Sign In

By signing in or creating an account, you agree with Associated Broadcasting Company's Terms & Conditions and Privacy Policy.

Avatar 2 OTT Release: ಮಾ.28ರಿಂದ ಮನೆಯಲ್ಲೇ ನೋಡಬಹುದು ‘ಅವತಾರ್​ 2’ ಚಿತ್ರ; ಯಾವೆಲ್ಲ ಒಟಿಟಿಯಲ್ಲಿ ಲಭ್ಯ?

Avatar The Way of Water: ಹಲವು ಭಾಷೆಗಳಿಗೆ ‘ಅವತಾರ್​ 2’ ಡಬ್​ ಆಗಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಮಾ.28ರಿಂದ ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಾಗಲಿದೆ.

Avatar 2 OTT Release: ಮಾ.28ರಿಂದ ಮನೆಯಲ್ಲೇ ನೋಡಬಹುದು ‘ಅವತಾರ್​ 2’ ಚಿತ್ರ; ಯಾವೆಲ್ಲ ಒಟಿಟಿಯಲ್ಲಿ ಲಭ್ಯ?
ಅವತಾರ್ 2
Follow us
ಮದನ್​ ಕುಮಾರ್​
|

Updated on:Mar 08, 2023 | 5:29 PM

ನಿರ್ದೇಶಕ ಜೇಮ್ಸ್​ ಕ್ಯಾಮೆರಾನ್​ (James Cameron) ಅವರಿಗೆ ಬೇರೆ ಯಾರೂ ಸಾಟಿ ಇಲ್ಲ. ‘ಟೈಟಾನಿಕ್​’, ‘ಅವತಾರ್​’, ‘ಅವತಾರ್​ 2’ ಮುಂತಾದ ಚಿತ್ರಗಳ ಮೂಲಕ ಅವರು ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. 2022ರ ಡಿಸೆಂಬರ್​ 16ರಂದು ‘ಅವತಾರ್​: ದಿ ವೇ ಆಫ್​ ವಾಟರ್​’ (Avatar: The Way of Water) ಸಿನಿಮಾ ಬಿಡುಗಡೆ ಆಯಿತು. ಗಲ್ಲಾ ಪೆಟ್ಟಿಗೆಯಲ್ಲಿ ಈ ಚಿತ್ರ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಈ ಹಾಲಿವುಡ್​ ಸಿನಿಮಾಗೆ ವಿಶ್ವಾದ್ಯಂತ ಇರುವ ಸಿನಿಪ್ರಿಯರು ಫಿದಾ ಆಗಿದ್ದಾರೆ. ಥಿಯೇಟರ್​​ನಲ್ಲಿ ‘ಅವತಾರ್​ 2’ ಚಿತ್ರವನ್ನು ಮಿಸ್​ ಮಾಡಿಕೊಂಡವರು ಈಗ ಮನೆಯಲ್ಲೇ ನೋಡಿ ಎಂಜಾಯ್​ ಮಾಡಬಹುದು. ಒಟಿಟಿಯಲ್ಲಿ ಈ ಸಿನಿಮಾ ಲಭ್ಯವಾಗುವ ಸಮಯ ಬಂದಿದೆ. ಮಾರ್ಚ್​ 28ರಂದು ವಿವಿಧ ಒಟಿಟಿಗಳಲ್ಲಿ ‘ಅವತಾರ್​ 2’ (Avatar 2) ಚಿತ್ರದ ಸ್ಟ್ರೀಮಿಂಗ್​ ಆರಂಭ ಆಗಲಿದೆ.

ದೃಶ್ಯ ವೈಭವ ಇರುವಂತಹ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಿದರೆ ಅದರ ಅನುಭವವೇ ಬೇರೆ. ಅಂಥ ಪ್ರಕಾರಕ್ಕೆ ಸೇರುವ ಸಿನಿಮಾ ‘ಅವತಾರ್​: ದಿ ವೇ ಆಫ್​ ವಾಟರ್​’. ಥಿಯೇಟರ್​​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ಮೂಲಕ ನೋಡಬಹುದು. ಅಮೇಜಾನ್​ ಪ್ರೈಂ ವಿಡಿಯೋ, ಆಪಲ್​ ಟಿವಿ, ಮೂವೀಸ್​ ಎನಿವೇರ್​ ಮುಂತಾದ ಒಟಿಟಿ ಸಂಸ್ಥೆಗಳು ಇದರ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿವೆ.

