‘ಅವತಾರ್: ದಿ ವೇ ಆಫ್ ವಾಟರ್​’ ಒಟಿಟಿಲಿ ಲಭ್ಯ; ಆದರೆ ಪಾವತಿಸಬೇಕು ಭಾರೀ ಮೊತ್ತ

Avatar: The Way Of Water: ‘ಅವತಾರ್​: ದಿ ವೇ ಆಫ್ ವಾಟರ್’ ಭಾರೀ ನಿರೀಕ್ಷೆಯೊಂದಿಗೆ ಕಳೆದ ವರ್ಷ ಡಿಸೆಂಬರ್ 16ರಂದು ರಿಲೀಸ್ ಆಯಿತು. ಈ ಸಿನಿಮಾನ ಒಟಿಟಿಯಲ್ಲಿ ವೀಕ್ಷಿಸಬೇಕು ಎಂದು ಅನೇಕರು ಕಾದು ಕೂತಿದ್ದರು. ಅವರಿಗೆ ನಿರಾಸೆ ಆಗಿದೆ.

‘ಅವತಾರ್: ದಿ ವೇ ಆಫ್ ವಾಟರ್​’ ಒಟಿಟಿಲಿ ಲಭ್ಯ; ಆದರೆ ಪಾವತಿಸಬೇಕು ಭಾರೀ ಮೊತ್ತ
ಅವತಾರ್
Follow us
ರಾಜೇಶ್ ದುಗ್ಗುಮನೆ
|

Updated on: Apr 01, 2023 | 6:30 AM

ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಜೇಮ್ಸ್ ಕ್ಯಾಮೆರಾನ್ (James Cameron)​ ನಿರ್ದೇಶನದ ‘ಅವತಾರ್​: ದಿ ವೇ ಆಫರ್ ವಾಟರ್​’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ಸಾಮಾನ್ಯವಾಗಿ ಒಟಿಟಿ ಪ್ಲಾಟ್​ಫಾರ್ಮ್​ ಚಂದಾದಾರರಾದರೆ ಸಿನಿಮಾನ ಉಚಿತವಾಗಿ ನೋಡಬಹುದು. ಆದರೆ ‘ಅವತಾರ್​: ದಿ ವೇ ಆಫ್ ವಾಟರ್​’ಗೆ (Avatar: The Way Of Water) ಈ ಆಯ್ಕೆ ಇಲ್ಲ. ಭಾರೀ ಮೊತ್ತ ಪಾವತಿಸಿಯೇ ಈ ಸಿನಿಮಾ ನೋಡಬೇಕು. ಇದು ಅನೇಕರಿಗೆ ಬೇಸರ ಮೂಡಿಸಿದೆ. ಚಂದಾದಾರರು ಉಚಿತವಾಗಿ ಸಿನಿಮಾ ನೋಡಲು ಮತ್ತಷ್ಟು ಸಮಯ ಕಾಯಲೇಬೇಕು.

‘ಅವತಾರ್​: ದಿ ವೇ ಆಫ್ ವಾಟರ್’ ಭಾರೀ ನಿರೀಕ್ಷೆಯೊಂದಿಗೆ ಕಳೆದ ವರ್ಷ ಡಿಸೆಂಬರ್ 16ರಂದು ರಿಲೀಸ್ ಆಯಿತು. ಈ ಚಿತ್ರದ ಮೇಕಿಂಗ್ ನೋಡಿ ಫ್ಯಾನ್ಸ್ ಕಣ್ಣರಳಿಸಿದರು. ಸಿನಿಮಾ 3ಡಿ ಅವತರಣಿಕೆಯಲ್ಲಿ ಮೂಡಿ ಬಂದಿದೆ. ಸಿನಿಮಾನ ಒಟಿಟಿಯಲ್ಲಿ ವೀಕ್ಷಿಸಬೇಕು ಎಂದು ಅನೇಕರು ಕಾದು ಕೂತಿದ್ದರು. ಅವರಿಗೆ ನಿರಾಸೆ ಆಗಿದೆ.

