುವಾದರೆ ವೀಕೆಂಡ್ನಲ್ಲಿ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳಲಿದೆ. ಈ ತಂತ್ರದ ಮೇಲೆ ಸಿನಿಮಾನ ಮೇ 28ರಂದು ತೆರೆಗೆ ತರಲಾಗುತ್ತಿದೆ. ಇನ್ನೊಂದು ದೃಷ್ಟಿಯಲ್ಲಿ ನೋಡೋದಾದರೆ ಸಿನಿಮಾ ರಿಲೀಸ್ ಆಗಿ ಏಳು ವಾರಗಳ ಬಳಿಕ ಚಿತ್ರ ಒಟಿಟಿಗೆ ಬರುತ್ತಿದೆ. ಈ ರೀತಿಯಲ್ಲಿ ಜೀ5 ಹಾಗೂ ನಿರ್ಮಾಪಕರ ಮಧ್ಯೆ ಒಪ್ಪಂದ ಆಗಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
So proud to share another beautiful short film #SURULI by an extremely talented young filmmaker @ManuAnuram starring the wonderful @NidhiHegde15
@harshil_koushik and @VamBho. Releasing on 17th april on @DakshayaniTalki YouTube channel . Watch #Suruli at home and #Agnyathavasi… pic.twitter.com/ZFZCVXUlh5— Hemanth M Rao (@hemanthrao11) April 16, 2025
‘ಶಾಖಾಹಾರಿ’ ಸಿನಿಮಾ ಮೂಲಕ ರಂಗಾಯಣ ರಘು ಗಮನ ಸೆಳೆದವರು. ‘ಗುಳ್ಟು’ ರೀತಿಯ ಚಿತ್ರ ಕೊಟ್ಟವರು ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಮತ್ತೊಂದು ಕಡೆ. ಇವರಿಬ್ಬರೂ ಸೇರಿ ‘ಅಜ್ಞಾತವಾಸಿ’ ಸಿನಿಮಾ ಮಾಡಿದ್ದಾರೆ. ‘ಅಜ್ಞಾತವಾಸಿ’ ಸಿನಿಮಾದ ಕಥೆ ಒಂದು ಹಳ್ಳಿಯಲ್ಲಿ ಸಾಗುತ್ತದೆ.
ಇದನ್ನೂ ಓದಿ: Agnyathavasi Review: ಕೊಲೆಯ ಮಧ್ಯೆ ‘ಅಜ್ಞಾತದ’ ಕಥೆ; ಬಗೆದಷ್ಟು ವಿಶೇಷತೆ
‘ಅಜ್ಞಾತವಾಸಿ’ ಸಿನಿಮಾದಲ್ಲಿ ನಿಧಾನಗತಿಯಲ್ಲಿ ಸಾಗುತ್ತದೆ. ಆದರೆ, ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಒಮ್ಮೆ ವೇಗ ಪಡೆದುಕೊಂಡ ಬಳಿಕ ಈ ಚಿತ್ರ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಈ ಸಿನಿಮಾನ ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:21 pm, Sat, 17 May 25