ಇದನ್ನೂ ಓದಿ
Image
Avatar The Way of Water: ‘ಕೆಜಿಎಫ್​ 2’ ವರ್ಸಸ್​ ‘ಅವತಾರ್​ 2’: ಮೊದಲ ದಿನದ ಟಿಕೆಟ್​ ಬುಕಿಂಗ್​ನಲ್ಲಿ ಯಶ್​ ಚಿತ್ರದ್ದೇ ಮೇಲುಗೈ
Image
Avatar 2: ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಅದ್ದೂರಿ ರಿಲೀಸ್​; ಆದರೆ ಮೊದಲ ದಿನವೇ ಪೈರಸಿ ಕಾಟ
Image
Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು
Image
‘ಅವತಾರ್​’ ಸರಣಿ ಚಿತ್ರಗಳ ಬಜೆಟ್ ಎಷ್ಟು ಸಾವಿರ ಕೋಟಿ ರೂಪಾಯಿ? ಸೀಕ್ವೆಲ್ ಕೈ ಬಿಡುವ ಆಲೋಚನೆಯಲ್ಲಿ ನಿರ್ದೇಶಕ  

Avatar 3: ಗೆದ್ದು ಬೀಗಿದ ‘ಅವತಾರ್​ 2’: ಇನ್ನುಳಿದ ಸೀಕ್ವೆಲ್​ ಮಾಡಲು ಮುಂದಾದ ಜೇಮ್ಸ್​ ಕ್ಯಾಮೆರಾನ್​

ಹಲವು ಭಾಷೆಗಳಿಗೆ ‘ಅವತಾರ್​ 2’ ಸಿನಿಮಾ ಡಬ್​ ಆಗಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಜೇಮ್ಸ್​ ಕ್ಯಾಮೆರಾನ್​ ಅವರು ಸಿನಿಮಾ ಮಾಡುವ ಶೈಲಿಯೇ ಅಚ್ಚರಿ ಮೂಡಿಸುವಂಥದ್ದು. ತೆರೆ ಹಿಂದೆ ಅವರ ಕಾರ್ಯವೈಖರಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿರುತ್ತಾರೆ. ಒಟಿಟಿಯಲ್ಲಿ ‘ಅವತಾರ್​ 2’ ಸಿನಿಮಾ ವೀಕ್ಷಿಸುವುದರ ಜೊತೆಗೆ ಮೇಕಿಂಗ್​ ದೃಶ್ಯಗಳನ್ನೂ ಪ್ರೇಕ್ಷಕರು ನೋಡಬಹುದು.

Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು

ಹೆಚ್ಚು ಡಿಮ್ಯಾಂಡ್​ ಇರುವ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಾದರೂ ಸಹ ಕೆಲವೊಮ್ಮೆ ಉಚಿತವಾಗಿ ನೋಡಲು ಸಾಧ್ಯವಾಗುವುದಿಲ್ಲ. ಚಂದಾದಾರರಾಗಿದ್ದರೂ ಕೂಡ ಪ್ರತಿ ಬಾರಿ ವೀಕ್ಷಿಸುವಾಗ ಹಣ ಪಾವತಿ ಮಾಡಬೇಕು ಎಂಬ ಷರತ್ತು ಇರುತ್ತದೆ. ‘ಅವತಾರ್​: ದಿ ವೇ ಆಫ್​ ವಾಟರ್​’ ಸಹ ಅದೇ ಮಾರ್ಗ ಅನುಸರಿಸಲಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

2009ರಲ್ಲಿ ಮೊದಲ ‘ಅವತಾರ್​’ ಚಿತ್ರ ರಿಲೀಸ್​ ಆಗಿತ್ತು. ಬರೋಬ್ಬರಿ 13 ವರ್ಷಗಳ ಬಳಿಕ ‘ಅವತಾರ್​ 2’ ಬಿಡುಗಡೆಯಾಗಿ ಯಶಸ್ಸು ಕಂಡಿತು. ಈಗ ‘ಅವತಾರ್​ 3’ ಸಿನಿಮಾದ ಕೆಲಸಗಳಲ್ಲಿ ಜೇಮ್ಸ್​ ಕ್ಯಾಮೆರಾನ್​ ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:29 pm, Wed, 8 March 23

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್