‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

Bigg Boss OTT: ಕೇವಲ ಒಂದು ಉಪ್ಪಿನ ಡಬ್ಬಿಗಾಗಿ ಅಕ್ಷರಾ ಸಿಂಗ್​ ಮತ್ತು ಶಮಿತಾ ಶೆಟ್ಟಿ ನಡುವೆ ಜಗಳ ಆಗಿದೆ. ಶಮಿತಾ ಇಂಗ್ಲಿಷ್​ನಲ್ಲಿ ಮಾತನಾಡುತ್ತಾರೆ ಎಂಬುದು ಕೂಡ ಅಕ್ಷರಾಗೆ ಸಿಟ್ಟು ತರಿಸಿದೆ.

‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?
ಶಮಿತಾ ಶೆಟ್ಟಿ
Edited By:

Updated on: Aug 19, 2021 | 8:21 AM

ಖ್ಯಾತ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುತ್ತಿರುವ ಬಿಗ್​ ಬಾಸ್​ ಓಟಿಟಿ ಕಾರ್ಯಕ್ರಮದಲ್ಲಿ ನಟಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಹೆಚ್ಚು ಹೈಲೈಟ್​ ಆಗುತ್ತಿದ್ದಾರೆ. ಅನೇಕ ಕಾರಣಗಳಿಗಾಗಿ ಅವರನ್ನು ಬಿಗ್​ ಬಾಸ್​ ಸ್ಪರ್ಧಿಗಳು ಟಾರ್ಗೆಟ್​ ಮಾಡುತ್ತಿದ್ದಾರೆ. ಅದರಲ್ಲೂ ಅವರ ವಯಸ್ಸಿನ ವಿಚಾರ ಆಗಾಗ ಚರ್ಚೆ ಆಗುತ್ತಲೇ ಇದೆ. ಶಮಿತಾಗಿಂತಲೂ ಚಿಕ್ಕ ವಯಸ್ಸಿನ ಹಲವು ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಇದ್ದಾರೆ. ಆದರೆ ಎಲ್ಲರಿಗಿಂತ ಹೆಚ್ಚಾಗಿ ನಟಿ ಅಕ್ಷರಾ ಸಿಂಗ್​ ಅವರು ಶಮಿತಾ ಮೇಲೆ ಮಾತಿನ ದಾಳಿ ನಡೆಸಿರುವುದು ಜಾಸ್ತಿ. ಪದೇಪದೇ ಅವರು ಶಮಿತಾ ವಯಸ್ಸಿನ ಬಗ್ಗೆ ಕಮೆಂಟ್​ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಶಮಿತಾಗೆ ಆಂಟಿ ಎಂದಿದ್ದ ಅವರು ಈಗ ‘ಅಮ್ಮನ ವಯಸ್ಸಿನವಳು’ ಎಂದು ಕೂಗಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಕಿರಿಕ್​ ಆಗುತ್ತದೆ. ಇತ್ತೀಚೆಗೆ ಕೇವಲ ಒಂದು ಉಪ್ಪಿನ ಡಬ್ಬಿಗಾಗಿ ಅಕ್ಷರಾ ಸಿಂಗ್​ ಮತ್ತು ಶಮಿತಾ ಶೆಟ್ಟಿ ನಡುವೆ ಜಗಳ ಆಗಿದೆ. ಶಮಿತಾ ಇಂಗ್ಲಿಷ್​ನಲ್ಲಿ ಮಾತನಾಡುತ್ತಾರೆ ಎಂಬುದು ಕೂಡ ಅಕ್ಷರಾಗೆ ಸಿಟ್ಟು ತರಿಸಿದೆ. ‘ಈ ಹೆಂಗಸಿಗೆ ಅಮ್ಮನಷ್ಟು ವಯಸ್ಸಾಗಿದೆ. ಆದರೂ ಕೂಡ ಯಾರ ಜೊತೆ ಹೇಗೆ ಮಾತನಾಡಬೇಕು ಎಂಬಷ್ಟು ಬುದ್ಧಿ ಇಲ್ಲ’ ಎಂದು ಅಕ್ಷರಾ ಕೂಗಾಡಿದ್ದಾರೆ.

