Huma Qureshi: ಹುಮಾ ಖುರೇಷಿ ನಟನೆಯ ‘ತರ್ಲಾ’ ಸಿನಿಮಾಗೆ ಮೆಚ್ಚುಗೆ; ಜೀ5 ಒಟಿಟಿಯಲ್ಲಿ ಪ್ರಸಾರ
Tarla Movie: ‘ತರ್ಲಾ ಸಿನಿಮಾ ಮಹಿಳೆಯರಿಗೆ ಮಾತ್ರವಲ್ಲ. ಪುರುಷರು ಕೂಡ ಈ ಚಿತ್ರವನ್ನು ನೋಡಬೇಕು. ಈಗ ಅಡುಗೆ ಎಂಬುದು ಬರೀ ಮಹಿಳೆಯರಿಗಷ್ಟೇ ಸೀಮಿತವಲ್ಲ’ ಎಂದು ಹುಮಾ ಖುರೇಷಿ ಹೇಳಿದ್ದಾರೆ.
ಜೀ5 ಒಟಿಟಿಯಲ್ಲಿ ‘ತರ್ಲಾ’ ಸಿನಿಮಾ (Tarla Movie) ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಭಾರತದ ಫಸ್ಟ್ ಸೆಲೆಬ್ರಿಟಿ ಕುಕ್ ಎಂಬ ಖ್ಯಾತಿ ಪಡೆದ ಪಾಕಶಾಲೆಯ ಮಾಂತ್ರಿಕರಾದ ತರ್ಲಾ ದಲಾಲ್ (Tarla Dalal) ಅವರ ಜೀವನಾಧಾರಿತ ಸಿನಿಮಾವಾಗಿ ‘ತರ್ಲಾ’ ಮೂಡಿಬಂದಿದೆ. ಹಿಂದಿ ಚಿತ್ರರಂಗದ ಫೇಮಸ್ ನಟಿ ನಟಿ ಹುಮಾ ಖುರೇಷಿ (Huma Qureshi) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಪಿಯೂಷ್ ಗುಪ್ತಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ತರ್ಲಾ ದಲಾಲ್ ಅವರ ಬದುಕಿನ ವಿವರಗಳನ್ನು ಒಳಗೊಂಡಿದೆ. ತರ್ಲಾ ಪಾತ್ರಕ್ಕೆ ಹುಮಾ ಖುರೇಷಿ ಬಣ್ಣ ಹಚ್ಚಿದ್ದಾರೆ.
ಹುಮಾ ಖುರೇಷಿ ಅವರು ಈ ಸಿನಿಮಾ ಒಪ್ಪಿಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ಅವರು ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ. ‘ತರ್ಲಾ ದಲಾಲ್ ಕುರಿತು ಕೇಳಿದಾಗ ನನಗೆ ತುಂಬ ಆಸಕ್ತಿ ಮೂಡಿತು. ಒಳ್ಳೆಯ ಪಾತ್ರವಿದ್ದರೆ ಅದನ್ನು ನಾನು ಖಂಡಿತವಾಗಿ ಆಯ್ಕೆ ಮಾಡಿಕೊಳ್ಳುತೇನೆ. ಅದು ಜೀವನ ಚರಿತ್ರೆಯಾದರೂ ಸರಿ. ಜನಸಾಮಾನ್ಯರಿಗೆ ತರ್ಲಾ ರೀತಿಯ ಮಹಿಳೆಯರ ಪ್ರೇರಣೆ ತುಂಬಾ ಅಗತ್ಯ. ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಇಂದು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಸಾಮಾನ್ಯ ಕುಟುಂಬದ ತರ್ಲಾ ಎಂಬ ಮಹಿಳೆ ಕೂಡ ಅಡುಗೆ ಮಾಡುವುದರಿಂದಲೇ ವಿಶ್ವಾದ್ಯಂತ ಜನಪ್ರಿಯತೆ ಪಡೆದಿದ್ದು ಸಾಮಾನ್ಯದ ಕೆಲಸವಲ್ಲ’ ಎಂದು ಹುಮಾ ಖುರೇಷಿ ಹೇಳಿದ್ದಾರೆ.
