
ಮನೋಜ್ ಬಾಜ್ಪಾಯಿ ನಟನೆಯ ‘ಫ್ಯಾಮಿಲಿ ಮ್ಯಾನ್’ (Family Man) ಹಾಗೂ ‘ಫ್ಯಾಮಿಲಿ ಮ್ಯಾನ್ 2’ ಸರಣಿ ಸಾಕಷ್ಟು ಟ್ರೆಂಡ್ ಸೃಷ್ಟಿ ಮಾಡಿತ್ತು. ಈಗ ಈ ಚಿತ್ರಕ್ಕೆ ಮೂರನೇ ಪಾರ್ಟ್ ಬರುವುದರಲ್ಲಿದೆ. ಈ ಸರಣಿಯ ರಿಲೀಸ್ ಬಗ್ಗೆ ಇಷ್ಟು ದಿನ ಊಹಾಪೋಹಗಳು ಮಾತ್ರ ಹರಿದಾಡಿದ್ದವು. ಇದು ಬರೋದಿಲ್ಲ ಎಂಬ ಮಾತುಗಳು ಕೇಳಿ ಬಂದವು. ಈಗ ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿದೆ.
ಫ್ಯಾಮಿಲಿ ಮ್ಯಾನ್ ಸರಣಿಯಲ್ಲಿ ಮನೋಜ್ ಅವರು ಶ್ರೀಕಾಂತ್ ತಿವಾರಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರನೇ ಪಾರ್ಟ್ನಲ್ಲೂ ಅವರ ಪಾತ್ರ ಮುಂದುವರಿಯಲಿದೆ. ಈ ಸರಣಿಯಲ್ಲಿ ವೈರಸ್ ಬಗ್ಗೆ ಹೇಳಲಾಗುತ್ತದೆ ಎನ್ನಲಾಗುತ್ತಿದೆ. ನವೆಂಬರ್ 21ರಂದು ಈ ವೆಬ್ ಸರಣಿ ಪ್ರದರ್ಶನ ಆರಂಭಿಸಲಿದೆ. ಸರಣಿಯ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಸರಣಿಯ ಕಥೆ ಬಗ್ಗೆ ಮಾಹಿತಿ ಸಿಗೋ ಸಾಧ್ಯತೆ ಇದೆ.
ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್ 3’ ಮೇಲಿನ ನಿರೀಕ್ಷೆ ಹೆಚ್ಚಿಸಿದ ಹೊಸ ಪೋಸ್ಟರ್
‘ಫ್ಯಾಮಿಲಿ ಮ್ಯಾನ್ 3’ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಬಿಡುಗಡೆ ಕಂಡಿರೋ ಎರಡು ಸರಣಿಗಳು ಸೃಷ್ಟಿ ಮಾಡಿರೋ ಹೈಪ್ನಿಂದ ಮೂರನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸರಣಿಯ ಟ್ರೇಲರ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
THE FAMILY MAN 3 – NOVEMBER 21 @PrimeVideoIN just announced November 21 as the global premiere date for Season 3 of its most-loved Original series #TheFamilyManOnPrime, created by @rajndk and starring @BajpayeeManoj as the iconic Srikant Tiwari.
Also joining as antagonists are… pic.twitter.com/sULwt15GbL
— Sumit Kadel (@SumitkadeI) October 28, 2025
ಶ್ರೀಕಾಂತ್ ತಿವಾರಿ ಟಾಸ್ಕ್ ಫೋರ್ಸ್ನಲ್ಲಿ ಕೆಲಸ ಮಾಡೋ ವ್ಯಕ್ತಿ. ಅಂದರೆ ದೇಶದಲ್ಲಿ ಸಂಭವಿಸಬಹುದಾದ ಉಗ್ರರರ ದಾಳಿಯ ಬಗ್ಗೆ ಮೊದಲೇ ಮಾಹಿತಿ ಪಡೆದು, ದಾಳಿ ಆಗದಂತೆ ತಡೆಯೋದು ಶ್ರೀಕಾಂತ್ ಕೆಲಸ. ಶ್ರೀಕಾಂತ್ ತಿವಾರಿ ಜೊತೆ ಜೆಕೆ ತಲ್ಪಡೆ, ಸುಚಿತ್ರಾ ತಿವಾರಿ, ದೃತಿ ತಿವಾರಿ ಮೊದಲಾದ ಪಾತ್ರಗಳು ಪ್ರಮುಖವಾಗಿವೆ. ಕಳೆದ ಸೀಸನ್ನಲ್ಲಿ ಸಮಂತಾ ಅವರು ಮುಖ್ಯಭೂಮಿಕೆಯಲ್ಲಿದ್ದರು. ಈ ಬಾರಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.