Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ

Bigg Boss OTT Kannada: ರಾಕೇಶ್​ ಅಡಿಗ ಅವರ ಬಾಲ್ಯದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಅವರಿಗೆ ಕದಿಯುವ ಗುಣ ಇತ್ತು. ಅಷ್ಟೇ ಅಲ್ಲ, ಹುಡುಗಿಯ ಬೆತ್ತಲೆ ಫೋಟೋವನ್ನು ನೋಟಿಸ್​ ಬೋರ್ಡ್​ನಲ್ಲಿ ಅವರು ಹಾಕಿದ್ದರು!

Rakesh Adiga: ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿ, ಕಳ್ಳತನ ಮಾಡಿ, ತಾಯಿ ತಲೆ ತಗ್ಗಿಸುವಂತೆ ಮಾಡಿದ್ದ ರಾಕೇಶ್​ ಅಡಿಗ
ರಾಕೇಶ್ ಅಡಿಗ
Edited By:

Updated on: Aug 08, 2022 | 2:07 PM

‘ಜೋಶ್​’ ಸಿನಿಮಾ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ನಟ ರಾಕೇಶ್​ ಅಡಿಗ (Rakesh Adiga) ಅವರು ಈಗ ಬಿಗ್​ ಬಾಸ್​ ಶೋನಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಬ್ಯುಸಿ ಆಗಿರುವ ಅವರು ಏಳು-ಬೀಳುಗಳನ್ನು ಕಂಡಿದ್ದಾರೆ. ನೇರ ನಿಷ್ಠುರ ಮಾತಿನ ಕಾರಣಕ್ಕೆ ಅವರು ಕೆಲವು ವಿವಾದ ಮಾಡಿಕೊಂಡಿದ್ದೂ ಉಂಟು. ರಾಕೇಶ್​ ಅಡಿಗ ಮೇಲೆ ಒಂದಷ್ಟು ಕಳಂಕ ಕೂಡ ಇದೆ. ಆ ಬಗ್ಗೆ ಅವರೇ ಬಿಗ್​ ಬಾಸ್​ (Bigg Boss) ವೇದಿಕೆಯಲ್ಲಿ ಕಿಚ್ಚ ಸುದೀಪ್​ ಎದುರು ಹೇಳಿಕೊಂಡರು. ಈಗ ದೊಡ್ಮನೆಯೊಳಗೆ ಅಸಲಿ ಆಟ ಶುರುವಾಗಿದೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss OTT Kannada) ಮೊದಲ ಸೀಸನ್​ ಆರಂಭದಲ್ಲೇ ಎಲ್ಲ ಸ್ಪರ್ಧಿಗಳು ತಮ್ಮ ಖಾಸಗಿ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ರಾಕೇಶ್​ ಅಡಿಗ ಕೂಡ ಮನ ಬಿಚ್ಚಿ ಕೆಲವು ಸತ್ಯಗಳನ್ನು ತೆರೆದಿಟ್ಟಿದ್ದಾರೆ.

ರಾಕೇಶ್​ ಅಡಿಗ ಅವರ ಬಾಲ್ಯದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಚಿಕ್ಕ ವಯಸ್ಸಿನಲ್ಲಿ ಅವರಿಗೆ ಕದಿಯುವ ಗುಣ ಇತ್ತು. ಅದರಿಂದ ಅವರ ಇಡೀ ಕುಟುಂಬಕ್ಕೆ ಮುಜುಗರ ಆಗುತ್ತಿತ್ತು. ಅಷ್ಟೇ ಅಲ್ಲ, ಹುಡುಗಿಯೊಬ್ಬಳ ಬೆತ್ತಲೆ ಫೋಟೋವನ್ನು ನೋಟಿಸ್​ ಬೋರ್ಡ್​ನಲ್ಲಿ ಹಾಕಿದ ತಪ್ಪಿಗಾಗಿ ರಾಕೇಶ್​ ಅಡಿಗ ಅವರ ತಾಯಿ ಎಲ್ಲರ ಎದುರು ತಲೆ ತಗ್ಗಿಸುವಂತೆ ಆಗಿತ್ತು. ಆ ಘಟನೆಗಳ ಬಗ್ಗೆ ರಾಕೇಶ್​ ಅಡಿಗ ಅವರು ಬಾಯಿ ಬಿಟ್ಟಿದ್ದಾರೆ.

