ಹಿಂದಿಯವರು ‘ಬಿಗ್ ಬಾಸ್ ಒಟಿಟಿ’ ಹೆಸರಿನ ಹೊಸ ಕಾನ್ಸೆಪ್ಟ್ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಕೇವಲ 6 ವಾರ ನಡೆದ ಈ ಶೋ ಈಗ ಪೂರ್ಣಗೊಂಡಿದೆ ದಿವ್ಯಾ ಅಗರ್ವಾಲ್ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ ಶೋನ ಮೊದಲ ಸೀಸನ್ ವಿನ್ ಆಗಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳನ್ನು ತಿಳಿಸಲಾಗುತ್ತಿದೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ ಎರಡನೇ ರನ್ನರ್ ಅಪ್ ಆದರೆ, ನಿಶಾಂತ್ ಭಟ್ ಮೊದಲ ರನ್ನರ್ ಅಪ್ ಆಗಿದ್ದಾರೆ.
ವೂಟ್ ಆ್ಯಪ್ನಲ್ಲಿ ಲೈವ್ ವೀಕ್ಷಣೆ ಮಾಡೋಕೆ ಕನ್ನಡ ಬಿಗ್ ಬಾಸ ಸೀಸನ್ 8ರಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಇದಕ್ಕಿಂತ ಕೊಂಚ ಭಿನ್ನವಾಗಿ ಹಿಂದಿಯವರು ಮಾಡಿದ್ದರು. ‘ಬಿಗ್ ಬಾಸ್ ಒಟಿಟಿ’ ಎಂದರೆ ಕೇವಲ ವೂಟ್ ಆ್ಯಪ್ನಲ್ಲಿ ಮಾತ್ರ ಪ್ರಸಾರವಾಗುತ್ತದೆ. ಈ ಶೋಗೆ ಹಲವು ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಇನ್ಫ್ಲ್ಯುನ್ಸರ್ಗಳು ಬಂದಿದ್ದರು. ಅಂತಿಮವಾಗಿ, ದಿವ್ಯಾ ಅಗರ್ವಾಲ್ ವಿನ್ನರ್ ಆಗಿದ್ದಾರೆ.
ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ನಿರೂಪಣೆಯನ್ನು ಸಲ್ಮಾನ್ ಖಾನ್ ಮಾಡಿದ್ದರು. ಆದರೆ, ‘ಬಿಗ್ ಬಾಸ್ ಒಟಿಟಿ’ಯನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಡೆಸಿಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ದಿವ್ಯಾ ಅಗರ್ವಾಲ್, ನಿಶಾಂತ್ ಭಟ್ ಹಾಗೂ ಪ್ರತೀಕ್ ಸೆಹಜ್ಪಾಲ್ ಫಿನಾಲೆಯಲ್ಲಿ ಇದ್ದರು. ಅಂತಿಮವಾಗಿ ಕರಣ್ ಅವರು ದಿವ್ಯಾ ಅಗರ್ವಾಲ್ ಹೆಸರನ್ನು ವಿನ್ನರ್ ಎಂದು ಘೋಷಣೆ ಮಾಡಿದರು. ಇವರಿಗೆ 25 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ.
ಬಿಗ್ ಬಾಸ್ ಒಟಿಟಿ ಮಾದರಿ ಹೊಸತು ಎನ್ನುವ ಕಾರಣಕ್ಕೆ ಮತ್ತು ಕೊವಿಡ್ ಮೂರನೇ ಅಲೆಯ ಭಯದಿಂದ ಕೇವಲ 6 ವಾರ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಅವಧಿ ವಿಸ್ತರಣೆ ಆಗಬಹುದು.
ಇದನ್ನೂ ಓದಿ: ಬಿಗ್ ಬಾಸ್ ಟಿಆರ್ಪಿ ಹೆಚ್ಚಿಸೋಕೆ ಸ್ಟಾರ್ ನಟನ ಮೊರೆ ಹೋದ ವಾಹಿನಿ; ಅಕ್ಕಿನೇನಿ ನಾಗಾರ್ಜುನ ಕಥೆ ಏನು?
Published On - 11:22 pm, Sat, 18 September 21