ಇದನ್ನೂ ಓದಿ: ಬಟ್ಟೆಯಿಂದಾಗಿ ಟ್ರೋಲ್ಗೆ ಒಳಗಾದ ನಟಿ ಹುಮಾ ಖುರೇಷಿ: ನಿಮ್ಮ ದೇಹದ ಗಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸಿ ಎಂದ ನೆಟ್ಟಿಗರು
‘ತರ್ಲಾ ದಲಾಲ್ ಅವರು ಇದನ್ನು ಅಡುಗೆ ಮಾಡುವ ಕೆಲಸ ಎಂದು ಕೈಕಟ್ಟಿ ಕೂರಲಿಲ್ಲ. ಅದನ್ನೇ ಅವರು ಉದ್ಯಮವಾಗಿ ಮಾಡಿಕೊಂಡು ತುಂಬ ಮಹಿಳೆಯರಿಗೆ ಮಾದರಿಯಾದರು. ಅವರು ಬರೀ ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಖ್ಯಾತಿ ಪಡೆದುಕೊಂಡರು. ಅವರು ಬರೆದ ಅನೇಕ ಪುಸ್ತಕಗಳು ಸಹ ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಲಭ್ಯವಾಗಿವೆ’ ಎಂದಿದ್ದಾರೆ ಹುಮಾ ಖುರೇಷಿ. ‘ತರ್ಲಾ ಸಿನಿಮಾ ಮಹಿಳೆಯರಿಗೆ ಮಾತ್ರವಲ್ಲ. ಪುರುಷರು ಕೂಡ ಈ ಚಿತ್ರವನ್ನು ನೋಡಬೇಕು. ಈಗ ಅಡುಗೆ ಎಂಬುದು ಬರೀ ಮಹಿಳೆಯರಿಗಷ್ಟೇ ಸೀಮಿತವಲ್ಲ. ಗಂಡಸರು ಕುಡ ಚೆನ್ನಾಗಿ ಅಡುಗೆ ಮಾಡುತ್ತಾರೆ. ಮಹಿಳೆಯರು ಮಾತ್ರವಲ್ಲದೇ ಪುರುಷರು ಕೂಡ ಅಡುಗೆ ಕಲಿಯಬೇಕು’ ಎಂದು ಹುಮಾ ಖುರೇಷಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Viduthalai Part 1: ಜನ ಮೆಚ್ಚಿದ ‘ವಿಡುದಲೈ’ ಸಿನಿಮಾ ಈಗ ಕನ್ನಡದಲ್ಲೂ ಲಭ್ಯ; ಜೀ5 ಒಟಿಟಿ ಮೂಲಕ ಪ್ರಸಾರ
‘ಈ ಪಾತ್ರವನ್ನು ನಾನು ಮಾಡಿದ್ದು ತುಂಬ ಸಂತಸ ನೀಡಿದೆ. ನನಗೆ ವೈಯಕ್ತಿಕವಾಗಿ ಅಡುಗೆ ಮಾಡಲು ಬರುವುದಿಲ್ಲ. ಆದರೆ, ಬಗೆಬಗೆಯ ಖಾದ್ಯಗಳನ್ನು ಸವಿಯಲು ಇಷ್ಟ. ಅಷ್ಟೇ ಅಲ್ಲ, ದಕ್ಷಿಣ ಭಾರತದ ಮಸಾಲಾ ದೋಸೆಯೂ ಸೇರಿದಂತೆ ಅನೇಕ ರೀತಿಯ ಅಡುಗೆಗಳು ನನಗೆ ಅಚ್ಚುಮೆಚ್ಚು’ ಎಂದಿರುವ ಹುಮಾ ಖುರೇಷಿ ಅವರು ತಮ್ಮ ಫೇವರಿಟ್ ಆಹಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.