‘ಶೋಕಿ ಮಾಡಿ ಹಾಳಾದೆ, ಕಾಲೇಜ್​ ಹೋಗುವಾಗಲೇ ಅಪ್ಪನತ್ರ ಆಸ್ತಿಯಲ್ಲಿ ಪಾಲು ಕೇಳಿದ್ದೆ’; ಅರ್ಜುನ್ ರಮೇಶ್

‘ಬಿಗ್ ಬಾಸ್ ಒಟಿಟಿ’ಯಲ್ಲಿ ಹಲವು ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಅರ್ಜುನ್ ರಮೇಶ್ ಕೂಡ ಗಮನ ಸೆಳೆಯುತ್ತಿದ್ದಾರೆ. ನಟನಾಗಿ, ರಾಜಕಾರಣಿಯಾಗಿ ಅವರು ಹೆಸರು ಮಾಡಿದ್ದಾರೆ.

‘ಶೋಕಿ ಮಾಡಿ ಹಾಳಾದೆ, ಕಾಲೇಜ್​ ಹೋಗುವಾಗಲೇ ಅಪ್ಪನತ್ರ ಆಸ್ತಿಯಲ್ಲಿ ಪಾಲು ಕೇಳಿದ್ದೆ’; ಅರ್ಜುನ್ ರಮೇಶ್
ಅರ್ಜುನ್ ರಮೇಶ್
Updated By: ರಾಜೇಶ್ ದುಗ್ಗುಮನೆ

Updated on: Aug 12, 2022 | 6:30 AM

ಅರ್ಜುನ್ ರಮೇಶ್ (Arjun Ramesh) ಅವರು ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಅವರು ಎರಡು ಮದುವೆ ಆಗಿದ್ದಾರೆ. ಮೊದಲ ಪತ್ನಿಗೆ ಎರಡನೇ ಪತ್ನಿ ಪರವಾಗಿ ಅವರು ಬಿಗ್ ಬಾಸ್ (Bigg Boss OTT) ಮನೆಯಲ್ಲೇ ಕ್ಷಮೆ ಕೇಳಿದ್ದಾರೆ. ಈ ಮಧ್ಯೆ ಅವರ ವೈಯಕ್ತಿಕ ಜೀವನದ ಹಲವು ವಿಚಾರಗಳು ಸೋಶಿಯಲ್ ಚರ್ಚೆ ಆಗುತ್ತಿವೆ. ಈಗ ಅವರು ಹೇಳಿಕೊಂಡಿರುವ ಒಂದು ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಕಾಲೇಜ್​ಗೆ ತೆರಳುವ ಸಂದರ್ಭದಲ್ಲೇ ಅವರು ಅಪ್ಪನ ಬಳಿ ಆಸ್ತಿಯಲ್ಲಿ ಪಾಲು ಕೇಳಿದ್ದರು! ಈ ವಿಚಾರವನ್ನು ಅವರೇ ಹೇಳಿಕೊಂಡಿದ್ದಾರೆ.

‘ಬಿಗ್ ಬಾಸ್ ಒಟಿಟಿ’ಯಲ್ಲಿ ಹಲವು ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಅರ್ಜುನ್ ರಮೇಶ್ ಕೂಡ ಗಮನ ಸೆಳೆಯುತ್ತಿದ್ದಾರೆ. ನಟನಾಗಿ, ರಾಜಕಾರಣಿಯಾಗಿ ಅವರು ಹೆಸರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರ ವೈಯಕ್ತಿಕ ಜೀವನ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ಅವರು ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಡಲೇ ಇಲ್ಲ. ಈ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದಾರೆ.

‘ನಾನು ಓದೋದ್ರಲ್ಲಿ ತುಂಬಾನೇ ಮುಂದೆ ಇದ್ದೆ. ಆದರೂ ಯಾಕೆ ಓದಿಲ್ಲ ಅನ್ನೋದೆ ಗೊತ್ತಾಗುತ್ತಿಲ್ಲ. ನಿಜ ಹೇಳಬೇಕು ಎಂದರೆ ಓದೋ ಟೈಮ್​ನಲ್ಲಿ ಶೋಕಿ ಮಾಡಿ ಹಾಳಾದೆ. ನನ್ನ ಅಮ್ಮನ ಹತ್ತಿರ ಸದಾ ದುಡ್ಡು ತೆಗೆದುಕೊಳ್ಳುತ್ತಿದ್ದೆ. ದುಡ್ಡು ಇಲ್ಲ ಎಂದಾಗ ಅಪ್ಪನ ಹತ್ತಿರ ಹೋಗಿ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದೆ. ನಿಜಕ್ಕೂ ಹಾಂಗದ್ರೆ ಏನು ಅಂತ ಗೊತ್ತಿರಲಿಲ್ಲ. ಆದರೂ, ಆಸ್ತಿಯಲ್ಲೂ ಪಾಲು ಕೇಳುತ್ತಿದ್ದೆ’ ಎಂದಿದ್ದಾರೆ ಅರ್ಜುನ್​ ರಮೇಶ್.

ಇದನ್ನೂ ಓದಿ
‘ವಿಡಿಯೋ ಲೀಕ್​ ಆದಾಗಿನಿಂದ ಅಮ್ಮನ ಮುಖ ನೋಡಿಲ್ಲ, ನಾನು ಇಲ್ಲಿಂದ ಕ್ಷಮೆ ಕೇಳುತ್ತೇನೆ’; ಸೋನು ಗೌಡ
Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
Sonu Srinivas Gowda: ‘ನಂದು ಇನ್ನೊಂದು ವಿಡಿಯೋ ಇದೆ, ಯಾವಾಗ ಬರತ್ತೋ ಗೊತ್ತಿಲ್ಲ’: ಸತ್ಯ ಒಪ್ಪಿಕೊಂಡ ಸೋನು ಗೌಡ
Somanna Machimada: ಬಿಗ್ ಬಾಸ್ ಮನೆಗೆ ಖ್ಯಾತ ಪತ್ರಕರ್ತ: ಸೋಮಣ್ಣ ಬಗ್ಗೆ ನಿಮಗೆಷ್ಟು ಗೊತ್ತು?

ಇದನ್ನೂ ಓದಿ: ‘ಬಿಗ್ ಬಾಸ್’ನಲ್ಲಿ ನಡೆಯಿತು ಮೂರು ಪ್ರಮುಖ ಘಟನೆ; ಅರ್ಜುನ್,ರಾಕೇಶ್​ಗೆ ಪ್ರಮೋಷನ್​, ಅಕ್ಷತಾಗೆ ಜೈಲು

ಅರ್ಜುನ್ ರಮೇಶ್ ಅವರು ಎರಡು ಮದುವೆ ಆಗಿದ್ದಾರೆ. ಮದುವೆ ಆದ ನಂತರವೂ ಅವರು ರಿಲೇಶನ್​ಶಿಪ್​ನಲ್ಲಿದ್ದರು. ಆ ಬಳಿಕ ಮತ್ತೊಂದು ಮದುವೆ ಆದರು. ಎರಡನೇ ಪತ್ನಿಗೆ ಮಗು ಜನಿಸಿದ ನಂತರ ಅರ್ಜುನ್​ ಅವರು ಮೊದಲ ಪತ್ನಿಗೆ ಈ ವಿಚಾರ ಹೇಳಿದ್ದರು. ಈ ಬಗ್ಗೆ ‘ಬಿಗ್ ಬಾಸ್​’ ಮನೆಯಲ್ಲಿ ಹೇಳಿಕೊಂಡಿದ್ದಾರೆ.