AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಸಾಕಪಟ್ನಂ’ ವೆಬ್ ಸೀರೀಸ್ ವಿಮರ್ಶೆ: ಸಮುದ್ರಖಣಿ, ಐಶ್ವರ್ಯಾ ರಾಜೇಶ್ ನಟನೆಯ ಸರಣಿ ಹೇಗಿದೆ?

Isakapatnam Review: ಸಮುದ್ರಖಣಿ ಮತ್ತು ಐಶ್ವರ್ಯಾ ರಾಜೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಇಸಾಕಪಟ್ನಂ' ತೆಲುಗು ವೆಬ್ ಸೀರೀಸ್ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಬಂದರು ಪಟ್ಟಣದ ಅಪರಾಧ ಜಗತ್ತು ಹಾಗೂ ರಾಜಕೀಯದ ಹಿನ್ನೆಲೆ ಹೊಂದಿರುವ ಈ ಕ್ರೈಮ್ ಥ್ರಿಲ್ಲರ್ ಸರಣಿಯು ಕಲಾವಿದರ ಬಲವಾದ ನಟನೆಯ ಹೊರತಾಗಿಯೂ, ಅತಿಯಾದ ಪಾತ್ರಗಳು ಮತ್ತು ದುರ್ಬಲ ನಿರೂಪಣೆಯಿಂದಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

'ಇಸಾಕಪಟ್ನಂ' ವೆಬ್ ಸೀರೀಸ್ ವಿಮರ್ಶೆ: ಸಮುದ್ರಖಣಿ, ಐಶ್ವರ್ಯಾ ರಾಜೇಶ್ ನಟನೆಯ ಸರಣಿ ಹೇಗಿದೆ?
ಇಸಾಕಪಟ್ಟಣಂ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 02, 2026 | 11:27 AM

Share

ಖ್ಯಾತ ನಟರಾದ ಸಮುದ್ರಖಣಿ ಮತ್ತು ಐಶ್ವರ್ಯಾ ರಾಜೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಇಸಾಕಪಟ್ನಂ’ (Isakapatnam) ತೆಲುಗು ವೆಬ್ ಸೀರೀಸ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಗ್ಯಾರಿ ಬಿಎಚ್ ನಿರ್ದೇಶನದ ಈ ಕ್ರೈಮ್ ಥ್ರಿಲ್ಲರ್ ಸರಣಿ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಸದ್ಯ ಈ ಸರಣಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಒಟಿಟಿ ಪ್ರೇಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಏನಿದು ಇಸಾಕಪಟ್ನಂ ಕಥೆ?

ಇಸಾಕಪಟ್ನಂ ಎನ್ನುವುದು ಅಪರಾಧ ಜಗತ್ತಿನ ಕಪಿಮುಷ್ಟಿಯಲ್ಲಿರುವ ಒಂದು ಬಂದರು ಪಟ್ಟಣವಾಗಿದೆ. ಈ ಇಡೀ ನಗರವನ್ನು ಕ್ರೂರ ಸ್ವಭಾವದ ನಾಯ್ಡು (ಸಮುದ್ರಖಣಿ) ತನ್ನ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರುತ್ತಾನೆ. ಇವನ ಮಗಳು ಭಾರತಿ (ಐಶ್ವರ್ಯಾ ರಾಜೇಶ್) ತಂದೆಗೆ ತದ್ವಿರುದ್ಧ ಸ್ವಭಾವದವಳಾಗಿರುತ್ತಾಳೆ. ತಂದೆ ಜನರನ್ನು ಭಯದಿಂದ ಆಳಿದರೆ, ಮಗಳು ಜನರಿಗೆ ಸಹಾಯ ಮಾಡಲು ಬಯಸುತ್ತಾಳೆ. ಮತ್ತೊಂದೆಡೆ ಕಾರ್ಪೊರೇಟರ್ ಆಗಬೇಕೆಂದು ಕನಸು ಕಾಣುವ ಆಟೋ ಡ್ರೈವರ್ ಪೆದ್ದಣ್ಣ (ನರೇಶ್ ಅಗಸ್ತ್ಯ) ಎಂಬ ಪಾತ್ರವಿದೆ. ಈ ನಗರದ ಜೆಟ್ಟಿ ಯಾರ್ಡ್ ಮತ್ತು ಆಟೋ ನಗರದಲ್ಲಿ ಗಲಾಟೆಗಳು ಆರಂಭವಾದಾಗ ಕಥೆ ಹೊಸ ತಿರುವು ಪಡೆದುಕೊಳ್ಳುತ್ತದೆ.

