AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಗೆದ್ದ ಭಾರತೀಯ ವೀರ್ ದಾಸ್

Emmy 2023: ಕಿರುತೆರೆಯ ಆಸ್ಕರ್ ಎಂದೇ ಪರಿಗಣಿತವಾಗಿರುವ ಎಮ್ಮಿ ಪ್ರಶಸ್ತಿ ವಿತರಣೆ ಆಗಿದ್ದು, ಭಾರತೀಯ ಕಮಿಡಿಯನ್ ವೀರ್ ದಾಸ್ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಗೆದ್ದ ಭಾರತೀಯ ವೀರ್ ದಾಸ್
ವೀರ್ ದಾಸ್
Follow us
ಮಂಜುನಾಥ ಸಿ.
|

Updated on: Nov 21, 2023 | 9:01 AM

ಅತ್ಯುತ್ತಮ ಸಿನಿಮಾಗಳಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ಎಂದು ಆಸ್ಕರ್ (Oscar) ಅನ್ನು ಗುರುತಿಸಲಾಗುತ್ತದೆ. ಹಾಗೆಯೇ ಟಿವಿ ಶೋಗಳಿಗೆ ನೀಡಲಾಗುವ ವಿಶ್ವದ ಸರ್ವೋತ್ತಮ ಪ್ರಶಸ್ತಿಯೆಂದು ಎಮ್ಮಿ ಪ್ರಶಸ್ತಿಯನ್ನು (Emmy Award) ಕರೆಯಲಾಗುತ್ತದೆ. ಬೆರಳೆಣಿಕೆಯ ಭಾರತೀಯರಷ್ಟೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದೀಗ ಆ ಪಟ್ಟಿಗೆ ಹೊಸ ಸೇರ್ಪಡೆ ಭಾರತದ ಜನಪ್ರಿಯ ಕಮಿಡಿಯನ್ ವೀರ್ ದಾಸ್.

ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್​ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪ್ರಶಸ್ತಿಯನ್ನು ‘ಡೆರ್ರಿ ಗರ್ಲ್ಸ್​-ಸೀಸನ್ 3’ ಜೊತೆಗೆ ಹಂಚಿಕೊಳ್ಳಲಾಗಿದೆ. ‘ವೀರ್ ದಾಸ್; ಲ್ಯಾಂಡಿಂಗ್’ ಹಾಗೂ ‘ಡೆರ್ರಿ ಗರ್ಲ್ಸ್​-ಸೀಸನ್ 3’ ಎರಡೂ ಶೋಗಳಿಗೆ ಜಂಟಿಯಾಗಿ ಪ್ರಶಸ್ತಿಯನ್ನು ನೀಡಲಾಗಿದೆ.

‘ವೀರ್ ದಾಸ್; ಲ್ಯಾಂಡಿಂಗ್’ ಶೋನಲ್ಲಿ ವೀರ್ ದಾಸ್, ಅಮೆರಿಕ ಹಾಗೂ ಭಾರತದ ಸಂಸ್ಕೃತಿಗಳ ಬಗ್ಗೆ ರಾಜಕೀಯ ದೃಷ್ಟಿಕೋನದಿಂದ ಮಾತನಾಡಿದ್ದಾರೆ. ರಾಜಕಾರಣಿಯೊಬ್ಬ ಈ ಭಿನ್ನತೆಯನ್ನು ಹೇಗೆ ಗ್ರಹಿಸುತ್ತಾನೆ ಎಂಬುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಜೊತೆಗೆ ಭಾರತೀಯನಾಗಿ ಅಮೆರಿಕದಲ್ಲಿ ಬೆಳೆದ ತನಗೆ ಸಂಸ್ಕೃತಿ, ಸ್ವಂತ ನೆಲ ಎರಡೂ ಇಲ್ಲದ ಬಗ್ಗೆಯೂ ವೀರ್ ದಾಸ್ ಮಾತನಾಡಿದ್ದಾರೆ.

ಇದನ್ನೂ ಓದಿ:Emmy Awards 2023: ಪ್ರಶಸ್ತಿಗೆ ಸೆಣೆಸಲಿರುವ ಅತ್ಯುತ್ತಮ ಶೋಗಳು, ಇಲ್ಲಿದೆ ಪಟ್ಟಿ

ವೀರ್ ದಾಸ್ ಭಾರತದ ಜನಪ್ರಿಯ ಕಮಿಡಿಯನ್. ಅವರು ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ತುಂಬಿದ ಗೃಹಗಳ ಕಾಮಿಡಿ ಶೋಗಳನ್ನು ನೀಡಿದ್ದಾರೆ. ಅವರ ಕೆಲವು ಶೋಗಳು ವಿವಾದಕ್ಕೆ ಕಾರಣವಾಗಿದ್ದೂ ಸಹ ಇದೆ. ವಿದೇಶಗಳಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ವೀರ್ ದಾಸ್ ವಿರುದ್ಧ ಆರೋಪ ಮಾಡಲಾಗಿತ್ತು. ದೂರು ಸಹ ದಾಖಲಾಗಿತ್ತು. ವೀರ್ ದಾಸ್ ಅನ್ನು ಭಯೋತ್ಪಾದಕ ಎಂದೂ ಸಹ ಕರೆಯಲಾಗಿತ್ತು. ಈಗ ಅವರಿಗೆ ಪ್ರತಿಷ್ಠಿತ ಎಮ್ಮಿ ಪ್ರಶಸ್ತಿ ಲಭಿಸಿದೆ.

ವೀರ್ ದಾಸ್ ಮಾತ್ರವೇ ಅಲ್ಲದೆ ಭಾರತೀಯ ಟಿವಿ ಜಗತ್ತಿನ ರಾಣಿ ಎಂದೇ ಕರೆಯಲಾಗುವ ಏಕ್ತಾ ಕಪೂರ್​ಗೂ ಪ್ರಶಸ್ತಿ ಲಭಿಸಿದೆ. ಭಾರತೀಯ ಟೆಲಿವಿಷನ್ ಜಗತ್ತಿನಲ್ಲಿ ತಂಡ ಬದಲಾವಣೆ ಹಾಗೂ ವೃತ್ತಿಜೀವನದ ಸಾಧನೆಗಾಗಿ ಏಕ್ತಾ ಕಪೂರ್ ಅವರಿಗೆ ಎಮ್ಮಿ ಡೈರೆಕ್ಟೊರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

‘ಡೆಲ್ಲಿ ಕ್ರೈಂ’ ಸರಣಿಯ ನಟಿ ಶಫಾಲಿ ಶಾ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದರು ಆದರೆ ಅವರಿಗೆ ಪ್ರಶಸ್ತಿ ಕೊನೆಯ ಹಂತದಲ್ಲಿ ಕೈತಪ್ಪಿತು. ಜಿಮ್ ಸರ್ಬ್​ ಅವರುಗಳು ಸಹ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಲಭಿಸಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ಆಂಧ್ರಪ್ರದೇಶ ಮೂಲದ ಕಳ್ಳನಿಂದ ₹ 11 ಲಕ್ಷದ ವಾಹನಗಳು ವಶಕ್ಕೆ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
ನಾಗರಹೊಳೆಯಲ್ಲಿ ಕುಟುಂಬಸ್ಥರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಫಾರಿ
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