ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

|

Updated on: Mar 29, 2025 | 8:44 PM

OTT release: ಕಳೆದ ವಾರದಂತೆಯೇ ಈ ವಾರವೂ ಸಹ ಕೆಲ ಹಿಟ್ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಕನ್ನಡದ ಸಿನಿಮಾ ಒಂದು ಸಹ ಈ ವಾರ ಒಟಿಟಿಗೆ ಬಂದಿದೆ. ಕನ್ನಡದ ಒಂದು ಸಿನಿಮಾ ಸೇರಿದಂತೆ ಬೇರೆ ಬೇರೆ ಭಾಷೆಯ ಹಿಟ್ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಕಂಡಿವೆ. ಇಲ್ಲಿದೆ ಪಟ್ಟಿ.

ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ
Ott Release
Follow us on

ಐಪಿಎಲ್ ಶುರುವಾಗಿ ವಾರವಾಗುತ್ತಾ ಬಂದಿದೆ. ಕಳೆದ ವಾರ ಚಿತ್ರಮಂದಿರಗಳಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಇರಲಿಲ್ಲ. ಆದರೆ ಈ ವಾರ ಪರಿಸ್ಥಿತಿ ಹಾಗಿಲ್ಲ. ಕನ್ನಡದ ‘ಮನದ ಕಡಲು’ ಸೇರಿದಂತೆ ಹಿಂದಿಯ ‘ಸಿಖಂಧರ್’, ತೆಲುಗಿನ ‘ರಾಬಿನ್​ಹುಡ್’ ‘ಮ್ಯಾಡ್’ ಇನ್ನೂ ಕೆಲ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿವೆ. ಹಾಗೆಂದು ಒಟಿಟಿಗಳು ಸಹ ಹಿಂದೆ ಬಿದ್ದಿಲ್ಲ. ಕಳೆದ ವಾರದಂತೆಯೇ ಈ ವಾರವೂ ಸಹ ಕೆಲ ಹಿಟ್ ಸಿನಿಮಾಗಳು ಒಟಿಟಿಗೆ ಲಗ್ಗೆ ಇಟ್ಟಿವೆ. ಕನ್ನಡದ ಸಿನಿಮಾ ಒಂದು ಸಹ ಈ ವಾರ ಒಟಿಟಿಗೆ ಬಂದಿದೆ.

‘ಛೂ ಮಂತರ್’

ಶರಣ್ ನಟನೆಯ ‘ಛೂ ಮಂತರ್’ ಸಿನಿಮಾ ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಹಾರರ್ ಕತೆಯ ಜೊತೆಗೆ ಕಾಮಿಡಿ ಸಹ ಇರುವ ಈ ಸಿನಿಮಾ ಯಶಸ್ಸನ್ನು ಚಿತ್ರಮಂದಿರಗಳಲ್ಲಿ ಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು, ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಶರಣ್ ಜೊತೆಗೆ ಚಿಕ್ಕಣ್ಣ, ಅದಿತಿ ಇನ್ನೂ ಕೆಲ ನಟ-ನಟಿಯರು ಸಿನಿಮಾದಲ್ಲಿದ್ದಾರೆ.

