AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಟಿಟಿಗೆ ಬಂತು ‘ಭ್ರಮಯುಗಂ’ ಸಿನಿಮಾ; ಎಲ್ಲರೂ ಮೆಚ್ಚಿಕೊಂಡ ಈ ಚಿತ್ರದಲ್ಲಿ ಅಂಥದ್ದೇನಿದೆ?

ಸಿನಿಮಾದಲ್ಲಿ ಹಾರರ್ ಅಂಶ ಇದೆ. ಆದರೆ, ದೆವ್ವ ಬಂದು ಪ್ರೇಕ್ಷಕರನ್ನು ಭಯ ಬೀಳಿಸುವುದಿಲ್ಲ. ಹಳೆ ಕಾಲದ ಮನೆ ಕಾಡುತ್ತದೆ. ಹೊಸ ರೀತಿಯ ನಿರೂಪಣೆ ಪ್ರೇಕ್ಷಕನಿಗೆ ಇಷ್ಟ ಆಗಬಹುದು. ಮಹಲಿಗೆ ಬಂದು ಸಿಕ್ಕಿಬಿದ್ದ ತೇವನ್​ನ ಪಾಡು ನೋಡಿದರೆ ವೀಕ್ಷಕನಿಗೂ ಒಮ್ಮೆ ಸಂಕಟ ಆಗೋದು ಪಕ್ಕಾ.

ಒಟಿಟಿಗೆ ಬಂತು ‘ಭ್ರಮಯುಗಂ’ ಸಿನಿಮಾ; ಎಲ್ಲರೂ ಮೆಚ್ಚಿಕೊಂಡ ಈ ಚಿತ್ರದಲ್ಲಿ ಅಂಥದ್ದೇನಿದೆ?
ಬ್ರಹ್ಮಯುಗಂ
ರಾಜೇಶ್ ದುಗ್ಗುಮನೆ
|

Updated on:Mar 16, 2024 | 12:36 PM

Share

ಮಮ್ಮೂಟಿ (Mammootty) ನಟನೆಯ ‘ಭ್ರಮಯುಗಂ’ ಸಿನಿಮಾ ಸೋನಿ ಲಿವ್ ಮೂಲಕ ವೀಕ್ಷಣೆಗೆ ಲಭ್ಯವಿದೆ. ಮಲಯಾಳಂ ಭಾಷೆಯ ಈ ಚಿತ್ರ ಕನ್ನಡ, ಹಿಂದಿ ಮೊದಲಾದ ಭಾಷೆಗೆ ಡಬ್ ಆಗಿ ಪ್ರಸಾರ ಕಂಡಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 8+ ರೇಟಿಂಗ್ ನೀಡಲಾಗಿದೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದೇನಿದೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ. ಕಲರ್​ಫುಲ್ ಸಿನಿಮಾಗಳ ಕಾಲದಲ್ಲೂ ಚಿತ್ರ ಸಂಪೂರ್ಣವಾಗಿ ಬ್ಲ್ಯಾಕ್ ಆ್ಯಂಡ್ ವೈಟ್​ನಲ್ಲಿ ಮೂಡಿ ಬಂದಿದೆ ಅನ್ನೋದು ವಿಶೇಷ.

ಈ ಚಿತ್ರದ ಕಥೆ ನಡೆಯೋದು 17ನೇ ಶತಮಾನದಲ್ಲಿ. ಮಲ್ಬಾರ್ ಭಾಗದಲ್ಲಿ ಈ ಕಥೆ ನಡೆಯುತ್ತದೆ. ತೇವನ್ ಹಾಗೂ ಕೋರನ್ ಒಂದು ಕಾಡಿಗೆ ಬಂದಿರುತ್ತಾರೆ. ರಾತ್ರಿ ವೇಳೆ ಒಂದು ನದಿ ತೀರದಲ್ಲಿ ಉಳಿದುಕೊಳ್ಳುತ್ತಾರೆ. ಕೋರನ್ ಯಕ್ಷಿಣಿಗೆ ಬಲಿಯಾದರೆ ತೇವನ್ ತಪ್ಪಿಸಿಕೊಂಡು ಒಂದು ಪಾಳುಬಿದ್ದ ಮಹಲಿಗೆ ಎಂಟ್ರಿಕೊಡುತ್ತಾನೆ. ಅಲ್ಲಿಂದ ಅಸಲಿ ಕಥೆ ಶುರು. ಅಷ್ಟಕ್ಕೂ ಆ ಮಹಲಿನಲ್ಲಿರುವ ಕೊಡುಮೋನ್ ಪೊಟ್ಟಿ (ಮಮ್ಮೂಟಿ) ಯಾರು, ತೇವನ್​ನ ಗತಿ ನಂತರ ಏನಾಗುತ್ತದೆ ಎಂಬುದು ಸಿನಿಮಾದಲ್ಲಿದೆ.

