ಈ ನಟ ಒಂದು ಸಿನಿಮಾಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಬರೋಬ್ಬರಿ 744 ಕೋಟಿ ರೂಪಾಯಿ
ಬಾಂಡ್ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನಿಯಲ್ ಕ್ರೇಗ್ ‘ನೈವ್ಸ್ ಔಟ್’ ಸೀಕ್ವೆಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಯಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾಲಿವುಡ್ ಸಿನಿಮಾಗಳ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಈ ಕಾರಣಕ್ಕೆ ಸಿನಿಮಾ ಬಜೆಟ್ ಕೂಡ ದೊಡ್ಡದಾಗಿಯೇ ಇರುತ್ತದೆ. ಈಗ ಹಾಲಿವುಡ್ ಹೀರೋನ ಸಂಭಾವನೆ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕಿದ್ದಾರೆ. ಏಕೆಂದರೆ, ಸಿನಿಮಾವೊಂದಕ್ಕೆ ಈ ಹೀರೋ ಪಡೆದಿರುವುದು ಬರೋಬ್ಬರಿ 744 ಕೋಟಿ ರೂಪಾಯಿ!
ಹೌದು, ಬಾಂಡ್ ಸಿನಿಮಾಗಳ ಮೂಲಕ ಹೆಚ್ಚು ಗುರುತಿಸಿಕೊಂಡಿರುವ ಡ್ಯಾನಿಯಲ್ ಕ್ರೇಗ್ ‘ನೈವ್ಸ್ ಔಟ್’ ಸೀಕ್ವೆಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಡ್ಯಾನಿಯಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸೋಕೆ 100 ಮಿಲಿಯನ್ ಡಾಲರ್ ಕೇಳಿದ್ದಾರೆ. ಭಾರತೀಯ ಕರೆನ್ಸಿಯಲ್ಲಿ 744 ಕೋಟಿ ರೂಪಾಯಿ ಆಗಲಿದೆ. ನೆಟ್ಫ್ಲಿಕ್ಸ್ ಈ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.
ಡ್ವೇನ್ ಜಾನ್ಸನ್ ಕೂಡ ಸಂಭಾವನೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ಕೂಡ ದೊಡ್ಡ ಮೊತ್ತದ ಸಂಭಾವನೆ ಜೇಬಿಗೆ ಇಳಿಸಿಕೊಂಡಿದ್ದಾರೆ. ಅಮೇಜಾನ್ ಪ್ರೈಮ್ ನಿರ್ಮಾಣ ಮಾಡುತ್ತಿರುವ ‘ರೆಡ್ ಒನ್’ ಸಿನಿಮಾಗೆ ಅವರು 50 ಮಿಲಿಯನ್ ಡಾಲರ್ ಅಂದರೆ 372 ಕೋಟಿ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ.
ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ವಿಸ್ತರಣೆ ಆಗಿದೆ. ಸಾಕಷ್ಟು ಸಿನಿಮಾಗಳು ಒಟಿಟಿ ಮೊರೆ ಹೋಗುತ್ತಿವೆ. ಚಿತ್ರಮಂದಿರಗಳು ಸರಿಯಾಗಿ ತೆರೆಯದೇ ಇರುವ ಕಾರಣ, ಒಟಿಟಿ ಪ್ಲಾಟ್ಫಾರ್ಮ್ಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿವೆ. ಹೀಗಾಗಿ, ದೊಡ್ಡ ಬಜೆಟ್ ಚಿತ್ರಗಳನ್ನು ಕೂಡ ನಿರ್ಮಾಣ ಮಾಡೋಕೆ ನೆಟ್ಫ್ಲಿಕ್ಸ್ ಹಾಗೂ ಅಮೇಜಾನ್ ಪ್ರೈಮ್ ಸೇರಿ ಸಾಕಷ್ಟು ಒಟಿಟಿ ಪ್ಲಾಟ್ಫಾರ್ಮ್ಗಳು ಮುಂದೆ ಬಂದಿವೆ.
ಇದನ್ನೂ ಓದಿ: ‘ಪರಮ ಸುಂದರಿ’ ಹಾಡಿನಿಂದ ಮಿಂಚುತ್ತಿರುವ ನಟಿ ಕೃತಿ ಸನೋನ್ ಸಂಭಾವನೆ ಎಷ್ಟು? ಇಲ್ಲಿವೆ ಇಂಟರೆಸ್ಟಿಂಗ್ ವಿಷಯಗಳು
KGF 2 ಚಿತ್ರದ ಸ್ಯಾಟಲೈಟ್ ಹಕ್ಕು ಮಾರಾಟ; ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ
Published On - 9:49 pm, Fri, 20 August 21