ಲೈಂಗಿಕ ಜೀವನ, ನೆಪೋಟಿಸಂ ವಿಚಾರದಲ್ಲಿ ತಮ್ಮನ್ನೇ ಟ್ರೋಲ್ ಮಾಡಿಕೊಂಡ ಕರಣ್ ಜೋಹರ್

| Updated By: ಮದನ್​ ಕುಮಾರ್​

Updated on: Oct 04, 2023 | 3:32 PM

Koffee with Karan Season 8: ‘ಕಾಫಿ ವಿತ್ ಕರಣ್’ ಈಗಾಗಲೇ 7 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಇದು ಕರಣ್ ಜೋಹರ್ ಅವರದ್ದೇ ಐಡಿಯಾ. ಈ ಶೋಗೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಇದರಲ್ಲಿ ಬಹುತೇಕರು ಸ್ಟಾರ್ಸ್​ ಹಾಗೂ ಸ್ಟಾರ್​ ಕಿಡ್​​ಗಳೇ ಇದ್ದಾರೆ. ಇಲ್ಲಿ ಸಾಕಷ್ಟು ವಿವಾದಗಳು ಕೂಡ ಆಗಿವೆ. ಈಗ ಈ ಶೋನ ಹೊಸ ಸೀಸನ್ ಪ್ರಸಾರಕ್ಕೆ ಸಜ್ಜಾಗಿದೆ.

ಲೈಂಗಿಕ ಜೀವನ, ನೆಪೋಟಿಸಂ ವಿಚಾರದಲ್ಲಿ ತಮ್ಮನ್ನೇ ಟ್ರೋಲ್ ಮಾಡಿಕೊಂಡ ಕರಣ್ ಜೋಹರ್
ಕರಣ್​ ಜೋಹರ್​
Follow us on

ಕರಣ್ ಜೋಹರ್ (Karan Johar) ಅವರದ್ದು ಭಿನ್ನ ವ್ಯಕ್ತಿತ್ವ. ಅವರ ಬಗ್ಗೆ ಹುಟ್ಟಿಕೊಳ್ಳುವ ಟ್ರೋಲ್​ಗಳು ಒಂದೆರಡಲ್ಲ. ಇದಕ್ಕೆಲ್ಲ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ‘ಧರ್ಮ ಪ್ರೊಡಕ್ಷನ್’ ಮೂಲಕ ಹಲವು ಸೂಪರ್ ಸ್ಟಾರ್ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಹಲವು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ಆ್ಯಂಕರಿಂಗ್​ನಲ್ಲೂ ಅವರಿಗೆ ಸಾಕಷ್ಟು ಆಸಕ್ತಿ ಇದೆ. ಕಾಫಿ ವಿತ್ ಕರಣ್’ (Koffee with Karan) ಶೋನ ಎಂಟನೇ ಸೀಸನ್​ ಬರೋಕೆ ರೆಡಿ ಆಗಿದೆ. ಇದರ ಪ್ರೋಮೋ ಹಂಚಿಕೊಂಡಿರುವ ಅವರು ತಮ್ಮನ್ನೇ ತಾವು ಟ್ರೋಲ್ (Troll) ಮಾಡಿಕೊಂಡಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ.

‘ಕಾಫಿ ವಿತ್ ಕರಣ್’ ಈಗಾಗಲೇ 7 ಸೀಸನ್​ಗಳನ್ನು ಪೂರ್ಣಗೊಳಿಸಿದೆ. ಇದು ಕರಣ್ ಜೋಹರ್ ಅವರದ್ದೇ ಐಡಿಯಾ. ಈ ಶೋಗೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಇದರಲ್ಲಿ ಬಹುತೇಕರು ಸ್ಟಾರ್ಸ್​ ಹಾಗೂ ಸ್ಟಾರ್​ ಕಿಡ್​​ಗಳೇ ಇದ್ದಾರೆ. ಇಲ್ಲಿ ಸಾಕಷ್ಟು ವಿವಾದಗಳು ಕೂಡ ಆಗಿವೆ. ಈಗ ಈ ಶೋನ ಹೊಸ ಸೀಸನ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಪ್ರಸಾರ ಕಾಣಲಿದೆ. ಇದರ ಪ್ರೋಮೋದಲ್ಲಿ ಕರಣ್ ಅವರು ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ.

