ಅಕ್ಷಯ್ ಕುಮಾರ್ (Akshay Kumar) ನಟನೆಯ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡುತ್ತವೆ. ಅವರ ಸಿನಿಮಾಗಳು ಒಟಿಟಿಗೆ ಕಾಲಿಡಲಿ ಅಥವಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿ, ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಾರೆ. ಈಗ ರಂಜಿತ್ ತಿವಾರಿ ನಿರ್ದೇಶನದ ಅವರ ಮುಂದಿನ ಥ್ರಿಲ್ಲರ್ ಸಿನಿಮಾ ‘ಮಿಷನ್ ಸಿಂಡರೆಲ್ಲಾ’ (Mission Cinderella) ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ನಿರ್ಮಾಪಕ ವಷು ಹಾಗೂ ಜಾಕಿ ಭಗ್ನಾನಿ ಅವರು 135 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವರದಿ ಆಗಿದೆ. ಅಕ್ಷಯ್ ಕುಮಾರ್ ನಟನೆಯ ‘ಅತ್ರಂಗಿ ರೇ’ ಸಿನಿಮಾ ನೇರವಾಗಿ ಒಟಿಟಿ ಹಾದಿ ಹಿಡಿದಿತ್ತು. ಈಗ ಅವರ ನಟನೆಯ ಎರಡನೇ ಸಿನಿಮಾ ನೇರವಾಗಿ ಒಟಿಟಿಯತ್ತ ಮುಖ ಮಾಡಿದೆ. ಡಿಸ್ನಿ + ಹಾಟ್ಸ್ಟಾರ್ ‘ಮಿಷನ್ ಸಿಂಡರೆಲ್ಲಾ’ ಚಿತ್ರದ ಡಿಜಿಟಲ್ ಹಕ್ಕನ್ನು 135 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅಕ್ಷಯ್ ವೃತ್ತಿ ಜೀವನದಲ್ಲಿ ಅವರ ಸಿನಿಮಾ ಒಟಿಟಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಇದೇ ಮೊದಲು. ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.
‘ಮಿಷನ್ ಸಿಂಡರೆಲ್ಲಾ’ ಸಿನಿಮಾದ ಮ್ಯೂಸಿಕ್ ಹಕ್ಕು ಈಗಾಗಲೇ ಸೇಲ್ ಆಗಿದೆ. ಇದರಿಂದ ಚಿತ್ರಕ್ಕೆ 20 ಕೋಟಿ ರೂಪಾಯಿ ಸಿಕ್ಕಿದೆ. ಕೆಲವೇ ತಿಂಗಳಲ್ಲಿ ಕೊವಿಡ್ ನಾಲ್ಕನೆ ಅಲೆ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ವರದಿ ಬಿಡುಗಡೆ ಮಾಡಿದ್ದಾರೆ. ಹೀಗಾದರೆ, ಸಿನಿಮಾ ರಿಲೀಸ್ ಸಾಧ್ಯವಾಗದೆ ಇರಬಹುದು. ಈ ಕಾರಣಕ್ಕೆ ನಿರ್ಮಾಪಕರು ರಿಸ್ಕ್ ತೆಗೆದುಕೊಳ್ಳದೆ ನೇರವಾಗಿ ಒಟಿಟಿ ಹಾದಿ ಹಿಡಿದಿದ್ದಾರೆ.
ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಚಿತ್ರಕ್ಕೆ ವಷು ಭಗ್ನಾನಿ ಬಂಡವಾಳ ಹೂಡಿದ್ದರು. ಈ ಸಿನಿಮಾವನ್ನು ನೇರವಾಗಿ ಒಟಿಟಿಗೆ ತೆರೆಗೆ ತರದೆ ಚಿತ್ರಮಂದಿರದಲ್ಲಿ ರಿಲೀಸ್ ಮಾಡುವ ಸಾಹಸವನ್ನು ವಿಷ್ಣು ಮಾಡಿದ್ದರು. ಆದರೆ, ಇದರಿಂದ ಅವರು ಕೈ ಸುಟ್ಟುಕೊಂಡಿದ್ದರು. ಈಗ ಅಕ್ಷಯ್ ಕುಮಾರ್ ಜತೆ ಅವರು ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ವಷು ಹಾಗೂ ಅಕ್ಷಯ್ ಇಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ಅಕ್ಷಯ್ ಕುಮಾರ್ಗೆ ಬಾಲಿವುಡ್ನಲ್ಲಿ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ಸಿನಿಮಾ 135 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎಂದು ಚಿತ್ರತಂಡದವರು ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಅವರು ‘ರಾಮ್ ಸೇತು’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ‘ಗೋರ್ಖ’, ‘ಪೃಥ್ವಿರಾಜ್’, ‘ರಕ್ಷಾ ಬಂಧನ್’, ‘ಓಹ್ ಮೈ ಗಾಡ್ 2’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ರಿಲೀಸ್ಗೆ ರೆಡಿ ಇದೆ.
ಇದನ್ನೂ ಓದಿ: ನೀರಜ್ ಚೋಪ್ರಾಗೆ ಸಿನಿಮಾ ಆಫರ್; ಅಕ್ಷಯ್ ಕುಮಾರ್ ಬಯೋಪಿಕ್ ಬಗ್ಗೆ ಏನಿದು ಅಪ್ಡೇಟ್?
ಅಕ್ಷಯ್ ಕುಮಾರ್ ಸಿನಿಮಾ ಬ್ಯಾನ್ ಮಾಡಿದ ಮೂರು ಪ್ರಮುಖ ರಾಷ್ಟ್ರಗಳು; ಬಾಕ್ಸ್ ಆಫೀಸ್ ಕಲೆಕ್ಷನ್ಗೆ ಹೊಡೆತ