ಸಾರ್ವಜನಿಕವಾಗಿ ಕಳಚಿತು ಗೌನ್ ಸ್ಟ್ರಾಪ್; ಮುಜುಗರಕ್ಕೆ ಒಳಗಾದ ನಟಿ
ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ನಲ್ಲಿ ಜಿಯಾ ಶಂಕರ್ ಭಾಗಿ ಆಗಿದ್ದರು. ಅವರು ಗೌನ್ ಧರಿಸಿ ಮಿಂಚುತ್ತಿದ್ದರು. ಅವರ ಫೋಟೋ ಸೆರೆಹಿಡಿಯಲು ಪಾಪರಾಜಿಗಳ ದಂಡೇ ಇತ್ತು. ಈ ಸಮಯಕ್ಕೆ ಸರಿಯಾಗಿ ಅವರ ಗೌನ್ನ ಸ್ಟ್ರಾಪ್ ಕಳಚಿ ಬಿದ್ದಿದೆ.
ಧರಿಸುವ ಚಿತ್ರ ವಿಚಿತ್ರ ಬಟ್ಟೆಯಿಂದ ಕೆಲವೊಮ್ಮೆ ಸೆಲೆಬ್ರಿಟಿಗಳು ಅವಮಾನ ಎದುರಿಸುವ ಪರಿಸ್ಥಿತಿ ಬಂದೊದಗುತ್ತದೆ. ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ ಆಗುವ ಎಡವಟ್ಟಿನಿಂದ ತೊಂದರೆಗೆ ಒಳಗಾಗುತ್ತಾರೆ. ಈ ರೀತಿ ಅವಮಾನ ಎದುರಿಸಿದ ಅನೇಕರು ಇದ್ದಾರೆ. ಈಗ ‘ಬಿಗ್ ಬಾಸ್ ಹಿಂದಿ ಒಟಿಟಿ 2’ (Bigg Boss OTT) ಸ್ಪರ್ಧಿ ಜಿಯಾ ಶಂಕರ್ಗೂ ಹಾಗೆಯೇ ಆಗಿದೆ. ಅವರಿಗೆ ಮುಜುಗರ ಆದರೂ ಅದನ್ನು ತೋರಿಸಿಕೊಳ್ಳದೆ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಜಿಯೋ ಮಾಮಿ ಫಿಲ್ಮ್ ಫೆಸ್ಟಿವಲ್ನಲ್ಲಿ ಜಿಯಾ ಶಂಕರ್ ಭಾಗಿ ಆಗಿದ್ದರು. ಅವರು ಗೌನ್ ಧರಿಸಿ ಮಿಂಚುತ್ತಿದ್ದರು. ಅವರ ಫೋಟೋ ಸೆರೆಹಿಡಿಯಲು ಪಾಪರಾಜಿಗಳ ದಂಡೇ ಇತ್ತು. ಈ ಸಮಯಕ್ಕೆ ಸರಿಯಾಗಿ ಅವರ ಗೌನ್ನ ಸ್ಟ್ರಾಪ್ ಕಳಚಿ ಬಿದ್ದಿದೆ. ಈ ವೇಳೆ ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾರೆ.
ಸ್ಟ್ರಾಪ್ ಕಳಚಿದ ಬೆನ್ನಲ್ಲೇ ಅವರಿಗೆ ಮುಜುಗರ ಆಗಿದೆ. ಆದರೂ ಅವರು ಪರಿಸ್ಥಿತಿಯನ್ನು ನಿಭಾಯಿಸಿದರು. ಮುಜುಗುರ ಪಟ್ಟುಕೊಳ್ಳದೆ ಸ್ಟ್ರಾಪ್ನ ಮೇಲೆ ಹಾಕಿ ಮುನ್ನಡೆದರು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ‘ನಿಮ್ಮನ್ನು ನೀವು ಹೀಗೆ ಮುನ್ನಡೆಸಿಕೊಂಡು ಹೋಗಬೇಕು’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ‘ಅವರು ಎಷ್ಟು ಪ್ರಬುಧ್ಧವಾಗಿ ಪರಿಸ್ಥಿತಿ ನಿಭಾಯಿಸಿದರು. ಈ ರೀತಿಯ ಪರಿಸ್ಥಿತಿ ಎದುರಾಗಿದ್ದರೆ ನನ್ನ ಬಳಿ ಅದನ್ನು ನಿಭಾಯಿಸಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
2017ರಲ್ಲಿ ಪ್ರಸಾರ ಕಂಡ ‘ಮೇರಿ ಹಾನಿಕಾರಕ್ ಬೀವಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಜಿಯಾ. ಇದಲ್ಲದೆ ‘ಕಾಟೇಲಾಲ್ & ಸನ್ಸ್ ’ ಹಾಗೂ ‘ಪಿಶಾಚಿನಿ’ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಜಿಯಾ ಅವರು ಮರಾಠಿ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಮರಾಠಿಯ ‘ವೇದ್’ ಸಿನಿಮಾ ಮೂಲಕ ಸಾಕಷ್ಟು ಜಮಪ್ರಿಯತೆ ಪಡೆದರು. ‘ಬಿಗ್ ಬಾಸ್ ಸೀಸನ್ 2’ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