ಮುಫಾಸಾ

ವಿಶ್ವದಾದ್ಯಂತ ಜನಪ್ರಿಯವಾಗಿರುವ ‘ದಿ ಲಯನ್ ಕಿಂಗ್’ ಮಾದರಿಯದ್ದೇ ಸಿನಿಮಾ ‘ಮುಫಾಸಾ’ ಈ ವಾರ ಒಟಿಟಿಗೆ ಲಗ್ಗೆ ಇಟ್ಟಿದೆ. ಭಾರಿ ಬಜೆಟ್​ನ ಈ ಇಂಗ್ಲೀಷ್ ಸಿನಿಮಾ ಹಲವು ಭಾರತೀಯ ಭಾಷೆಗಳಲ್ಲಿ ಡಬ್ ಆಗಿ ಒಟಿಟಿಗೆ ಬಂದಿದೆ. ಹಿಂದಿಯಲ್ಲಿ ಈ ಸಿನಿಮಾಕ್ಕೆ ಸ್ವತಃ ಶಾರುಖ್ ಖಾನ್ ಧ್ವನಿ ನೀಡಿರುವುದು ವಿಶೇಷ. ‘ಮುಫಾಸಾ’ ಸಿನಿಮಾ ಮಾರ್ಚ್ 28 ರಿಂದ ಜಿಯೋ ಹಾಟ್​ಸ್ಟಾರ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಇದನ್ನೂ ಓದಿ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ
ಮಹೇಶ್ ಬಾಬು ಜೊತೆ ನಟಿಸಿದರೂ ಸಿಗದ ಅದೃಷ್ಟ; ಈಗ ಗೂಗಲ್​ನಲ್ಲಿ ಕೆಲಸ
‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು ಬರೋಬ್ಬರಿ 15 ಕೆಜಿ ಚಿನ್ನ
ಪುಡಿರೌಡಿ ತರ ಆಡೋದು ಬಿಡಿ, ಸಿಎಂ ಆದ್ರೆ ಕಷ್ಟ ಇದೆ’; ಡಿಕೆಶಿಗೆ ಕೌಂಟರ್

ವಿಡುದಲೈ ಪಾರ್ಟ್ 2

ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನ ಮಾಡಿದ್ದ ‘ವಿಡಯದಲೈ’ ಸಿನಿಮಾದ ಮುಂದುವರೆದ ಭಾಗ ‘ವಿಡುದಲೈ ಭಾಗ 2’ ಕೆಲ ತಿಂಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ತುಸು ತಡವಾಗಿಯೇ ಸ್ಟ್ರೀಮಿಂಗ್ ಆರಂಭಿಸಿದೆ. ‘ವಿಡುದಲೈ ಪಾರ್ಟ್ 2’ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾದ ಮೊದಲ ಭಾಗವೂ ಅದೇ ಒಟಿಟಿಯಲ್ಲಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿದೆ ಕನ್ನಡದ ಸುಂದರ ಸಿನಿಮಾ

ದೇವ

ಶಾಹಿದ್ ಕಪೂರ್ ನಟಿಸಿರುವ ‘ದೇವ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಶಾಹಿದ್ ಕಪೂರ್, ರೌಡಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು. ಶಾಹಿದ್​ರ ಭಿನ್ನ ಪಾತ್ರದ ಕಾರಣಕ್ಕೆ ಸಿನಿಮಾ ಗಮನ ಸೆಳೆದಿತ್ತು. ಆದರೆ ಅಷ್ಟೇನೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ ಸಿನಿಮಾ. ಇದೀಗ ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಸೆರುಪ್ಪುಗಲ್ ಜಾಗೃತೆ

‘ಸೆರುಪ್ಪುಗಲ್ ಜಾಗೃತೆ’ (ಚಪ್ಪಲಿ ಹುಷಾರು) ಹೆಸರಿನ ತಮಿಳು ಸಿನಿಮಾ ಇದೇ ವಾರ ಒಟಿಟಿಗೆ ಬಿಡುಗಡೆ ಆಗಿದೆ. ಕಳೆದು ಹೋದ ಒಂದು ಜೊತೆ ಚಪ್ಪಲಿಗಳಿಗಾಗಿ ಹುಡುಕಾಡುವ ಸಿನಿಮಾ ಇದು. ಅಂದಹಾಗೆ ಕಳೆದು ಹೋದ ಆ ಚಪ್ಪಲಿಯ ಒಳಗೆ ವಜ್ರಗಳಿವೆ. ಈ ಕಾಡಿಮಿ ಥ್ರಿಲ್ಲರ್ ಸಿನಿಮಾ ಜೀ5 ನಲ್ಲಿ ಸ್ಟ್ರೀಂ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Sat, 29 March 25