ಸುಳ್ಳಾಯ್ತು ಊಹೆ: ಬರಲ್ಲ ‘ಬಿಗ್ ಬಾಸ್ ಒಟಿಟಿ’ ಸೀಸನ್​; ಇಲ್ಲಿದೆ ಕಾರಣ

ನಾವು ಮಾತನಾಡುತ್ತಿರುವುದ ಕನ್ನಡದ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಿಗೆ ಹಿಂದಿ ಬಿಗ್ ಬಾಸ್ ಬಗ್ಗೆ. ಹಿಂದಿಯಲ್ಲಿ ಈಗಾಗಲೇ ಎರಡು ಒಟಿಟಿ ಸೀಸನ್​ಗಳು ಬಂದು ಹೋಗಿವೆ. ಕಳೆದ ವರ್ಷ ಒಟಿಟಿ ಸೀಸನ್ ಪ್ರಸಾರ ಕಂಡು ಜನಪ್ರಿಯತೆ ಪಡೆಯಿತು. ಕಳೆದ ವರ್ಷ ಎಲ್ವಿಶ್ ಯಾದವ್ ಗೆದ್ದು ಜನಪ್ರಿಯತೆ ಪಡೆದರು.

ಸುಳ್ಳಾಯ್ತು ಊಹೆ: ಬರಲ್ಲ ‘ಬಿಗ್ ಬಾಸ್ ಒಟಿಟಿ’ ಸೀಸನ್​; ಇಲ್ಲಿದೆ ಕಾರಣ
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Apr 13, 2024 | 3:46 PM

‘ಬಿಗ್ ಬಾಸ್’ (Bigg Boss) ಭಾರತದಲ್ಲಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಮರಾಠಿಯಲ್ಲಿ ಶೋ ಜನಪ್ರಿಯತೆ ಪಡೆದಿದೆ. ಇಷ್ಟು ವರ್ಷಗಳ ಕಾಲ ಈ ಶೋ ಟಿವಿಗೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಒಟಿಟಿಯಲ್ಲೂ ಈ ಶೋ ಪ್ರಸಾರ ಕಾಣುತ್ತಿದೆ. ಕೇವಲ ಒಟಿಟಿಗಾಗಿಯೇ ಎಕ್ಸ್​ಕ್ಲೂಸಿವ್ ಆಗಿ ಶೋ ಮಾಡಿದ ಉದಾಹರಣೆಯೂ ಇದೆ. ಆದರೆ, ಈ ಬಾರಿ ಒಟಿಟಿ ಸೀಸನ್ ಬರುವುದಿಲ್ಲವಂತೆ.

ನಾವು ಮಾತನಾಡುತ್ತಿರುವುದ ಕನ್ನಡದ ಬಿಗ್ ಬಾಸ್ ಬಗ್ಗೆ ಅಲ್ಲ, ಬದಲಿಗೆ ಹಿಂದಿ ಬಿಗ್ ಬಾಸ್ ಬಗ್ಗೆ. ಹಿಂದಿಯಲ್ಲಿ ಈಗಾಗಲೇ ಎರಡು ಒಟಿಟಿ ಸೀಸನ್​ಗಳು ಬಂದು ಹೋಗಿವೆ. ಕಳೆದ ವರ್ಷ ಒಟಿಟಿ ಸೀಸನ್ ಪ್ರಸಾರ ಕಂಡು ಜನಪ್ರಿಯತೆ ಪಡೆಯಿತು. ಕಳೆದ ವರ್ಷ ಎಲ್ವಿಶ್ ಯಾದವ್ ಗೆದ್ದು ಜನಪ್ರಿಯತೆ ಪಡೆದರು. ಅವರು ಈಗ ತಪ್ಪು ಕಾರಣಕ್ಕೆ ಸುದ್ದಿ ಆದರು. ಈ ವರ್ಷ ಒಟಿಟಿ ಸೀಸನ್ ನಡೆಸದೇ ಇರಲು ನಿರ್ಧರಿಸಲಾಗಿದೆ.

ಹಿಂದಿಯಲ್ಲಿ 2006ರಿಂದ ಬಿಗ್ ಬಾಸ್ ಶೋ ಪ್ರಸಾರ ಆಗುತ್ತಿದೆ. ಸಲ್ಮಾನ್ ಖಾನ್ ಅವರು 2010ರಿಂದ ಈ ಶೋ ನಡೆಸಿಕೊಡುತ್ತಿದ್ದಾರೆ. ಮೊದಲ ಒಟಿಟಿ ಸೀಸನ್​ನ ಕರಣ್ ಜೋಹರ್ ಅವರು ನಡೆಸಿಕೊಟ್ಟಿದ್ದಾರೆ. ಎರಡನೇ ಒಟಿಟಿ ಸೀಸನ್​ನ ಸಲ್ಮಾನ್ ಖಾನ್ ಅವರೇ ನಡೆಸಿಕೊಟ್ಟರು. ಈ ವರ್ಷ ಮೂರನೇ ಸೀಸನ್ ಬರಬೇಕಿತ್ತು. ಆದರೆ, ಹಾಗೆ ಮಾಡುತ್ತಿಲ್ಲ ಎನ್ನಲಾಗಿದೆ.

ಟಿವಿ ಸೀಸನ್​ಗೆ ಕೊಟ್ಟಷ್ಟು ಪ್ರಾಮುಖ್ಯತೆಯನ್ನು ಜನರು ಒಟಿಟಿಗೆ ನೀಡುತ್ತಿಲ್ಲ ಎನ್ನುವ ಮಾತಿದೆ. ಒಟಿಟಿ ಸೀಸನ್​ಗೆ ಜನಪ್ರಿಯ ಸ್ಪರ್ಧಿಗಳು ಬಂದರೆ ಮಾತ್ರ ಪ್ರೇಕ್ಷಕರು ನೋಡುತ್ತಾರೆ. ಆದರೆ, ಎಲ್ಲಾ ಸಂದರ್ಭಗಳಲ್ಲೂ ಹಾಗೆ ಮಾಡೋಕೆ ಆಗುವುದಿಲ್ಲ. ಹೀಗಾಗಿ, ಒಟಿಟಿ ಸೀಸನ್ ಈ ವರ್ಷ ನಡೆಸದಿರಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್​ ಒಟಿಟಿ ಹೊಸ ಸೀಸನ್​; ಖಾಸಗಿ ವಿಡಿಯೋ ವೈರಲ್​ ಆದ ನಟಿಯರಿಗೆ ಮತ್ತೆ ಅವಕಾಶ?

ಕಳೆದ ವರ್ಷಾಂತ್ಯಕ್ಕೆ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಪೂರ್ಣಗೊಂಡಿತು. ಆ ಬಳಿಕ ಒಟಿಟಿ ಸೀಸನ್ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಆ ಬಗ್ಗೆ ಯಾವುದೇ ಹೊಸ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