ಸೋನಾಕ್ಷಿ ಸಿನ್ಹಾ ಹಾಗೂ ವಿಜಯ್ ವರ್ಮಾ ನಟನೆಯ ‘ದಹಾಡ್’ (Dhaad) ವೆಬ್ ಸೀರಿಸ್ ಇತ್ತೀಚೆಗೆ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಕಂಡಿದೆ. ಕ್ರೈಮ್ ಥ್ರಿಲರ್ ಶೈಲಿಯಲ್ಲಿ ಈ ಸೀರಿಸ್ ಮೂಡಿ ಬಂದಿದೆ. ಮೇ 12ರಂದು ರಿಲೀಸ್ ಆಗಿರೋ ಈ ಸೀರಿಸ್ಗೆ ಮೆಚ್ಚುಗೆ ಪಡೆದಿದೆ. ರೀಮಾ ಕಗ್ತಿ, ರುಚಿಕಾ ಒಬೆರಾಯ್ ಅವರು ಈ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಜೋಯಾ ಅಖ್ತರ್ ಹಾಗೂ ರೀಮಾ ಈ ಕಥೆಯನ್ನಯ ಬರೆದಿದ್ದಾರೆ. 20 ಮಹಿಳೆಯರನ್ನು ಕೊಂದ ಹಂತಕ ಹುಡುಕುವ ಕಥೆಯನ್ನು ಈ ಸೀರಿಸ್ ಒಳಗೊಂಡಿದೆ.
ವಿಜಯ್ ವರ್ಮಾ ಅವರ ಪಾತ್ರ ಸಂಪೂರ್ಣವಾಗಿ ಫಿಕ್ಷನಲ್ ಅಲ್ಲ ಎನ್ನಲಾಗಿದೆ. 2003 ಮತ್ತು 2009ರ ನಡುವೆ ಕರ್ನಾಟಕದಲ್ಲಿ 20 ಮಹಿಳೆಯರನ್ನು ಮೋಹನ್ ಕುಮಾರ್ ಎಂಬಾತ ಹತ್ಯೆ ಮಾಡಿದ್ದ. ಮೋಹನ್ ಕುಮಾರ್ ಅಕ ಸೈನೈಡ್ ಮೋಹನ್ ಪಾತ್ರದ ಜೊತೆ ವಿಜಯ್ ವರ್ಮಾ ಮಾಡಿರುವ ಪಾತ್ರ ಸಾಕಷ್ಟು ಸಾಮ್ಯತೆ ಹೊಂದಿದೆ. ಈ ಸೀರಿಸ್ನ ಕಥೆ ರಾಜಸ್ಥಾನದಲ್ಲಿ ಸಾಗುತ್ತದೆ.
ಇದನ್ನೂ ಓದಿ: Sonakshi Sinha;ದಹಾಡ್; ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ
ಮೋಹನ್ ಕುಮಾರ್ ಗುರಿಯಾಗಿಸಿಕೊಳ್ಳುತ್ತಿದ್ದುದು 20-30 ಪ್ರಾಯದ ಮಹಿಳೆಯರನ್ನು. ವರದಕ್ಷಿಣೆ ಕೊಡಲು ಸಾಧ್ಯವಾಗದೇ ಇರುವ ಮಹಿಳೆಯರೇ ಇವನ ಟಾರ್ಗೆಟ್. ಅವರನ್ನು ಮದುವೆಯಾಗುವುದಾಗಿ ಆತ ಆಮಿಷ ಒಡ್ಡುತ್ತಿದ್ದ. ಮಹಿಳೆಯರೊಂದಿಗೆ ಹೋಟೆಲ್‌ನಲ್ಲಿ ರಾತ್ರಿ ಕಳೆಯುತ್ತಿದ್ದ. ನಂತರ ಈ ಮಹಿಳೆಯರಿಗೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದ. ಆದರೆ, ಆತ ಕೊಡುತ್ತಿದ್ದುದು ಸೈನೈಡ್ನ! ಒಟ್ಟು 20 ಜನರನ್ನು ಆತ ಹೀಗೆ ಕೊಂದಿದ್ದಾನೆ. ಈ ಮೃತ ದೇಹಗಳು ಬಸ್ ನಿಲ್ದಾಣದ, ಸಾರ್ವಜನಿಕ ಶೌಚಾಲಯದಲ್ಲಿ ಪತ್ತೆ ಆಗಿವೆ. ಎಲ್ಲಾ ಹೆಣಗಳು ಸಿಕ್ಕಿರೋದು ಮದುವೆ ಉಡುಗೆಯಲ್ಲಿ. ಆದರೆ, ಯಾರ ದೇಹದಮೇಲೂ ಚಿನ್ನಾಭರಣ ಇರುತ್ತಿರಲಿಲ್ಲ. ವಿಜಯ್ ವರ್ಮಾ ಪಾತ್ರಕ್ಕೂ ಮೋಹನ್ ಕುಮಾರ್ ಮಾಡಿದ ಅಪರಾಧಕ್ಕೂ ನಂಟಿದೆ.
ಮೋಹನ್ ಕುಮಾರ್ನ 2009ರಲ್ಲಿ ಅರೆಸ್ಟ್ ಮಾಡಲಾಯಿತು. ಮಂಗಳೂರಿನ ಹೊರ ವಲಯದಲ್ಲಿ ಆತ ಸಿಕ್ಕಿಬಿದ್ದಿದ್ದ. ಬೆಳಗಾವಿ ಜೈಲಿನಲ್ಲಿ ಆತನನ್ನು ಇರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