ಸೋಷಿಯಲ್ ಮೀಡಿಯಾ ರಿಪೋರ್ಟ್

ದುರ್ಬಲ ಚಿತ್ರಕಥೆ: ಕಾಗದದ ಮೇಲೆ ಈ ಕಥೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಪರದೆಯ ಮೇಲೆ ಮೂಡಿಬರುವಾಗ ಹಳೆಯ ಮತ್ತು ಅತಿಯಾಗಿ ಊಹಿಸಬಹುದಾದ ಹಾದಿ ಹಿಡಿದಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

ಟ್ವಿಸ್ಟ್ ಅಂಡ್ ಟರ್ನ್ಸ್: ಸರಣಿಯ ಆರಂಭದ ಎಪಿಸೋಡ್‌ಗಳು ತೀವ್ರ ನಿರಾಸೆ ಮೂಡಿಸುತ್ತವೆ. ಆದರೆ ಮಧ್ಯದಲ್ಲಿ ಬರುವ ಒಂದು ಪ್ರಮುಖ ಟ್ವಿಸ್ಟ್ ಕಥೆಗೆ ಸ್ವಲ್ಪ ವೇಗ ನೀಡುತ್ತದೆ.

ಪಾತ್ರಗಳ ಗೊಂದಲ: ಈ ವೆಬ್ ಸೀರೀಸ್‌ನಲ್ಲಿ ಅತಿಯಾದ ಪಾತ್ರಗಳಿವೆ. ಯಾರು ಯಾವಾಗ ಬರುತ್ತಾರೆ ಮತ್ತು ಸಾಯುತ್ತಾರೆ ಎಂಬ ಗೊಂದಲ ಪ್ರೇಕ್ಷಕರಲ್ಲಿ ಮೂಡುತ್ತದೆ. ಜನಪ್ರಿಯ ನಟ ಸುನಿಲ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿಲ್ಲ ಎಂಬ ಬೇಸರ ವ್ಯಕ್ತವಾಗಿದೆ.

ಅಭಿನಯ ಮಾತ್ರ ಸೂಪರ್: ಸರಣಿಯ ಕಥೆ ದುರ್ಬಲವಾಗಿದ್ದರೂ ನಟನೆಯ ವಿಷಯದಲ್ಲಿ ಎಲ್ಲರೂ ಗೆದ್ದಿದ್ದಾರೆ. ಸಮುದ್ರಖಣಿ ಮತ್ತು ಐಶ್ವರ್ಯಾ ರಾಜೇಶ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಬ್ಯಾನರ್ಜಿ ಮತ್ತು ಸುಧಾಕರ್ ಕೊಮಾಕುಲ ಅವರ ನಟನೆ ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯುತ್ತದೆ.

ಇದನ್ನೂ ಓದಿ: ‘ಸರ್ಕಾರಿ ಒಟಿಟಿ ಆರಂಭಿಸಿ’; ಸಿಎಂ ಡಿಕೆ ಶಿವಕುಮಾರ್ ಬಳಿ ಬೇಡಿಕೆ ಇಟ್ಟ ಚಲನಚಿತ್ರ ವಾಣಿಜ್ಯ ಮಂಡಳಿ

ಅಂತಿಮ ತೀರ್ಪು

ಮೊದಲ ಸೀಸನ್‌ನಲ್ಲಿ ಒಟ್ಟು 7 ಎಪಿಸೋಡ್‌ಗಳಿದ್ದು, ನಿರ್ದೇಶಕರು ಅಧಿಕಾರ ಮತ್ತು ರಾಜಕೀಯದ ಕರಾಳ ಮುಖವನ್ನು ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ದುರ್ಬಲ ನಿರೂಪಣೆಯಿಂದಾಗಿ ಸರಣಿ ಅಂದುಕೊಂಡ ಮಟ್ಟಿಗೆ ಪ್ರಭಾವ ಬೀರಲು ವಿಫಲವಾಗಿದೆ. ಕೇವಲ ಕ್ರೈಮ್ ಥ್ರಿಲ್ಲರ್ ಇಷ್ಟಪಡುವವರು ಹಾಗೂ ನಟ-ನಟಿಯರ ಅಭಿನಯಕ್ಕಾಗಿ ಇದನ್ನು ಒಮ್ಮೆ ವೀಕ್ಷಿಸಬಹುದು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ರಿಪೋರ್ಟ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:26 am, Thu, 2 July 26

Follow Us