ಶಮಿತಾ ಶೆಟ್ಟಿಗೆ ಈಗ 42 ವರ್ಷ ವಯಸ್ಸು. ಅವರ ವಯಸ್ಸನ್ನೇ ಗುರಿಯಾಗಿಸಿಕೊಂಡು ಪದೇಪದೇ ಪ್ರಹಾರ ನಡೆಸುತ್ತಿರುವ ಅಕ್ಷರಾ ಸಿಂಗ್​ಗೆ ಕೇವಲ 27ರ ಪ್ರಾಯ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಚರ್ಚೆ ಆಗುತ್ತಿದೆ. ವಯಸ್ಸಿನ ಆಧಾರದಲ್ಲಿ ಒಬ್ಬರನ್ನು ಅವಮಾನಿಸುತ್ತಿರುವ ಅಕ್ಷರಾಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೆ, ತಮಗೆ ಇಂಗ್ಲಿಷ್​ ಬರುವುದಿಲ್ಲ ಎಂಬುದನ್ನೇ ನೆಪವಾಗಿ ಇಟ್ಟುಕೊಂಡು ಅಕ್ಷರಾ ಅವರು ಸಿಂಪಥಿ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಕೂಡ ನೆಟ್ಟಿಗರು ಗಮನಿಸಿದ್ದಾರೆ.

ನೋವು ತೋಡಿಕೊಂಡಿದ್ದ ಶಮಿತಾ:

ಬಾಲಿವುಡ್​ನಲ್ಲಿ ಶಿಲ್ಪಾ ಶೆಟ್ಟಿ ಮಾಡಿರುವ ಸಾಧನೆ ದೊಡ್ಡದು. ಶಮಿತಾ ಶೆಟ್ಟಿ ಸಹ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿದ್ದರೂ ಕೂಡ ಅಕ್ಕನಷ್ಟು ಯಶಸ್ಸು ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿ ಅವರಿಗೆ ಸ್ವಂತ ಗುರುತು ಸಿಗಲೇ ಇಲ್ಲ. ಅದು ಶಮಿತಾಗೆ ಪ್ರತಿದಿನ ಕಾಡುತ್ತಿದೆ. ಆ ವಿಚಾರವನ್ನು ಹೇಳಿಕೊಂಡು ಬಿಗ್​ ಬಾಸ್​ ಮನೆಯಲ್ಲಿ ಇತ್ತೀಚೆಗೆ ಅವರು ಗಳಗಳನೆ ಅತ್ತಿದ್ದರು.

ತಾವು ಇಂದಿಗೂ ಶಿಲ್ಪಾ ಶೆಟ್ಟಿಯ ನೆರಳಿನಲ್ಲಿ ಬದುಕುತ್ತಿರುವುದಕ್ಕೆ ಶಮಿತಾ ಶೆಟ್ಟಿಗೆ ಸಖತ್​ ನೋವಿದೆ. ಶಿಲ್ಪಾ ಶೆಟ್ಟಿಯ ತಂಗಿ ಎಂದೇ ಜನರು ಅವರನ್ನು ಗುರುತಿಸುತ್ತಾರೆ. ಅದರಿಂದ ಹೊರಬರಬೇಕು ಎಂದು ಶಮಿತಾ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಈಗ ತಮ್ಮತನವನ್ನು ತೋರಿಸಲು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದಾಗಿ ಅವರು ಹೇಳಿಕೊಂಡಿದ್ದರು.  ಶಿಲ್ಪಾ ಶೆಟ್ಟಿ ನೆರಳಿನಲ್ಲಿ ತಾವು ಇರುವುದು ಕಷ್ಟಕರವೇ ಹೌದಾದರೂ ಅದು ತಮ್ಮನ್ನು ರಕ್ಷಿಸುತ್ತಿದೆ ಎಂಬ ಸತ್ಯವನ್ನೂ ಶಮಿತಾ ಒಪ್ಪಿಕೊಂಡಿದ್ದರು.

ಇದನ್ನೂ ಓದಿ:

‘ಒಮ್ಮೆ ಅವನು ನನ್ನ ಜತೆ ಲಿಮಿಟ್​ ಕ್ರಾಸ್​ ಮಾಡಿದ್ದ’; ರಹಸ್ಯ ತೆರೆದಿಟ್ಟ ರಾಜ್​ ಕುಂದ್ರಾ ನಾದಿನಿ ಶಮಿತಾ ಶೆಟ್ಟಿ

ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಚೀರಾಟ, ಹಾರಾಟ; ಇಂಥ ಪರಿಸ್ಥಿತಿಗೆ ಕಾರಣ ಏನು?