‘ಕಾಫಿ ವಿತ್ ಕರಣ್ ಸೀಸನ್ 8’ನ ಹೊಸ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಕರಣ್ ತಮ್ಮನ್ನು ತಾವು ಟೀಕೆ ಮಾಡಿಕೊಂಡಿದ್ದಾರೆ. ಈ ಶೋನಲ್ಲಿ 20 ವರ್ಷದ ನಟಿಗೂ ಸೆಕ್ಸ್ ಜೀವನದ ಬಗ್ಗೆ ಕೇಳಲಾಗುತ್ತದೆ. ಇದರಲ್ಲಿ ಬರುವ ಬಹುತೇಕರು ಸೆಲೆಬ್ರಿಟಿ ಮಕ್ಕಳೇ ಎನ್ನುವ ಆರೋಪ ಇದೆ. ‘ಇದು ಸಪ್ಪೆ ಕಾಫಿ’ ಎಂದು ಅನೇಕರು ಟ್ರೋಲ್ ಮಾಡಿದ್ದೂ ಇದೆ. ಈ ವಿಚಾರಗಳನ್ನು ಪ್ರೋಮೋದಲ್ಲಿ ಬಳಕೆ ಮಾಡಲಾಗಿದೆ.

ಆರು ಸೀಸನ್​ಗಳವರೆಗೆ ‘ಕಾಫಿ ವಿತ್ ಕರಣ್’ ಶೋ ಟಿವಿಯಲ್ಲಿ ಪ್ರಸಾರ ಕಾಣುತ್ತಿತ್ತು. ಕಳೆದ ಸೀಸನ್​ನಿಂದ ಈ ಶೋ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಶೋನ ರಣಬೀರ್ ಕಪೂರ್ ಅವರು ಟೀಕೆ ಮಾಡಿದ್ದರು. ‘ನಮ್ಮಿಂದ ಅವರು ಜನಪ್ರಿಯತೆ ಪಡೆಯುತ್ತಾರೆ. ಅವರು ನೀಡುವ ಗಿಫ್ಟ್ ಹ್ಯಾಂಪರ್​ನಲ್ಲಿ ಏನೂ ಇರುವುದಿಲ್ಲ’ ಎಂದು ರಣಬೀರ್ ಸಿಟ್ಟಿನಿಂದ ಹೇಳಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.

‘ಕಾಫಿ ವಿತ್​ ಕರಣ್​’ ಶೋನಲ್ಲಿ ರಿಷಬ್​ ಶೆಟ್ಟಿ, ಯಶ್​? ಬಾಲಿವುಡ್​ ಅಂಗಳದಲ್ಲಿ ಕನ್ನಡಿಗರ ಹವಾ

‘ಕಾಫಿ ವಿತ್ ಕರಣ್’ ಶೋ ಹಲವು ಸೆಲೆಬ್ರಿಟಿಗಳ ವೃತ್ತಿ ಬದುಕಿಗೆ ಹೊಡೆತ ನೀಡಿದೆ. ಇಲ್ಲಿ ಮಾಡಿಕೊಂಡ ವಿವಾದಗಳಿಂದ ತೊಂದರೆ ಅನುಭವಿಸಿದ ಅನೇಕರಿದ್ದಾರೆ. ಈ ಕಾರಣಕ್ಕೆ ಅನೇಕರು ಈ ಶೋಗೆ ಬರೋಕೆ ಹೆದರುತ್ತಾರೆ. ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಈ ಶೋನಿಂದ ವಿವಾದ ಮಾಡಿಕೊಂಡಿದ್ದರು. ಅಕ್ಟೋಬರ್ 26ರಂದು ‘ಕಾಫಿ ವಿತ್ ಕರಣ್ ಸೀಸನ್ 8’ ಪ್ರಸಾರ ಕಾಣುವ ನಿರೀಕ್ಷೆ ಇದೆ. ಸದ್ಯ ಕರಣ್ ಜೋಹರ್ ಅವರು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಮೂಲಕ ಯಶಸ್ಸು ಕಂಡಿದ್ದಾರೆ. ಹಲವು ವರ್ಷಗಳ ಬಳಿಕ ಅವರು ನಿರ್ದೇಶನಕ್ಕೆ ಮರಳಿದ್ದರು. ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್​ ನಟನೆಯ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.