
ಒಟಿಟಿ ವ್ಯಾಪ್ತಿ ಹೆಚ್ಚಿದಂತೆ ವೆಬ್ ಸೀರಿಸ್ಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ 2020ರಿಂದ ಈಚೆಗೆ ಭಾರತದಲ್ಲಿ ಹಲವು ರೀತಿಯ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡಿ ಒಟಿಟಿ ಪ್ರಿಯರ ಎದುರು ಇಡಲಾಗುತ್ತಿದೆ. ಈಗ ನಾವು ಹೇಳುತ್ತಿರುವ ವೆಬ್ ಸೀರಿಸ್ ನವ ವಿವಾಹಿತನ ಕೊಲೆಯ ಬಗ್ಗೆ ಇದೆ. ಅದೂ ಈ ಕೊಲೆ ನಡೆಯೋದು ಹನಿಮೂನ್ನಲ್ಲೇ. ಈ ವೆಬ್ ಸೀರಿಸ್ ಹೆಸರು ‘ಹನಿಮೂನ್ ಫೋಟೋಗ್ರಾಫರ್.
ಇತ್ತೀಚೆಗೆ ಮೇಘಾಲಯದಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿತ್ತು. ಹನಿಮೂನ್ಗೆ ಹೋದಾಗ ಪತ್ನಿಯೇ ಲವರ್ ಜೊತೆ ಸೇರಿ ಪತಿಯ ಕೊಲೆ ಮಾಡಿದ್ದರು. ಈ ಕೊಲೆ ಸಾಕಷ್ಟು ಶಾಕಿಂಗ್ ಆಗಿತ್ತು. ಈ ಕೊಲೆಯ ಮೇಲೆ ಮುಂದೊಂದು ದಿನ ವೆಬ್ ಸೀರಿಸ್ ಬಂದರೂ ಅಚ್ಚರಿ ಏನಿಲ್ಲ. ಆದರೆ, 2024ರಲ್ಲೇ ಈ ರೀತಿಯ ಹನಿಮೂನ್ನಲ್ಲಿ ನಡೆಯುವ ಕೊಲೆ ಪ್ರಕರಣದ ಬಗ್ಗೆ ಸೀರಿಸ್ ಮಾಡಲಾಗಿದೆ.
ನವ ವಿವಾಹಿತರಿಬ್ಬರು ಮಾಲ್ಡೀವ್ಸ್‌ಗೆ ಹನಿಮೂನ್ಗೆ ತೆರಳುತ್ತಾರೆ. ಇವರ ಫೋಟೋ ತೆಗೆಯೋಕೆ ಲೇಡಿ ಫೋಟೋಗ್ರಾಫರ್ ಕೂಡ ಬರುತ್ತಾಳೆ. ರಾತ್ರೋ ರಾತ್ರಿ ನವ ವಿವಾಹಿತನ ಕೊಲೆ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಈ ಕೊಲೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಬರಲಾಗುತ್ತದೆ. ಆಗಗ ಬರೋ ಟ್ವಿಸ್ಟ್ ಅಚ್ಚರಿ ಮೂಡಿಸುತ್ತದೆ.
ಇದನ್ನೂ ಓದಿ: ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್
ಅರ್ಜುನ್ ಶ್ರೀವಾಸ್ತವ ಅವರು ಈ ವೆಬ್ ಸರಣಿಯನ್ನು ನಿರ್ದೇಶಿಸಿದ್ದಾರೆ. ಆಶಾ ನೇಗಿ, ರಾಜೀವ್ ಸಿದ್ಧಾರ್ಥ, ಅಪೇಕ್ಷಾ ಪೋರ್ವಾಲ್, ಸಾಹಿಲ್ ಸಲಾಥಿಯಾ ಮೊದಲಾದವರು ಈ ಸರಣಿಯಲ್ಲಿ ನಟಿಸಿದ್ದಾರೆ.
ಈ ವೆಬ್ ಸರಣಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಕೇವಲ ಆರು ಎಪಿಸೋಡ್ಗಳು ಇದ್ದು ಎಲ್ಲವೂ 30-35 ನಿಮಿಷಗಳ ಅಂತರದಲ್ಲಿ ಇದೆ. ಹೀಗಾಗಿ ಒಂದೇ ಸ್ಟ್ರೆಚ್ನಲ್ಲಿ ಸರಣಿ ನೋಡಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Fri, 27 June 25