Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು

Bigg Boss OTT Kannada: ಸಾನ್ಯಾ ಅಯ್ಯರ್​ ಮತ್ತು ಅವರ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಮಲತಂದೆ  ವಿಡಿಯೋ ರೆಕಾರ್ಡ್​​ ಮಾಡಿದ್ದ. ಆ ಘಟನೆ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ.

Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು
ಸಾನ್ಯಾ ಅಯ್ಯರ್, ದೀಪಾ ಅಯ್ಯರ್
Edited By:

Updated on: Aug 07, 2022 | 7:35 PM

ಕಿರುತೆರೆ ನಟಿ ಸಾನ್ಯಾ ಅಯ್ಯರ್​ ಅವರು ಬಿಗ್​ ಬಾಸ್​ (Bigg Boss OTT Kannada) ಮನೆಯಲ್ಲಿ ಅನೇಕ ಸಂಗತಿಗಳನ್ನು ಹೇಳಿಕೊಂಡಿದ್ದಾರೆ. ಕುಟುಂಬದ ಖಾಸಗಿ ವಿಷಯಗಳನ್ನು ಕೂಡ ಬಯಲು ಮಾಡಿ ಅವರು ಕಣ್ಣೀರು ಹಾಕಿದ್ದಾರೆ. ಈ ಘಟನೆಗಳ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ (Deepa Iyer) ಅವರು ‘ಟಿವಿ9 ಕನ್ನಡ’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದವರಿಂದ ಆದ ಅನ್ಯಾಯದ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ. ಸಾನ್ಯಾ ಅಯ್ಯರ್​ (Sanya Iyer) ಅವರ ಮಲ ತಂದೆ ಮಾಡಿದ ಕೆಲವು ಕೃತ್ಯಗಳ ಬಗ್ಗೆ ಈಗ ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಾನ್ಯಾ ಅವರ ಒಂದು ವಿಡಿಯೋವನ್ನು ಆತ ರೆಕಾರ್ಡ್​ ಮಾಡಿದ್ದ. ಪರಿಚಿತರ ವಲಯದವರಿಗೆಲ್ಲ ಅದನ್ನು ತೋರಿಸಿದ್ದ. ಆ ಶಾಕಿಂಗ್​ ಸಂಗತಿಯ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ.

‘ಸಾನ್ಯಾ ನಿನ್ನೆ ರಾತ್ರಿ ಬಿಗ್​ ಬಾಸ್​ ಮನೆಯಲ್ಲಿ ಅತ್ತಿದ್ದಾಳೆ. ಅದನ್ನು ನೋಡಿ ನಾವು ಕೂಡ ಅತ್ತಿದ್ದೇವೆ. ಅವಳು ಎರಡು ವರ್ಷದವಳಾಗಿದ್ದಾಗ ನನಗೆ ಡಿವೋರ್ಸ್​ ಆಯ್ತು. ಹಾಗಾಗಿ ಅಪ್ಪನ ಪ್ರೀತಿ ಆಕೆಗೆ ಸಿಕ್ಕಿರಲಿಲ್ಲ. ನಂತರ ನನ್ನ ಓರ್ವ ಸ್ನೇಹಿತನನ್ನು ನಾನು ಮದುವೆ ಆದೆ. ಅದು ನನ್ನ ತಪ್ಪು ನಿರ್ಧಾರ ಆಗಿತ್ತು. ಸ್ನೇಹಿತರಾಗಿದ್ದಾಗ ಇದ್ದಂತಹ ಸಂಬಂಧ ಮದುವೆ ಆದ ಬಳಿಕ ಹಾಳಾಯಿತು. ಅಪ್ಪ ಬೇಕು ಅಂತ ಬಯಸಿದ್ದ ಸಾನ್ಯಾಗೆ ಸಾಕಾಗಿ ಹೋಯ್ತು’ ಎಂದು ದೀಪಾ ಅಯ್ಯರ್​ ಹೇಳಿದ್ದಾರೆ.

‘ಎರಡನೇ ಗಂಡನಿಗೆ ಡಿವೋರ್ಸ್​ ಮಾಡಬೇಕು ಅಂತ ನಾನು ನಿರ್ಧರಿಸಿದಾಗ ಬಿಟ್ಟುಕೊಡಲು ಆತ ರೆಡಿ ಇರಲಿಲ್ಲ. ಅವನ ಜೊತೆ ಸಾನ್ಯಾಗೆ ಕೆಲವೊಮ್ಮೆ ಅನ್​ಕಂಫರ್ಟ್​ ಆಗುತ್ತಿತ್ತು. ಆತ ನಮ್ಮ ಜೊತೆಯೇ ಇರುತ್ತಿದ್ದ. ಒಮ್ಮೆ ಸಾನ್ಯಾ ಮತ್ತು ಆಕೆಯ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಬಂದು ಮೊಬೈಲ್​ನಲ್ಲಿ ರೆಕಾರ್ಡ್​​ ಮಾಡಿದ. ಅದನ್ನು ಎಲ್ಲರಿಗೂ ತೋರಿಸಿಕೊಂಡು ಬಂದಿದ್ದಾನೆ’ ಎಂದು ದೀಪಾ ಅಯ್ಯರ್​ ಹೇಳಿದ್ದಾರೆ.

ಇದನ್ನೂ ಓದಿ
Sonu Srinivas Gowda: ಮೊದಲ ವಾರವೇ ಸೋನು ಗೌಡ ನಾಮಿನೇಟ್​; 8 ಸ್ಪರ್ಧಿಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ
Sonu Srinivas Gowda: ‘ಸುದೀಪ್​ ಇರುವ ವೇದಿಕೆಗೆ ಇದು ಗೌರವ ಅಲ್ಲ’: ಸೋನು ಶ್ರೀನಿವಾಸ್​ ಗೌಡ ಆಯ್ಕೆ ಆಗಿದ್ದಕ್ಕೆ ನೆಟ್ಟಿಗರು ಗರಂ
Bigg Boss OTT Kannada: ಮೊದಲ ದಿನವೇ ಬಿಗ್​ ಬಾಸ್​ನಲ್ಲಿ ಕಣ್ಣೀರ ಕೋಡಿ; ನೋವು ತೋಡಿಕೊಂಡು ಗಳಗಳನೆ ಅತ್ತ ಸ್ಪರ್ಧಿಗಳು
‘ನಾನು ಸ್ಮೋಕ್​ ಮಾಡ್ತೀನಿ, ಅದ್ರಲ್ಲಿ ತಪ್ಪೇನಿದೆ?’ ‘ಬಿಗ್​ ಬಾಸ್​​’ನಲ್ಲಿ ಸೋನು ಗೌಡ ನೇರ ಪ್ರಶ್ನೆ

‘ತಾನು ಒಳ್ಳೆಯವನು ಎಂದು ಬಿಂಬಿಸಲು ಆತ ಇದನ್ನೆಲ್ಲ ಮಾಡಿದ. ಆತ ನೋಡುವ ನೋಟ ಸರಿ ಇಲ್ಲ ಎಂದು ಸಾನ್ಯಾ ಹೇಳಿದಾಗ ನಾವು ಅದನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಆದ್ರೆ ಸಾನ್ಯಾ ಬಗ್ಗೆ ಆತ ಎಲ್ಲ ಕಡೆ ಗಾಸಿಪ್​ ಹರಡಿಸಿದ್ದ’ ಎಂದು ದೀಪಾ ಅಯ್ಯರ್​ ಕಹಿ ಘಟನೆಗಳನ್ನು ಬಯಲು ಮಾಡಿದ್ದಾರೆ.

Published On - 7:35 pm, Sun, 7 August 22