ಆ್ಯಪಲ್ ಟಿವಿ+ ಯಲ್ಲಿ ‘ಅವತಾರ್ 2’ ನೋಡಲು 590 ರೂಪಾಯಿ ಪಾವತಿಸಬೇಕು. ಯೂಟ್ಯೂಬ್​ನಲ್ಲೂ ಈ ಸಿನಿಮಾ ಲಭ್ಯವಿದೆ. ಎಚ್​​ಡಿ ವರ್ಷನ್​ ನೋಡಲು 850 ರೂಪಾಯಿ ಹಾಗೂ ಎಸ್​ಡಿ ವರ್ಷನ್​ಗೆ 690 ರೂಪಾಯಿ ಪೇ ಮಾಡಬೇಕು. ಇಷ್ಟು ಮೊತ್ತ ಪಾವತಿಸಿದರೆ ಒಮ್ಮೆ ಮಾತ್ರ ನೀವು ಈ ಸಿನಿಮಾ ವೀಕ್ಷಿಸಬಹುದು. ಮತ್ತೊಮ್ಮೆ ಸಿನಿಮಾ ನೋಡಬೇಕು ಎಂದರೆ ಮತ್ತೆ ಹಣ ನೀಡಬೇಕು. ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ‘ಅವತಾರ್ 2’ ಪ್ರಸಾರ ಆಗಲಿದೆ ಎನ್ನುವ ಸುದ್ದಿ ಇತ್ತು. ಅದು ಸುಳ್ಳಾಗಿದೆ.

Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು

‘ಅವತಾರ್​ 2’ ಸಿನಿಮಾಗೆ ಭಾರೀ ಬೇಡಿಕೆ ಇದೆ. ಈ ಕಾರಣಕ್ಕೆ ಪರ್​ ವೀವ್​ ಆಯ್ಕೆ ತರಲಾಗಿದೆ. ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ನಲ್ಲಿ ‘ಅವತಾರ್​’ ಸಿನಿಮಾ ಲಭ್ಯವಿದೆ. ಇದೇ ಪ್ಲಾಟ್​ಫಾರ್ಮ್​ನಲ್ಲಿ ‘ಅವತಾರ್​ 2’ ಕೂಡ ಪ್ರಸಾರ ಆಗಲಿದೆ. ಆದರೆ, ಇದಕ್ಕೆ ಇನ್ನೂ ಕೆಲವು ಸಮಯ ಕಾಯಬೇಕು. ಈ ಬಗ್ಗೆ ಡಿಸ್ನಿ ಪ್ಲಸ್ ಹಾಟ್​ ಸ್ಟಾರ್ ಕಡೆಯಿಂದಲೇ ಅಧಿಕೃತ ಘೋಷಣೆ ಆಗಬೇಕಿದೆ.

Avatar 3: ಗೆದ್ದು ಬೀಗಿದ ‘ಅವತಾರ್​ 2’: ಇನ್ನುಳಿದ ಸೀಕ್ವೆಲ್​ ಮಾಡಲು ಮುಂದಾದ ಜೇಮ್ಸ್​ ಕ್ಯಾಮೆರಾನ್​

‘ಅವತಾರ್ 2’ ಸಿನಿಮಾ ಟಿಕೆಟ್​ ದರ ಆರಂಭದಲ್ಲಿ 1000+ ರೂಪಾಯಿ ಇತ್ತು. ನಂತರದ ದಿನಗಳಲ್ಲಿ 200-300 ರೂಪಾಯಿಗೆ ಇಳಿಕೆ ಆಗಿತ್ತು. ಹೀಗಿರುವಾಗ 500+ ಹಣವನ್ನು ನೀಡಿ ಒಟಿಟಿಯಲ್ಲಿ ಈ ಸಿನಿಮಾ ಏಕೆ ನೋಡಬೇಕು ಎಂದು ಅನೇಕರು ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.