ನಟಿ ಕಂಗನಾ ರಣಾವತ್ ಅವರು ಭಾರಿ ನಿರೀಕ್ಷೆಯೊಂದಿಗೆ ‘ತಲೈವಿ’ ಸಿನಿಮಾ ಬಿಡುಗಡೆ ಮಾಡಿದ್ದರು. ಸೆ.10ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಚಿತ್ರಮಂದಿರಲ್ಲಿ ‘ತಲೈವಿ’ ಯಶಸ್ಸು ಕಾಣಲಿಲ್ಲ. ಆದರೆ ಈಗ ಓಟಿಟಿ ವೇದಿಕೆಗೆ ಈ ಸಿನಿಮಾ ಕಾಲಿಟ್ಟಿದೆ. ನೆಟ್ಫ್ಲಿಕ್ಸ್ ಮೂಲಕ ಇದರ ಹಿಂದಿ ವರ್ಷನ್ ಬಿಡುಗಡೆ ಆಗಿದೆ. ಸೆ.25ರಿಂದ ಪ್ರಸಾರ ಆರಂಭಿಸಿರುವ ಈ ಚಿತ್ರ ಆನ್ಲೈನ್ನಲ್ಲಾದರೂ ಗೆಲ್ಲುತ್ತಾ ಎಂಬ ಕೌತುಕದ ಪ್ರಶ್ನೆ ಈಗ ಮೂಡಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲಿ ಯಶಸ್ಸು ಕಂಡವರು ಜಯಲಲಿತಾ. ಆದರೆ ಅವರ ಬದುಕಿನ ಕಥೆ ಹೇಳುವ ‘ತಲೈವಿ’ ಚಿತ್ರಕ್ಕೆ ಥಿಯೇಟರ್ನಲ್ಲಿ ಯಶಸ್ಸು ಸಿಕ್ಕಿಲ್ಲ. ವಿಮರ್ಶಕರು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರೂ ಕೂಡ ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಲು ಹೆಚ್ಚಿನ ಪ್ರೇಕ್ಷಕರು ಆಸಕ್ತಿ ತೋರಿಸಿಲ್ಲ. ಹಾಗಾಗಿ ಬಿಡುಗಡೆಯಾಗಿ ಕೇವಲ 15ಕ್ಕೆ ಈ ಚಿತ್ರ ಈಗ ನೆಟ್ಫ್ಲಿಕ್ಸ್ ಅಂಗಳಕ್ಕೆ ಬಂದಿದೆ.
‘ತಲೈವಿ’ ಚಿತ್ರಕ್ಕೆ ಎ.ಎಲ್. ವಿಜಯ್ ನಿರ್ದೇಶನವಿದೆ. ಅಚ್ಚರಿ ವಿಚಾರ ಏನೆಂದರೆ ಈಗಾಗಲೇ ‘ತಲೈವಿ 2’ ಸಿನಿಮಾ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಆದರೆ ಕಂಗನಾ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಚಿತ್ರದ ಸಹ ಬರಹಗಾರ ರಜತ್ ಅರೋರಾ ಅವರು ಈ ಬಗ್ಗೆ ಇತ್ತೀಚೆಗೆ ಬಾಯಿ ಬಿಟ್ಟಿದ್ದಾರೆ.
‘ಜಯಲಲಿತಾ ಸಿಎಂ ಆದ ನಂತರ ಏನಾಯಿತು ಎಂದು ಸಿನಿಮಾದಲ್ಲಿ ತೋರಿಸಿಯೇ ಇಲ್ಲ ಅಂತ ಅನೇಕರು ಹೇಳುತ್ತಿದ್ದಾರೆ. ಹಾಗೆ ತೋರಿಸೋಕೆ ಸಾಕಷ್ಟು ವಿಷಯಗಳಿವೆ ಜಯಲಲಿತಾ ರಾಜಕೀಯ ಬದುಕು ತುಂಬಾನೇ ದೀರ್ಘವಾಗಿದೆ. ಇದನ್ನು 15 ನಿಮಿಷಗಳಲ್ಲಿ ಹೇಳಿದರೆ ನಾವು ಅದಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ ಎಂದು ನಮಗನಿಸಿತು. ಹೀಗಾಗಿ, ‘ತಲೈವಿ ಪಾರ್ಟ್ 2’ ತರೋಕೆ ಸಿದ್ಧತೆ ನಡೆದಿದೆ. ನಾವು ಕಂಗನಾ ಜತೆಗೆ ಮಾತುಕತೆ ನಡೆಸಿದ್ದೇವೆ’ ಎಂದು ರಜತ್ ಅರೋರಾ ಹೇಳಿದ್ದಾರೆ.
ಇದನ್ನೂ ಓದಿ:
ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್ ಚಿತ್ರ ಗಳಿಸಿದ್ದೆಷ್ಟು?
ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್ ಖಾನ್