ಬಹುತೇಕ ಚಿತ್ರದ ಕಥೆ ಸಾಗೋದು ಒಂದು ಹಳೆಯ ಕಾಲದ ಮನೆಯಲ್ಲಿ. ಹೀಗಾಗಿ, ಪ್ರೇಕ್ಷಕನಿಗೆ ಏಕತಾನತೆ ಕಾಡಬಹುದು. ಅಲ್ಲದೆ, ಬ್ಲ್ಯಾಕ್ ಆ್ಯಂಡ್ ವೈಟ್​ನಲ್ಲಿ ಸಿನಿಮಾ ಇದಾಗಿರುವುದರಿಂದ ಕೆಲವರಿಗೆ ಅದು ಕಷ್ಟ ಎನಿಸಬಹುದು. ಮಮ್ಮೂಟಿ ಅವರ ನಟನೆ ಅದ್ಭುತವಾಗಿದೆ. ಈ ಚಿತ್ರದುದ್ದಕ್ಕೂ ಬರುವ ಸಂಭಾಷಣೆಗಳು ಗಮನ ಸೆಳೆಯುವಂತಿದೆ. ‘ಕಲಿಯುಗ ಆದಮೇಲೆ ಬರೋದು ಭ್ರಮಯುಗ. ಇಲ್ಲಿ ದೇವರು ಇರುವುದಿಲ್ಲ. ನೀನು ಎಷ್ಟೇ ಕೂಗಿದರೂ ಆ ದೇವರಿಗೆ ನಿನ್ನ ಕೂಗು ಕೇಳಿಸುವುದಿಲ್ಲ’ ಎಂದು ಹೇಳುವ ಡೈಲಾಗ್ ಸಿನಿಮಾ ಟೈಟಲ್​ನ ಸಮರ್ಥಿಸಿಕೊಳ್ಳುವಂತಿದೆ.

ಇದನ್ನೂ ಓದಿ: ಮಮ್ಮೂಟಿ ನಟನೆಯ ‘ಬ್ರಹ್ಮಯುಗಂ’ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಎದುರಾಯ್ತು ಸಂಕಷ್ಟ

ಸಿನಿಮಾದಲ್ಲಿ ಹಾರರ್ ಅಂಶ ಇದೆ. ಆದರೆ, ದೆವ್ವ ಬಂದು ಪ್ರೇಕ್ಷಕರನ್ನು ಭಯ ಬೀಳಿಸುವುದಿಲ್ಲ. ಹಳೆ ಕಾಲದ ಮನೆ ಕಾಡುತ್ತದೆ. ಹೊಸ ರೀತಿಯ ನಿರೂಪಣೆ ಪ್ರೇಕ್ಷಕನಿಗೆ ಇಷ್ಟ ಆಗಬಹುದು. ಮಹಲಿಗೆ ಬಂದು ಸಿಕ್ಕಿಬಿದ್ದ ತೇವನ್​ನ ಪಾಡು ನೋಡಿದರೆ ವೀಕ್ಷಕನಿಗೂ ಒಮ್ಮೆ ಸಂಕಟ ಆಗೋದು ಪಕ್ಕಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:02 am, Sat, 16 March 24

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಕೆಪಿಎಸ್​ಸಿ ಅಕ್ರಮ: ಬಸವರಾಜ್ ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಬಿಜೆಪಿ ಶಾಸಕ ಮುನಿರತ್ನ ಮನೆ ಬಳಿ ಭಾರಿ ಹೈಡ್ರಾಮಾ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಛತ್ತೀಸ್​ಗಢ: 48 ಗಂಟೆಗಳ ಮಳೆಗೆ ಕುಸಿದ ಬೆಟ್ಟ
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
ಲಾರಿ ಅಡ್ಡಗಟ್ಟಿದ ಗಜಪಡೆ: ಛಂಗನೆ ನೆಗೆದು ರಸ್ತೆ ದಾಟಿದ ಬೃಹತ್ ಚಿರತೆ!
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
'ಮನೆಯಲ್ಲಿ ಅಮ್ಮ ಇರಲಿಲ್ಲ, ಹೀಗಾಗಿ ಬರೋದು ತಡವಾಯ್ತು': ಸಚಿವ ಯತೀಂದ್ರ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ
ಸಮಯ ಪ್ರಜ್ಞೆ ಇಲ್ವೇನ್ರೀ: ಯತೀಂದ್ರ ಬಗ್ಗೆ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