‘7ನೇ ಕ್ಲಾಸ್​ನಲ್ಲಿ ನನಗೆ ಒಂದು ಹುಡುಗಿ ಮೇಲೆ ಕ್ರಶ್​ ಇತ್ತು. ಅವಳು ನನಗೆ ಬೈಯ್ದಿದ್ದಳು ಅಂತ ಹುಡುಗರು ನನಗೆ ಏನೇನೋ ಹೇಳಿ ಪ್ರಚೋದಿಸಿದರು. ಆಕೆ ಮೇಲಿನ ಕೋಪಕ್ಕೆ ಮ್ಯಾಗಜಿನ್​ನಲ್ಲಿ ಇರುವ ಬೆತ್ತಲೆ ಫೋಟೋ ಮೇಲೆ ಅವಳ ಹೆಸರು ಬರೆದು ನೋಟಿಸ್​ ಬೋರ್ಡ್​ನಲ್ಲಿ ಅಂಟಿಸಿದೆ. ಅದರಿಂದ ಶಾಲೆಯಲ್ಲಿ ದೊಡ್ಡ ತನಿಖೆ ನಡೆಯಿತು. ನಾನು ಸಿಕ್ಕಿ ಹಾಕಿಕೊಂಡೆ. ನಮ್ಮ ಅಮ್ಮನನ್ನು ಶಾಲೆಗೆ ಕರೆಸಿದ್ದರು. ಪ್ರಿನ್ಸಿಪಾಲ್​ ಚೇಂಬರ್​​ನಲ್ಲಿ ಅಮ್ಮ ತಲೆ ತಗ್ಗಿಸಿಕೊಂಡು ಕೂತ್ತಿದ್ದರು. ಅಂದು ಇಡೀ ದಿನ ಅವರು ನನ್ನ ಬಳಿ ಮಾತನಾಡಲಿಲ್ಲ. ಕ್ಷಮೆ ಕೇಳಿದೆ. ಒಂದು ವೇಳೆ ನನಗೆ ಈ ರೀತಿ ಮಾಡಿದ್ದರೆ ಏನಾಗುತ್ತಿತ್ತು ಹೇಳು ಅಂತ ಅಮ್ಮ ಕೇಳಿದರು. ಆಗ ನನಗೆ ನನ್ನ ತಪ್ಪಿನ ಅರಿವಾಯಿತು’ ಎಂದು ರಾಕೇಶ್​ ಅಡಿಗ ಹೇಳಿದ್ದಾರೆ.

ಇದನ್ನೂ ಓದಿ
Sonu Srinivas Gowda: ಖಾಸಗಿ ವಿಡಿಯೋ ಲೀಕ್​ ಆಗಿದ್ದು ಹೇಗೆ? ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿದ ಸೋನು ಶ್ರೀನಿವಾಸ್​ ಗೌಡ
Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು
Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ

‘ನನಗೆ ಕಳ್ಳತನ ಮಾಡುವ ಚಟ ಇತ್ತು. ಏನೇ ಕಂಡರೂ ಅದನ್ನು ಕದಿಯುತ್ತಿದ್ದೆ. ಕಳ್ಳತನದಿಂದ ನನಗೆ ಮಜಾ ಸಿಗುತ್ತಿತ್ತು. ಒಮ್ಮೆ ಸಂಬಂಧಿಕರ ಮನೆಯಲ್ಲಿ ಚಿನ್ನದ ಸರ ಕಳ್ಳತನ ಆಯಿತು. ಆದರೆ ಅದನ್ನು ನಾನು ಕದ್ದಿರಲಿಲ್ಲ. ಆದರೂ ನನ್ನ ಮೇಲೆ ಆರೋಪ ಬಂತು. ಚೈನ್​ ಸಿಗಲಿ ಅಂತ ನಾನು ದೇವರಲ್ಲಿ ಬೇಡಿಕೊಂಡೆ. ನಾನೇ ಕದ್ದಿದ್ದೇನೆ ಅಂತ ಎಲ್ಲರೂ ಫಿಕ್ಸ್​ ಆಗಿದ್ದರು. ಅದೃಷ್ಟವಶಾತ್​ ಚೈನ್​ ಸಿಕ್ಕಿತು. ಒಮ್ಮೆ ಕಳ್ಳತನ ಮಾಡಿ ಸಿಕ್ಕಿಬಿದ್ದರೆ ಶಾಶ್ವತವಾಗಿ ಕಳಂಕ ಎದುರಾಗುತ್ತದೆ ಎಂಬುದನ್ನು ಅವರೆಲ್ಲ ನನಗೆ ತಿಳಿಸಿ ಹೇಳಿದರು’ ಎಂದಿದ್ದಾರೆ ರಾಕೇಶ್​ ಅಡಿಗ.

 

Published On - 2:07 pm, Mon, 8 August 22